ಶಿವಮೊಗ್ಗ ಜಿಲ್ಲೆಯ ರಸ್ತೆಗಳ ಅಭಿವೃದ್ಧಿಗೆ ಕೇಂದ್ರದಿಂದ 68 ಕೋಟಿ, ಯಾವ್ಯಾವ ರಸ್ತೆ? ಇಲ್ಲಿದೆ ಪಟ್ಟಿ

ಶಿವಮೊಗ್ಗ: ಶಿವಮೊಗ್ಗ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಗ್ರಾಮೀಣ ಹಾಗೂ ನಗರ ಪ್ರದೇಶಗಳ ಸಂಪರ್ಕ ರಸ್ತೆಗಳ ಸುಧಾರಣೆಗೆ ಕೇಂದ್ರ ಸರ್ಕಾರವು ಆಡಳಿತಾತ್ಮಕ ಅನುಮೋದನೆ ನೀಡಿದ್ದು, ಒಟ್ಟು ₹68 ಕೋಟಿ ವೆಚ್ಚದ ಕಾಮಗಾರಿಗಳಿಗೆ ಮಂಜೂರಾತಿ ದೊರೆತಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ತಿಳಿಸಿದ್ದಾರೆ. ಸುದ್ದಿಯ ಮುಂದಿನ ಭಾಗ ಕೆಳಗಿದೆ.

ಕೇಂದ್ರ ರಸ್ತೆ ಮತ್ತು ಮೂಲ ಸೌಕರ್ಯ ನಿಧಿ (CRIF) ಅಡಿಯಲ್ಲಿ ಈ ಅನುದಾನ ಬಿಡುಗಡೆಯಾಗಿದ್ದು, ಕ್ಷೇತ್ರದಾದ್ಯಂತ ಒಟ್ಟು 13 ಪ್ರಮುಖ ರಸ್ತೆಗಳ 84.78 ಕಿಲೋ ಮೀಟರ್ ಉದ್ದದ ಮಾರ್ಗವನ್ನು ಮರು ಡಾಂಬರೀಕರಣದೊಂದಿಗೆ ಮೇಲ್ದರ್ಜೆಗೇರಿಸಲಾಗುವುದು. ಶಿವಮೊಗ್ಗ ನಗರ, ಗ್ರಾಮಾಂತರ, ಭದ್ರಾವತಿ, ಶಿಕಾರಿಪುರ, ಸೊರಬ, ಸಾಗರ, ತೀರ್ಥಹಳ್ಳಿ ಹಾಗೂ ಬೈಂದೂರು ತಾಲ್ಲೂಕುಗಳ ಪ್ರಮುಖ ಸಂಪರ್ಕ ರಸ್ತೆಗಳು ಈ ಯೋಜನೆಯಲ್ಲಿ ಸೇರಿವೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Central-Government-released-68-crore-for-roads-in-Shimoga-said-MP-BY-Raghavendra

ಯಾವ್ಯಾವ ರಸ್ತೆ? ಎಷ್ಟು ಕೋಟಿ ವೆಚ್ಚ?

ಶಿವಮೊಗ್ಗ ತಾಲ್ಲೂಕು: ರಾಜ್ಯ ಹೆದ್ದಾರಿ 57 ರಲ್ಲಿ (ಕಾಚಿನಕಟ್ಟೆಯಿಂದ ವಿಮಾನ ನಿಲ್ದಾಣದ ಮೂಲಕ ಲಕ್ಕಿನಕೊಪ್ಪದವರೆಗೆ), ರಾಜ್ಯ ಹೆದ್ದಾರಿ 254 (ಲಕ್ಕಿನಕೊಪ್ಪದಿಂದ ಉಂಬ್ಳೆಬೈಲುವರೆಗೆ) ಮತ್ತು ರಾಜ್ಯ ಹೆದ್ದಾರಿ 65 (ಉಂಬ್ಳೆಬೈಲುನಿಂದ ಚೆಕ್ ಪೋಸ್ಟ್ ವರೆಗೆ) ಒಟ್ಟು 13.20 ಕಿ.ಮೀ ರಸ್ತೆ ಅಭಿವೃದ್ಧಿ — ₹20 ಕೋಟಿ

Nanjappa Hospital Advertisement

ಭದ್ರಾವತಿ ತಾಲ್ಲೂಕು: ರಾಜ್ಯ ಹೆದ್ದಾರಿ-250 ರಲ್ಲಿ ಭದ್ರಾವತಿಯಿಂದ ಸಾಸ್ವೇಹಳ್ಳಿ ರಸ್ತೆ (ವಯಾ: ಹೊಳೆಹೊನ್ನೂರು, ಸಿದ್ಲಿಪುರ, ಸನ್ಯಾಸಿಕೋಡಮಗ್ಗಿ, ನಾಗಸಮುದ್ರ, ಮಂಗೋಟೆ, ಆನವೇರಿ, ನಿಂಬೆಗೊಂದಿ, ಸೈದರಕಲ್ಲಹಳ್ಳಿ) 3 ಕಿ.ಮೀ ರಸ್ತೆ ಅಭಿವೃದ್ಧಿ — ₹2 ಕೋಟಿ

ಭದ್ರಾವತಿ ತಾಲ್ಲೂಕು: ರಾಜ್ಯ ಹೆದ್ದಾರಿ 68 ಮತ್ತು 57 ರ ಮಧ್ಯದ ಜಿಲ್ಲಾ ಮುಖ್ಯ ಸಂಪರ್ಕ ರಸ್ತೆ (ವಯಾ: ಕಡದಕಟ್ಟೆ-ವಿಶ್ವೇಶ್ವರನಗರ-ಸಿರಿಯೂರು-ಹಾಗಲಮನೆ-ಅಮೃತಪುರ) 8 ಕಿ.ಮೀ ರಸ್ತೆ ಅಭಿವೃದ್ಧಿ — ₹6 ಕೋಟಿ

