ಶಿವಮೊಗ್ಗ LIVE

SHIVAMOGGA LIVE NEWS | 21 NOVEMBER 2022
ಅನುಮಾನಾಸ್ಪದ ವರ್ತನೆ, ವೈದ್ಯಕೀಯ ಪರೀಕ್ಷೆ ಬಳಿಕ ‘ದೇವ್ರು’ ಅರೆಸ್ಟ್ | CRIME NEWS
SHIMOGA : ಪೊಲೀಸ್ ಗಸ್ತು ವೇಳೆ ನ್ಯೂ ಮಂಡ್ಲಿ ಸರ್ಕಲ್ (NEW MANDLI) ಬಳಿ ಯುವಕನೊಬ್ಬ
ಅಮಲಿನಲ್ಲಿ ಅನುಮಾನಾಸ್ಪದವಾಗಿ ವರ್ತನೆ ಮಾಡುತ್ತಿದ್ದ. ಅತನ ವಿಚಾರಣೆ ವೇಳೆ ಗಾಂಜಾ ಸೇವನೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಮೆಗ್ಗಾನ್ ಆಸ್ಪತ್ರೆಯಲ್ಲಿ (Mc Gann Hospital) ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದಾಗ ಗಾಂಜಾ (Ganja) ಸೇವನೆ ಮಾಡಿರುವುದು ದೃಢವಾಗಿದೆ. ಈ ಹಿನ್ನೆಲೆ ಆತನನ್ನು ದೊಡ್ಡಪೇಟೆ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ನ್ಯೂ ಮಂಡ್ಲಿ ನಿವಾಸಿ ಪುನಿತ್ ಕುಮಾರ್ ಅಲಿಯಾಸ್ ದೇವ್ರು ಎಂದು ಗುರುತಿಸಲಾಗಿದೆ. NDPS ಕಾಯ್ದೆ ಅಡಿ ಪ್ರಕರಣ ದಾಖಲಾಗಿದೆ.
ಬೈಕ್ ಅಡ್ಡಗಟ್ಟಿ ಬೆನ್ನಿಗೆ ಚಾಕು ಹಾಕಿದ, ಕೆಳಗೆ ಬಿದ್ದಾಗ ಎದೆ ಚಾಕು ಹಾಕಲು ಯತ್ನ | CRIME NEWS
SHIMOGA | ಬೈಕಿನಲ್ಲಿ ತೆರಳುತ್ತಿದ್ದ ವ್ಯಕ್ತಿಯನ್ನು ಅಡ್ಡಗಟ್ಟಿ ಚಾಕುವಿನಿಂದ ಹಲ್ಲೆ ನಡೆಸಲಾಗಿದೆ.
ಗಾಯಗೊಂಡಿದ್ದ ಟ್ಯಾಂಕ್ ಮೊಹಲ್ಲಾ ನಿವಾಸಿ ಬಷೀರ್ ಖಾನ್ ಅವರನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಹಳೆ ದ್ವೇಷದ ಹಿನ್ನೆಲೆ ಅದೆ ಬಡಾವಣೆಯ ಮೊಹಮ್ಮದ್ ಜಾಫರ್ ಸಾದಿಕ್ ಅಲಿಯಾಸ್ ಬಾಷಿಗಂಡ ಎಂಬಾತ ಚಾಕುವಿನಿಂದ ಹಲ್ಲೆ ನಡೆಸಿದ್ದಾನೆ. ಟ್ಯಾಂಕ್ ಮೊಹಲ್ಲಾದಲ್ಲಿ ಘಟನೆ ಸಂಭವಿಸಿದೆ.

