ಶಿವಮೊಗ್ಗದ ಬಿದಿರೆಯಲ್ಲಿ ಸೈಟ್ ಮಾರಾಟಕ್ಕಿದೆ. ಸಾಯಿ ಬಾಬಾ ದೇಗುಲ, ರಾಷ್ಟ್ರೀಯ ಹೆದ್ದಾರಿಗೆ ಸಮೀಪದಲ್ಲಿ 30*50 ಅಳತೆಯ ಸೈಟು ಮಾರಾಟಕ್ಕಿದೆ. ಸಂಪರ್ಕಿಸಿ: 8073449559ಸೈಟ್ ಮಾರಾಟಕ್ಕಿದೆ
SHIMOGA, 7 AUGUST 2024 : ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ (ಶಿಮುಲ್) ಆಡಳಿತ ಮಂಡಳಿ ಚುನಾವಣೆಗೆ ಮಂಗಳವಾರ 7 ನಾಮಪತ್ರ (Nomination) ಸಲ್ಲಿಕೆಯಾಗಿದೆ. ಇದರೊಂದಿಗೆ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಮುಕ್ತಾಯವಾಗಿದೆ.
ಈ ಬಾರಿ ಚುನಾವಣೆಗೆ ಒಟ್ಟು 62 ನಾಮಪತ್ರಗಳು ಸಲ್ಲಿಕೆಯಾಗಿವೆ. ಇದರಲ್ಲಿ ಕೆಲವರು ಒಂದಕ್ಕಿಂತಲು ಹೆಚ್ಚು ನಾಮಪತ್ರ ಸಲ್ಲಿಸಿರುವುದೂ ಸೇರಿವೆ. ಆ.7ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ಆ ಬಳಿಕ ನಾಮಪತ್ರ ಸಲ್ಲಿಸಿದವರ ನಿಖರ ಸಂಖ್ಯೆ ಗೊತ್ತಾಗಲಿದೆ. ನಾಮಪತ್ರ ಹಿಂಪಡೆಯಲು ಆ.8 ಕೊನೆಯ ದಿನ. ಅಂದು ಸಂಜೆ ಶಿಮುಲ್ ಚುನಾವಣೆ ಕಣ ಅಂತಿಮಗೊಳ್ಳಲಿದೆ. ಒಟ್ಟು 14 ನಿರ್ದೇಶಕರ ಸ್ಥಾನಕ್ಕೆ ಆ.14ರಂದ ಮತದಾನ ನಿಗದಿಯಾಗಿದೆ.
ಇದನ್ನೂ ಓದಿ ⇓
ಶಿವಮೊಗ್ಗದ ತಾಲೂಕಿನ ವಿವಿಧೆಡೆ ನಾಳೆ ಕರೆಂಟ್ ಇರಲ್ಲ, ಎಲ್ಲೆಲ್ಲಿ ವ್ಯತ್ಯಯವಾಗಲಿದೆ?