ಸಾಗರ ತಾಲ್ಲೂಕು: ರಾಜ್ಯ ಹೆದ್ದಾರಿ-62 ರಲ್ಲಿ ಶಿರಾಳಕೊಪ್ಪ–ಸಾಗರ ರಸ್ತೆ 9.86 ಕಿ.ಮೀ ಅಭಿವೃದ್ಧಿ — ₹6 ಕೋಟಿ

ಶಿವಮೊಗ್ಗ ಗ್ರಾಮಾಂತರ ಕ್ಷೇತ್ರ: ರಾಜ್ಯ ಹೆದ್ದಾರಿ-26 ರಲ್ಲಿ ಹಲಗೇರಿ–ಹಾಲ್ಕಲ್ ರಸ್ತೆ 4.92 ಕಿ.ಮೀ ಅಭಿವೃದ್ಧಿ — ₹4 ಕೋಟಿ

ಬೈಂದೂರು ತಾಲ್ಲೂಕು: ರಾಜ್ಯ ಹೆದ್ದಾರಿ 52 ರಲ್ಲಿ ಅನಪಾರು–ಸಿದ್ದಾಪುರ ರಸ್ತೆ 3 ಕಿ.ಮೀ ಅಭಿವೃದ್ಧಿ — ₹2 ಕೋಟಿ

ಬೈಂದೂರು ತಾಲ್ಲೂಕು: ರಾಜ್ಯ ಹೆದ್ದಾರಿ-52 ರಲ್ಲಿ ತೀರ್ಥಹಳ್ಳಿಯಿಂದ ಕುಂದಾಪುರ ರಸ್ತೆ 3 ಕಿ.ಮೀ ಅಭಿವೃದ್ಧಿ — ₹2 ಕೋಟಿ

ಬೈಂದೂರು ತಾಲ್ಲೂಕು: ಜಿಲ್ಲಾ ಮುಖ್ಯ ರಸ್ತೆ ತಲ್ಲೂರಿನಿಂದ ಉಪ್ಪಿನಕುದ್ರುವರೆಗೆ 4 ಕಿ.ಮೀ ಅಭಿವೃದ್ಧಿ — ₹2 ಕೋಟಿ

ತೀರ್ಥಹಳ್ಳಿ ತಾಲ್ಲೂಕು: ಜಿಲ್ಲಾ ಮುಖ್ಯ ರಸ್ತೆಯ 3.80 ಕಿ.ಮೀ ಮಾರ್ಗದ ಅಭಿವೃದ್ಧಿ — ₹3.50 ಕೋಟಿ

ಹೊಸನಗರ ತಾಲ್ಲೂಕು: ರಾಜ್ಯ ಹೆದ್ದಾರಿ-01 ರಲ್ಲಿ ಪಡುಬಿದ್ರೆಯಿಂದ ಚಿಕ್ಕಲಗೋಡುವರೆಗೆ 4 ಕಿ.ಮೀ ರಸ್ತೆ ಅಭಿವೃದ್ಧಿ — ₹2.50 ಕೋಟಿ

ಶಿಕಾರಿಪುರ ತಾಲ್ಲೂಕು: ರಾಜ್ಯ ಹೆದ್ದಾರಿ-148 ರಸ್ತೆಯ 11 ಕಿ.ಮೀ ಮಾರ್ಗದ ಅಭಿವೃದ್ಧಿ — ₹6 ಕೋಟಿ

ಸೊರಬ ತಾಲ್ಲೂಕು: ರಾಜ್ಯ ಹೆದ್ದಾರಿ-76, 50, 01, 77 ರಲ್ಲಿ ಅಂಕರವಳ್ಳಿ, ಮೂಡಿದೊಡ್ಡಿಕೊಪ್ಪ, ಹುರಳಿಕೊಪ್ಪ, ಕೋಟಿಪುರ, ಆನವಟ್ಟಿ, ಹರಳಿಕೊಪ್ಪ, ಕುಪ್ಪಗಡ್ಡೆ, ತವನಂದಿ, ಬಿಳವಗೋಡು, ಕಲ್ಲಂಬಿ, ಗುಡವಿ, ಕಾಂತನಹಳ್ಳಿ, ಗುಂಜನೂರುವರೆಗಿನ 10 ಕಿ.ಮೀ ರಸ್ತೆ ಅಭಿವೃದ್ಧಿ — ₹6 ಕೋಟಿ

ಶಿವಮೊಗ್ಗ ನಗರ: ರಾಜ್ಯ ಹೆದ್ದಾರಿ-254, 57 ರಲ್ಲಿ ಬೊಮ್ಮನಕಟ್ಟೆಯಿಂದ ಗೆಜ್ಜೇನಹಳ್ಳಿವರೆಗಿನ 7 ಕಿ.ಮೀ ರಸ್ತೆ ಅಗಲೀಕರಣ ಮತ್ತು ಅಭಿವೃದ್ಧಿ — ₹6 ಕೋಟಿ

📍 ನಿಮ್ಮೂರ ಸುದ್ದಿ
ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ವಾಟ್ಸಪ್‌ ಮಾಡಬಹುದು. ಉಚಿತವಾಗಿ ಪ್ರಕಟಿಸುತ್ತೇವೆ.
Shivamogga Live Promotion