ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
ಶಿವಮೊಗ್ಗ: ನಗರದ ಮರ್ಕಝ್ ಸಆದಃ ಧಾರ್ಮಿಕ ಮತ್ತು ಲೌಕಿಕ ಸಮನ್ವಯ ವಿದ್ಯಾಸಂಸ್ಥೆಯ 9ನೇ ವರ್ಷದ ಸಮ್ಮೇಳನ, ಪ್ರಶಸ್ತಿ ಪ್ರದಾನ (Excellence Award) ಸಮಾರಂಭವನ್ನು ಫೆಬ್ರವರಿ 13ರಂದು ಸಂಜೆ 5ಕ್ಕೆ ವಾದಿ ಎ ಹುದಾ 5ನೇ ತಿರುವಿನ ವಿದ್ಯಾಸಂಸ್ಥೆ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಸಮ್ಮೇಳನದ ಸಂಚಾಲಕ ಶಾಹುಲ್ ಹಮೀದ್ ಮದದಿ ತಿಳಿಸಿದರು.
ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 9 ವರ್ಷಗಳಿಂದ ಕನ್ನಡ ಧಾರ್ಮಿಕ ಶಿಕ್ಷಣ ನೀಡುವ ಮೂಲಕ ಯುವಜನತೆಯಲ್ಲಿ ಕನ್ನಡದ ಮಹತ್ವ ಮತ್ತು ಗೌರವ ಬೆಳೆಸುತ್ತಿದೆ. ಇದಕ್ಕೆ ಪೂರಕವಾಗಿ ಆಯೋಜಿಸುವ ವಿದ್ಯಾರ್ಥಿಗಳ ಕಲಾ ಮತ್ತು ಸಾಂಸ್ಕೃತಿಕ ಉತ್ಸವ ಮೆಘಾಲಿಯೊ ಫೆ.12ರಂದು ನಡೆಯಲಿದೆ. ಎರಡು ತಂಡಗಳ ನಡುವೆ ಒಟ್ಟು ಆರು ಭಾಷೆಗಳಲ್ಲಿ ನೂರಕ್ಕು ಹೆಚ್ಚು ಸ್ಪರ್ಧೆಗಳು ನಡೆಯಲಿವೆ ಎಂದರು.
ನಗರದಲ್ಲಿ ಹೆಚ್ಚುತ್ತಿರುವ ಮಾದಕ ದ್ರವ್ಯ ಸೇವನೆ ವಿರುದ್ಧ ಸಂಸ್ಥೆಯ ವಿದ್ಯಾರ್ಥಿಗಳು ಜಾಗೃತಿ ಅಭಿಯಾನ ನಡೆಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ನಗರದ ಪ್ರತಿ ಬಡಾವಣೆಯಲ್ಲೂ ಈ ಜಾಗೃತಿ ಅಭಿಯಾನ ನಡೆಸಲಾಗುವುದು ಎಂದು ತಿಳಿಸಿದರು.

