SHIVAMOGGA LIVE NEWS | 20 NOVEMBER 2023
KSRTC : ಶಕ್ತಿ ಯೋಜನೆ ಜಾರಿಗೊಳಿಸಿ ದೇಶದ ಗಮನ ಸೆಳೆದ ಕೆಎಸ್‌ಆರ್‌ಟಿಸಿ ಸಂಸ್ಥೆ ಈಗ ಕಾರ್ಗೊ ಕ್ಷೇತ್ರಕ್ಕೆ ಧುಮುಕುತ್ತಿದೆ. ಇದಕ್ಕಾಗಿ ಮೊದಲ ಹಂತದಲ್ಲಿ 20 ಲಾರಿ ಖರೀದಿಸಿದೆ.
ಏನಿದು ನಮ್ಮ ಕಾರ್ಗೊ?
ಕೆಎಸ್‌ಆರ್‌ಟಿಸಿ ವತಿಯಿಂದ ಪಾರ್ಸೆಲ್ ಮತ್ತು ಕೊರಿಯರ್ ಸೇವೆಗಳನ್ನು ಒದಗಿಸಲಾಗುತ್ತಿದೆ. ಇದಕ್ಕೆ ನಮ್ಮ ಕಾರ್ಗೊ ಎಂದು ಹೆಸರಿಡಲಾಗಿದೆ. 2021ರಿಂದ ಈ ವಿಭಾಗ ಆರಂಭಿಸಲಾಗಿದೆ. ಕಾರ್ಗೊ ವಿಭಾಗವನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ 20 ಲಾರಿಗಳನ್ನು ಖರೀದಿಸಿದೆ.
ಇದನ್ನೂ ಓದಿ- ಇನ್ಸ್‌ಪೆಕ್ಟರ್‌ಗಳ ವರ್ಗಾವಣೆ, ಜಯನಗರಕ್ಕೆ ಸಿದ್ದೇಗೌಡ, ರಿಲೀವ್ ಆಗ್ತಾರಾ ಅಂಜನ್ ಕುಮಾರ್?
ಪ್ರತಿ ಲಾರಿಗೆ 17 ಲಕ್ಷ ರೂ.
ಪ್ರತಿ ಲಾರಿಗೆ 17 ಲಕ್ಷ ರೂ. ನೀಡಿ ಖರೀದಿಸಲಾಗಿದ್ದು 6 ಟನ್ ತೂಕದ ಪಾರ್ಸಲ್ ಹೊತ್ತೊಯ್ಯಲಿದೆ. ಕೃಷಿ, ಜವಳಿ, ಆಟೊಮೊಬೈಲ್ ಮತ್ತು ಫಾರ್ಮಸಿಟಿಕಲ್ ಕ್ಷೇತ್ರಗಳನ್ನು ಗಮನದಲ್ಲಿ ಇರಿಸಿಕೊಂಡು ನಮ್ಮ ಕಾರ್ಗೊ ವಿಭಾಗ ವಿಸ್ತರಿಸಲಾಗುತ್ತಿದೆ. ಈ ವಿಭಾಗದ ಮೂಲಕ ವಾರ್ಷಿಕ 100 ಕೋಟಿ ರೂ. ಆದಾಯ ಗಳಿಸುವ ಗುರಿ ಹೊಂದಲಾಗಿದೆ.
ಪಾರ್ಸಲ್, ಕೊರಿಯರ್ ಸೇವೆ ಇದೆ
ಕೆಎಸ್‌ಆರ್‌ಟಿಸಿ ರಾಜ್ಯದ ಎಲ್ಲ ಜಿಲ್ಲೆ ಮತ್ತು ತಾಲೂಕುಗಳ ನೆಟ್‌ವರ್ಕ್ ಹೊಂದಿದೆ. ಇದನ್ನು ಬಳಸಿಕೊಂಡು ನಮ್ಮ ಕಾರ್ಗೊ ಸೇವೆ ಆರಂಭಿಸಲಾಗಿದೆ. ಸದ್ಯ ಹೊರಗುತ್ತಿಗೆ ನೀಡಿದ್ದು ಇದರಿಂದ ಸಂಸ್ಥೆಗೆ ಪ್ರತಿ ತಿಂಗಳು 1.10 ಕೋಟಿ ರೂ. ಆದಾಯವಿದೆ. ಇದನ್ನು ಮತ್ತಷ್ಟು ವಿಸ್ತರಿಸುವುದು ಸಾರಿಗೆ ನಿಗಮದ ಗುರಿ. ಹಾಗಾಗಿ ಲಾರಿಗಳನ್ನು ಖರೀದಿಸಲಾಗಿದೆ.
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200