ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 24 SEPTEMBER 2023
ಮತ್ತಷ್ಟು ಸುದ್ದಿ ಕೆಳಗಿದೆ ಸುಲಭ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ ಮೊಬೈಲ್ ನಂಬರ್ : 9972194422
SHIMOGA : ಆಲ್ಕೊಳ ಸರ್ಕಲ್ ಸಮೀಪ ಮಹಾನಗರ ಪಾಲಿಕೆ ಕಸ ಹಾಕುವ ಜಾಗದಲ್ಲಿ ಆರು ಯುವಕರಿಗೆ ಚಾಕು ಇರಿದ (Attack) ಪ್ರಕರಣಕ್ಕೆ ಸಂಬಂಧಿಸಿದಂತೆ 9 ಮಂದಿಯನ್ನು ಬಂಧಿಸಲಾಗಿದೆ. ವೈಯಕ್ತಿಕ ಕಾರಣಕ್ಕೆ ಎರಡು ಗುಂಪುಗಳ ಮಧ್ಯೆ ಗಲಾಟೆಯಾಗಿ ಚಾಕು ಇರಿಯಲಾಗಿತ್ತು.
» ವಾಟ್ಸಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ |
» ಫೇಸ್ಬುಕ್ ಮೆಸೆಂಜರ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ |
ಪವನ್, ಮಂಜುನಾಥ್, ಚಂದನ್, ರಂಗನಾಥ್, ಮನೋಜ್, ಶ್ರೀನಿವಾಸ್, ರಾಜಶೇಖರ್, ವಿಶ್ವನಂದನ್, ಶ್ಯಾಮ್ ರಾಬಿನ್ ಬಂಧಿತರು.
ಚಾಕು ಇರಿಯಲು ಕಾರಣವೇನು?
ನೇತಾಜಿ ಸರ್ಕಲ್ನಲ್ಲಿ ಭಗತ್ ಯುವಕರ ಸಂಘದ ಹೆಸರಿನಲ್ಲಿ ಗಣಪತಿ ಮೂರ್ತಿ ಪ್ರತಿಷ್ಠಾಪಿಸಲಾಗಿತ್ತು. ಸೆ.21ರಂದು ರಾತ್ರಿ ಗಣಪತಿ ಪೆಂಡಾಲ್ನಲ್ಲಿ ಅಂಧ ಯುವಕರ ಕಾರ್ಯಕ್ರಮವಿತ್ತು. ಇದು ಮುಗಿದಾಗ ಸ್ನೇಹಿತರ ಮಧ್ಯೆ ಜಗಳವಾಗಿದೆ. ತಡರಾತ್ರಿ ಗಣಪತಿ ವಿಸರ್ಜನೆ ಬಳಿಕ ಪಾಲಿಕೆ ಕಸ ಹಾಕುವ ಜಾಗದಲ್ಲಿ ಕುಳಿತು ಮಾತನಾಡುತ್ತಿದ್ದಾಗ ಮೂರ್ನಾಲ್ಕು ಬೈಕುಗಳಲ್ಲಿ ಬಂದ ಪವನ್ ಮತ್ತು ಸಂಗಡಿಗರು ಚಾಕುವಿನಿಂದ ಇರಿದು (Attack) ಕೊಲೆಗೆ ಯತ್ನಿಸಿದ್ದರು.
ಇದನ್ನೂ ಓದಿ – ಶಿವಮೊಗ್ಗದ ಸಾಫ್ಟ್ವೇರ್ ಇಂಜಿನಿಯರ್ಗೆ 99 ಲಕ್ಷ ರೂ. ಪಂಗನಾಮ, ಮ್ಯಾಟ್ರಿಮೋನಿ ಯುವತಿಯೆ ಕಾರಣ, ಹೇಗದು?
ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಕೆಲವೆ ಗಂಟೆಯಲ್ಲಿ ಆರೋಪಿಗಳನ್ನು ಪತ್ತೆ ಮಾಡಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.