ಫೆ.13ರಂದು ನಡೆಯುವ ಸಮ್ಮೇಳನದಲ್ಲಿ ಉದ್ಯಮಿ ಹಾಜಿ ಇಕ್ಬಾಲ್ ಹಬೀಬ್ ಸೇಠ್ ಅವರ ತಂದೆ ಮರ್ಹೂಂ ಹಬೀಬ್ ದಾದಾ ಸೇರ್ ಸ್ಮರಣಾರ್ಥ ನೀಡುವ ‘ಸಆದಃ ಎಕ್ಸಲೆನ್ಸ್ ಅವಾರ್ಡ್’ನ 4ನೇ ಆವೃತ್ತಿಯನ್ನು ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿಕಾರಿ ಬದಲಾವಣೆ ತರುತ್ತಿರುವ ಕೇರಳದ ಖಾಝಿ ಮುಹಮ್ಮದ್ ಸ್ವಾಲಿಹ್ ಸಆದಿ ಅವರಿಗೆ ನೀಡಿ ಗೌರವಿಸಲಾಗುವುದು ಎಂದರು.
ಇದನ್ನೂ ಓದಿ – ಅರ್ಧಕ್ಕರ್ಧ ಭದ್ರಾವತಿ ತಾಲೂಕಿನಲ್ಲಿ ಇವತ್ತು ಇಡೀ ದಿನ ಕರೆಂಟ್ ಇರಲ್ಲ, ಎಲ್ಲೆಲ್ಲಿ? ಇಲ್ಲಿದೆ ಲಿಸ್ಟ್
ಸಂಸ್ಥೆ ಅಧ್ಯಕ್ಷ ಸಯ್ಯದ್ ಶಹೀದುದ್ದೀನ್ ಅಲ್ ಬುಖಾರಿ ಮತ್ತು ಸಯ್ಯದ್ ಅಬೂಬಕ್ಕರ್ ಸಿದ್ದಿಖ್ ಅಲ್ ಹಾದಿ ತೀರ್ಥಹಳ್ಳಿ ನೇತೃತ್ವ ವಹಿಸಲಿದ್ದಾರೆ. ರಾಜ್ಯ ವಕ್ಸ್ ಮಂಡಳಿ ಉಪಾಧ್ಯಕ್ಷ ಎನ್.ಕೆ.ಎಂ. ಶಾಫಿ ಸಅದಿ ಮುಖ್ಯ ಭಾಷಣ ಮಾಡಲಿದ್ದಾರೆ. ಶಿವಮೊಗ್ಗ ಜಾಮಿಯಾ ಮಸೀದಿಯ ಮೌಲಾನ ಮುಫ್ತಿ ಹಜರತ್ ಗುಲಾಮ್ ರಝಾ ಬರ್ಕಾತಿ ಸೇರಿದಂತೆ ಧಾರ್ಮಿಕ, ಸಾಮಾಜಿಕ ಮತ್ತು ರಾಜಕೀಯ ನಾಯಕರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಅಬ್ದುಲ್ ಜಬ್ಬಾರ್ ಸಆದಿ, ರಹೀಂ ಹನೀಫ್, ಸಾದಿಕ್ವುಲ್ಲ, ಇರ್ಫಾನ್, ಇಸ್ಮಾಯಿಲ್, ಹಸನ್ ಮತ್ತಿತರರಿದ್ದರು.
LATEST NEWS
- ಭದ್ರಾವತಿ ವ್ಯಕ್ತಿಗೆ 2 ವರ್ಷ ಜೈಲು, ₹10,000 ದಂಡ, ಕಾರಣ ಹೂವಿನ ಗಿಡ

- ಶಿವಮೊಗ್ಗದ ಸವಾರರೆ ಹುಷಾರ್, ಬೈಕ್ನಿಂದ ಬಿದ್ದರು, ಆಟೋ ಜಖಂ, ಕಾರ್ ಕೆಳಗೆ ಡ್ಯಾಮೇಜ್, ಏನಿದು?

- ಭದ್ರಾವತಿ ಹೊಸ ಸಿದ್ಧಾಪುರದಲ್ಲಿ ಮನೆಗೆ ನುಗ್ಗಿದ ಕಳ್ಳರು, ಲಕ್ಷ ಲಕ್ಷ ಮೌಲ್ಯದ ವಸ್ತುಗಳು ಕಳವು

- ಇವತ್ತಿನ ₹98,140ಕ್ಕೆ ತಲುಪಿದೆ ಅಡಿಕೆ | 12 ಫೆಬ್ರವರಿ 2026 | ಅಡಿಕೆ ಧಾರಣೆ

- ಸಾರ್ವಜನಿಕರೆ ಎಚ್ಚರ, ಹೊಸನಗರದಲ್ಲಿ ಮೆಸ್ಕಾಂ ಅಲರ್ಟ್ ಪ್ರಕಟ, ಏನಿದು?

About The Editor
ನಿತಿನ್ ಆರ್.ಕೈದೊಟ್ಲು





