ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
ಭದ್ರಾವತಿ: ಹೊಸಸಿದ್ದಾಪುರದ ಎನ್‌ಟಿಬಿ ಲೇಔಟ್‌ನಲ್ಲಿರುವ ಮನೆಯೊಂದರ ಬಾಗಿಲಿನ ಬೀಗ ಮುರಿದು ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನದ ಆಭರಣಗಳು, ಬೆಳ್ಳಿ ವಸ್ತುಗಳು (gold and silver) ಹಾಗೂ ನಗದು ದೋಚಲಾಗಿದೆ.
ಹೊಸಸಿದ್ದಾಪುರದ ಸರೋಜ ಎಂಬುವವರು ಕುಟುಂಬದೊಂದಿಗೆ ತಾಯಿಯ ಮನೆಗೆ ತೆರಳಿದ್ದರು. ಇದೇ ಹೊತ್ತಿನಲ್ಲಿ ಕಳ್ಳರು ಮನೆಯ ಮುಂಬಾಗಿಲು ಮತ್ತು ಬೆಡ್‌ರೂಮ್‌ನಲ್ಲಿದ್ದ ಅಲ್ಮೇರಾವನ್ನು ಆಯುಧದಿಂದ ಮೀಟಿ ಕಳ್ಳತನ ಮಾಡಿದ್ದಾರೆ. ರಾತ್ರಿ ಸರೋಜ ಅವರ ಮಗ ಪ್ರೇಮ್ ಕುಮಾರ್ ಮನೆಗೆ ಹಿಂದಿರುಗಿದಾಗ ಕಳ್ಳತನ ನಡೆದಿರುವುದು ಬೆಳಕಿಗೆ ಬಂದಿದೆ.
ಮನೆಯಲ್ಲಿ ₹6.60 ಲಕ್ಷ ಮೌಲ್ಯದ ಒಟ್ಟು 132 ಗ್ರಾಂ ತೂಕದ ಚಿನ್ನಾಭರಣ, ₹50,000 ಮೌಲ್ಯದ ಅರ್ಧ ಕೆಜಿ ಬೆಳ್ಳಿ ವಸ್ತು ಹಾಗೂ ₹34,000 ನಗದು ಸೇರಿ ಒಟ್ಟು ₹7.44 ಲಕ್ಷ ಮೌಲ್ಯದ ವಸ್ತುಗಳು ಕಳುವಾಗಿವೆ ಎಂದು ಆರೋಪಿಸಲಾಗಿದೆ. ಈ ಸಂಬಂಧ ಭದ್ರಾವತಿ ನ್ಯೂ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ – ಶಿವಮೊಗ್ಗದ ಡಿವೈಎಸ್‌ಪಿ, ಇನ್ಸ್‌ಪೆಕ್ಟರ್‌ಗಳು ವರ್ಗಾವಣೆ, ಯಾರೆಲ್ಲ ಟ್ರಾನ್ಸ್‌ಫರ್ ಆಗಿದ್ದಾರೆ?
LATEST NEWS
- ಶಿವಮೊಗ್ಗದಲ್ಲಿ ಚಲಿಸುತ್ತಿದ್ದ ಕಾರಿನಲ್ಲಿ ಬೆಂಕಿ, ಧಗಧಗ ಹೊತ್ತಿ ಉರಿದ ಮುಂಭಾಗ

- ಆಲ್ಕೊಳ ಬಳಿ ಪೊಲೀಸರ ಕಾರ್ಯಾಚರಣೆ, ಬೈಕ್ ಸಹಿತ ಇಬ್ಬರು ಅರೆಸ್ಟ್, ಕಾರಣವೇನು?

- ಶರಾವತಿ ನಗರದಲ್ಲಿ ಕಾರು ಗಾಜು ಪೀಸ್ ಪೀಸ್ ಕೇಸ್, ಮೂವರು ಅರೆಸ್ಟ್, ಘಟನೆಗೆ ಕಾರಣ ಮನೆ

- ಶಿವಮೊಗ್ಗದಲ್ಲಿ ಏರ್ಟೆಲ್ ಮೊಬೈಲ್ ಟವರ್ನ ಉಪಕರಣ ಕಳವು, ಆಗಿದ್ದೇನು?

- ಶಿವಮೊಗ್ಗ ಕಾಂಗ್ರೆಸ್ ಕಾರ್ಯದರ್ಶಿ ಸೇರಿ ಇಬ್ಬರು 6 ವರ್ಷ ಪಕ್ಷದಿಂದ ಉಚ್ಛಾಟನೆ, ಕಾರಣವೇನು?

About The Editor
ನಿತಿನ್ ಆರ್.ಕೈದೊಟ್ಲು