ಬೈಕ್ ಅಡ್ಡಗಟ್ಟಿದ ಮೊಹಮ್ಮದ್ ಜಾಫರ್ ಸಾದಿಕ್, ಬಷಿರ್ ಖಾನ್ ಅವರ ಬೆನ್ನಿಗೆ ಚಾಕು ಹಾಕಿದ್ದಾನೆ. ಕೆಳಗೆ ಬಿದ್ದಾಗ ಎದೆಗೆ ಚಾಕುವಿನಿಂದ ಹಲ್ಲೆಗೆ ಮುಂದಾಗಿದ್ದಾನೆ. ಈ ವೇಳೆ ಸ್ಥಳೀಯರು ಜಗಳ ಬಿಡಿಸಿದ್ದಾರೆ. ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರವೀಂದ್ರ ನಗರದಲ್ಲಿ ದರೋಡೆಗೆ ಹೊಂಚು ಹಾಕಿದ್ದ ಗ್ಯಾಂಗ್ ಮೇಲೆ ಪೊಲೀಸ್ ದಾಳಿ | CRIME NEWS
SHIMOGA | ರವೀಂದ್ರ ನಗರದ ಪಾರ್ಕ್ ಬಳಿ ದರೋಡೆಗೆ ಹೊಂಚು ಹಾಕಿದ್ದ ಗ್ಯಾಂಗ್ ಮೇಲೆ
ಪೊಲೀಸರು ದಾಳಿ ನಡೆಸಿದ್ದಾರೆ. ಘಟನೆಯಲ್ಲಿ ಐವರನ್ನು ಬಂಧಿಸಲಾಗಿದ್ದು, ಮಾರಕಾಸ್ತ್ರಗಳನ್ನು ವಶಕ್ಕೆ ಪಡೆಯಲಾಗಿದೆ.
ಖಚಿತ ಮಾಹಿತಿ ಮೇರೆಗೆ ಜಯನಗರ ಠಾಣೆ ಇನ್ಸ್ ಪೆಕ್ಟರ್ ಮಾದಪ್ಪ ನೇತೃತ್ವದಲ್ಲಿ ದಾಳಿ ನಡೆಸಿದ ಪೊಲೀಸರು, 5 ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರನ್ನು ವಸಂತ ಕುಮಾರ್, ರಾಜು, ಗೋವಿಂದ, ಅಭಿಲಾಷ್, ಸಚಿನ್ ಎಂದು ಗುರುತಿಸಲಾಗಿದೆ. ಇವರಿಂದ ಖಾರದ ಪುಡಿ, ಎರಡು ಚಾಕು, ಒಂದು ರಾಡ್, ದೊಣ್ಣೆ, ಬೈಕ್ ವಶಕ್ಕೆ ಪಡೆಯಲಾಗಿದೆ. ಜಯನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.
ALSO READ | ರಾತ್ರೋರಾತ್ರಿ ಮೆಗ್ಗಾನ್ ಆಸ್ಪತ್ರೆ ಮುಂಭಾಗ ವೈದ್ಯರು, ಸಿಬ್ಬಂದಿಯಿಂದ ದಿಢೀರ್ ಪ್ರತಿಭಟನೆ

LATEST NEWS
- BREAKING NEWS – ತೀರ್ಥಹಳ್ಳಿಯಲ್ಲಿ ಭೀಕರ ಅಪಘಾತ

- ಕೆಂಚನಾಲ ಮಾರಿಕಾಂಬ ಜಾತ್ರೆ, ರಾಜ್ಯದ ಎಲ್ಲೆಡೆಗಿಂತಲು ವಿಭಿನ್ನ, ಹೇಗಿರುತ್ತೆ ಮಹೋತ್ಸವ?

- ಒಂದು ಲಕ್ಷದ ಸನಿಹಕ್ಕೆ ಅಡಿಕೆ ರೇಟ್ | 13 ಜನವರಿ 2026 | ಇವತ್ತಿನ ಅಡಿಕೆ ಧಾರಣೆ

- ಶಬರಿಮಲೈ ಸಮೀಪ ಶಿವಮೊಗ್ಗ, ಭದ್ರಾವತಿ ಮಾಲಾಧಾರಿಗಳಿಂದ ದಿಢೀರ್ ಪ್ರತಿಭಟನೆ, ಕಾರಣವೇನು?
- ಶಿವಮೊಗ್ಗ ಜಿಲ್ಲಾಧಿಕಾರಿಗೆ ಸೈಬರ್ ವಂಚಕರ ಕಾಟ, ಆಗಿದ್ದೇನು? ಪ್ರಕಟಣೆಯಲ್ಲಿ ಡಿಸಿ ಹೇಳಿದ್ದೇನು?

About The Editor
ನಿತಿನ್ ಆರ್.ಕೈದೊಟ್ಲು


CLICK & JOIN – SHIVAMOGGA LIVE COMMUNITY


