ಪರೀಕ್ಷೆಗು ಮೊದಲೇ ವಾಟ್ಸಪ್‌ನಲ್ಲಿ ಹರಿದಾಡಿದ ಪ್ರಶ್ನೆ ಪತ್ರಿಕೆ, ಶಿವಮೊಗ್ಗದಲ್ಲಿ ಕೇಸ್‌

 ಶಿವಮೊಗ್ಗ  LIVE 

ಶಿವಮೊಗ್ಗ: ದ್ವಿತೀಯ ಪಿಯುಸಿ ರಾಜ್ಯಮಟ್ಟದ ಪೂರ್ವ ಸಿದ್ಧತಾ ಪರೀಕ್ಷೆಯ ಗಣಿತ ವಿಷಯದ ಪ್ರಶ್ನೆ ಪತ್ರಿಕೆಯು, ಪರೀಕ್ಷೆಗೆ ಮುನ್ನವೇ ಸೋರಿಕೆಯಾಗಿದೆ (question paper leaked). ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಚಂದ್ರಪ್ಪ ಗುಂಡಪಲ್ಲೆ ಕೋಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.‌

ಇದನ್ನೂ ಓದಿ » ಸಂಕ್ರಾಂತಿಗೆ ಯಶವಂತಪುರ – ತಾಳಗುಪ್ಪ ಮಧ್ಯೆ ಎರಡು ವಿಶೇಷ ರೈಲು, ಯಾವ್ಯಾವ ದಿನ? ಟೈಮಿಂಗ್‌ ಏನು?

ಪರೀಕ್ಷೆಗು ಮೊದಲೆ ವಾಟ್ಸಪ್‌ನಲ್ಲಿ ಪ್ರಶ್ನೆಪತ್ರಿಕೆ

ರಾಜ್ಯಾದ್ಯಂತ ದ್ವಿತೀಯ ಪಿಯುಸಿಯ ಮೊದಲನೇ ಪೂರ್ವ ಸಿದ್ಧತಾ ಪರೀಕ್ಷೆಗಳು ಜನವರಿ 2 ರಿಂದ ಆರಂಭವಾಗಿದೆ. ಜನವರಿ 6 ರಂದು ಗಣಿತಶಾಸ್ತ್ರ ಪರೀಕ್ಷೆ ನಿಗದಿಯಾಗಿತ್ತು. ಆದರೆ ಪರೀಕ್ಷೆ ಆರಂಭವಾಗುವ ಮೊದಲೇ ಪ್ರಶ್ನೆ ಪತ್ರಿಕೆಯು ಸೋರಿಕೆಯಾಗಿದೆ. ತುಮಕೂರು ಜಿಲ್ಲೆಯ ಡಿಡಿಪಿಯು ಅವರು ಶಿವಮೊಗ್ಗ ಡಿಡಿಪಿಯು ಅವರಿಗೆ ವಾಟ್ಸಪ್‌ ಮೂಲಕ ಪ್ರಶ್ನೆ ಪತ್ರಿಕೆ ಕಳುಹಿಸಿ ಸೋರಿಕೆ ಆಗಿರುವ ಶಂಕೆ ವ್ಯಕ್ತಪಡಿಸಿದ್ದರು ಎಂದು ದೂರಿನಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ » ಶಿವಮೊಗ್ಗದ ಠಾಣೆಯಲ್ಲೇ ನೇಣು ಬಿಗಿದುಕೊಂಡ ಪೊಲೀಸ್‌ ಸಿಬ್ಬಂದಿ

ಪರಿಶೀಲನೆ ಬಳಿಕ ದೂರು ಪರೀಕ್ಷಾ ಕೇಂದ್ರಗಳಲ್ಲಿ ಹಂಚಿಕೆಯಾದ ಪ್ರಶ್ನೆ ಪತ್ರಿಕೆ ಮತ್ತು ಸೋರಿಕೆಯಾದ ಮಾಹಿತಿ ಎರಡೂ ಒಂದೇ ಆಗಿರುವುದು ದೃಢಪಟ್ಟಿದೆ. ಕೃತ್ಯ ಎಸಗಿದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಡಿಡಿಪಿಯು ಚಂದ್ರಪ್ಪ ಗುಂಡಪಲ್ಲೆ ದೂರು ನೀಡಿದ್ದಾರೆ. ಎಫ್‌ಐಆರ್‌ ದಾಖಲಾಗಿದ್ದು ತನಿಖೆ ನಡೆಯುತ್ತಿದೆ.

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment