ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
ಈಗ ಬಟ್ಟೆ ಒಗೆಯೋದು ಬಹಳ ಸುಲಭ, ಹೇಗದು? | ವಿಡಿಯೋಗಾಗಿ ಕ್ಲಿಕ್ ಮಾಡಿ
ಶಿವಮೊಗ್ಗ ಲೈವ್.ಕಾಂ | SHIMOGA NEWS | 19 JANUARY 2021
ತೂಕ, ಅಳತೆಯಲ್ಲಿ ಮೋಸ, ನಿಗದಿಗಿಂತಲೂ ಹೆಚ್ಚಿನ ದರಕ್ಕೆ ವಸ್ತುಗಳನ್ನು ಮಾರುತ್ತಿದ್ದ ಮಾರಾಟಗಾರರಿಗೆ ಅಧಿಕಾರಿಗಳು ಬಿಸಿ ಮುಟ್ಟಿಸಿದ್ದಾರೆ. ದೂರು ಬಂದಿರುವ ಕಡೆ ಮತ್ತು ದಿಢೀರ್ ದಾಳಿ ನಡೆಸಿ 913 ಕೇಸ್ ದಾಖಲು ಮಾಡಲಾಗಿದೆ.
ದೋಷಪೂರಿತ ತೂಕ ಮತ್ತು ಅಳತೆ ಪರಿಕರಗಳನ್ನು ಬಳಸುವುದು, ತೂಕ ಮತ್ತು ಅಳತೆಯಲ್ಲಿ ವಂಚಿಸುವುದು, ನಿಗದಿಗಿಂತಲೂ ಹೆಚ್ಚಿನ ಬೆಲೆಗೆ ವಸ್ತುಗಳ ಮಾರಾಟ ಮಾಡುವ ವ್ಯಾಪಾರಿಗಳ ಮೇಲೆ ದಾಳಿ ನಡೆಸಲಾಗಿದೆ ಎಂದು ಕಾನೂನು ಮಾಪನಶಾಸ್ತ್ರ ಇಲಾಖೆ ಸಹಾಯಕ ನಿಯಂತ್ರಕ ಎಸ್.ಮಂಜುನಾಥ್ ತಿಳಿಸಿದ್ದಾರೆ.
ದಾಳಿಯ ಹೈಲೈಟ್ಸ್
2020ರ ಏಪ್ರಿಲ್‍ನಿಂದ 2021ರ ಜನವರಿವರೆಗಿನ ಅವಧಿಯಲ್ಲಿ 1868 ವ್ಯಾಪಾರಿಗಳು, ಕೈಗಾರಿಕಾ ಕೇಂದ್ರಗಳಿಗೆ ದಿಢೀರ್ ಭೇಟಿ ನೀಡಿ ಪರಿಶೀಲಿಸಲಾಗಿದೆ.
ತೂಕ ಮತ್ತು ಅಳತೆ ಪರಿಕರಗಳ ಪರಿಶೀಲನೆ ನಡೆಸಿ, 1.05 ಕೋಟಿ ರೂ. ಶುಲ್ಕ ವಸೂಲಿ ಮಾಡಲಾಗಿದೆ.
ವಂಚನೆ ಆರೋಪದಲ್ಲಿ ದಾಖಲಾದ ಮೊಕದ್ದಮೆಗಳ ಪೈಕಿ 911 ಪ್ರಕರಣಗಳನ್ನು ರಾಜಿ ಮೂಲಕ ಇತ್ಯರ್ಥಪಡಿಸಲಾಗದ್ದು, 15.97 ಲಕ್ಷ ರೂ. ದಂಡ ವಸೂಲಿ ಮಾಡಲಾಗಿದೆ.
ನ್ಯಾಯಬೆಲೆ ಅಂಗಡಿ, ಚಿಲ್ಲರೆ ಸೀಮೆ ಎಣ್ಣೆ ಮಾರಾಟಗಾರರು, ಸಗಟು ವ್ಯಾಪಾರಿಗಳು, ಗೊಬ್ಬರ ಮತ್ತು ಕ್ರಿಮಿನಾಶಕ ಮಾರಾಟಗಾರರ ಅಂಗಡಿಗಳಲ್ಲಿ ತಪಾಸಣೆ ನಡೆಸಲಾಗಿದೆ ಎಂದು ಎಸ್.ಮಂಜುನಾಥ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಶಿವಮೊಗ್ಗ ಲೈವ್‍ಗೆ ಸುದ್ದಿ ನೀಡಲು ಕರೆ ಮಾಡಿ 9964634494
ವಾಟ್ಸಪ್‍ನಲ್ಲಿ ಸುದ್ದಿಗಾಗಿ 7411700200
ಶಿವಮೊಗ್ಗ ಲೈವ್ ಈ ಮೇಲ್ [email protected]
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422