ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 1 DECEMBER 2023
SHIMOGA : ತುಂಗಾ ನದಿ (Tunga River) ಮಲಿನ ವಾಗುತ್ತಿದ್ದರೂ ಅದನ್ನು ತಡೆಯಲು ಮಹಾನಗರ ಪಾಲಿಕೆ ಯಾವುದೇ ಕ್ರಮ ಕೈಗೊಳ್ಳದೇ ದಿವ್ಯ ನಿರ್ಲಕ್ಷ್ಯ ವಹಿಸಿದೆ. ಕಳೆದ 5 ವರ್ಷ ಪಾಲಿಕೆಯಲ್ಲಿ ಆಡಳಿತದಲ್ಲಿದ್ದ ಬಿಜೆಪಿ ಒಂದು ದಿನವೂ ನದಿಯ ಸ್ವಚ್ಛತೆ ಬಗ್ಗೆ ಧ್ವನಿ ಎತ್ತಲಿಲ್ಲ. ಆದರೆ ತನ್ನ ಅವಧಿ ಮುಗಿಯುವ ಕೊನೆ ದಿನ ಕಾಟಾಚಾರಕ್ಕಾಗಿ ತುಂಗಾ ನದಿ (Tunga River) ಸ್ವಚ್ಛತೆ ಬಗ್ಗೆ ಮಾತನಾಡಿರುವುದು ಹಾಸ್ಯಾಸ್ಪದ ಎಂದು ಎಎಪಿ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ನಜೀರ್ ಅಹಮ್ಮದ್, ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದರು.
ಇದನ್ನೂ ಓದಿ- ಶಿವಮೊಗ್ಗ ವಿಮಾನ ನಿಲ್ದಾಣ ಕಾಂಪೌಂಡ್ ವಿಚಾರಕ್ಕೆ ಪ್ರತಿಭಟನೆ, ಪೊಲೀಸರ ಜೊತೆ ಮಾತಿಗೆ ಮಾತು, ಕಾರಣವೇನು?
ನದಿ ನೀರು ಕುಡಿಯಲು ಮತ್ತು ಬಳಸಲೂ ಯೋಗ್ಯವಾಗಿಲ್ಲ. ಇಡೀ ನಗರದ ಕೊಳಚೆ ನೀರು ನದಿಗೆ ಸೇರುತ್ತಿದೆ. ಸ್ಮಾರ್ಟ್ ಸಿಟಿ ಯೋಜನೆಯಡಿ ಯಾವ ಕೆಲಸವೂ ಆಗಲಿಲ್ಲ. ಕೋಟ್ಯಂತರ ರೂಪಾಯಿ ಹಣ ದುರುಪಯೋಗವಾಗಿದೆ. ಇಡೀ ನದಿ ಕೊಳಚೆಯಿಂದ ಕೂಡಿದೆ ಎಂದು ದೂರಿದರು.
ಪಕ್ಷದ ಪ್ರಮುಖರಾದ ಮಂಜುನಾಥ ಪೂಜಾರಿ, ಸುರೇಶ್ ಕೋಟೆಕರ್, ರಘು, ಶೇಖರಪ್ಪ, ಸಾತ್ವಿಕ್ ಮೊದಲಾದವರಿದ್ದರು.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422