ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE | 15 JUNE 2023
SHIMOGA : ವಿಮಾನ ನಿಲ್ದಾಣದಿಂದ (Airport) ಬೆಂಗಳೂರಿಗೆ ವಿಮಾನ ಹಾರಾಟಕ್ಕೆ ಕೊನೆಗು ದಿನಾಂಕ ನಿಗದಿಯಾಗಿದೆ. ಈ ಕುರಿತು ಶಿವಮೊಗ್ಗದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಸಂಸದ ಬಿ.ವೈ.ರಾಘವೇಂದ್ರ ಮೂರು ಪ್ರಮುಖ ವಿಚಾರಗಳನ್ನು ತಿಳಿಸಿದರು.
ಯಾವೆಲ್ಲ ಮೂರು ವಿಚಾರ?
ಇಂಟರ್ನ್ಯಾಷನಲ್ ಕೋಡ್ : ಜಾಗತಿಕವಾಗಿ ಪ್ರತಿ ವಿಮಾನ ನಿಲ್ದಾಣಕ್ಕೆ (Airport) ಪ್ರತ್ಯೇಕ ಕೋಡ್ ಇರಲಿದೆ. ಅದರಂತೆ ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ RQY ಎಂಬ ಕೋಡ್ ನೀಡಲಾಗಿದೆ.
ಇದನ್ನೂ ಓದಿ – ಶಿವಮೊಗ್ಗ ವಿಮಾನ ನಿಲ್ದಾಣ, ಗೊತ್ತಿರಬೇಕಾದ 10 ಪ್ರಮುಖ ಸಂಗತಿ ಇಲ್ಲಿದೆ
ವಿಮಾನ ಹಾರಾಟದ ದಿನಾಂಕ : ಶಿವಮೊಗ್ಗ ವಿಮಾನ ನಿಲ್ದಾಣದಿಂದ ಇಂಡಿಗೋ ಏರ್ಲೈನ್ಸ್ನ ವಿಮಾನ ಹಾರಾಟ ಶುರುವಾಗಲಿದೆ. ಆ.11ರಿಂದ ಬೆಂಗಳೂರಿಗೆ ವಿಮಾನ ಹಾರಾಟ ನಡೆಸಲಿದೆ.
ಇದನ್ನೂ ಓದಿ – ಶಿವಮೊಗ್ಗ ವಿಮಾನ ನಿಲ್ದಾಣ, ಇಂಡಿಗೋ ಸಂಸ್ಥೆಗೆ ವಾರ್ನಿಂಗ್ ನೀಡಿದ ಎಂಪಿ, ವಿಳಂಬಕ್ಕೆ ಕಾರಣ ಬಯಲು, ಏನದು?
ವೆಬ್ಸೈಟ್ನಲ್ಲಿ ಪ್ರಕಟಣೆ : ಇಂಡಿಗೋ ಏರ್ಲೈನ್ಸ್ನ ವೆಬ್ಸೈಟ್ನಲ್ಲಿ ಇನ್ನೆರಡು ದಿನದಲ್ಲಿ ಶಿವಮೊಗ್ಗ – ಬೆಂಗಳೂರು ವಿಮಾನ ಹಾರಾಟದ ಕುರಿತು ಪ್ರಕಟಣೆ ಹೊರಬೀಳಿದೆ.
ಹೆಚ್ಚಿನ ಮಾಹಿತಿಗೆ ಇಲ್ಲಿ CLICK ಮಾಡಿ ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422