SHIMOGA | ಅಡಕೆ ಟಾಸ್ಕ್ ಫೋರ್ಸ್‌ನ ಸಭೆ, ಏನೆಲ್ಲ ಚರ್ಚೆಯಾಯ್ತು? ಯಾವೆಲ್ಲ ನಿರ್ಣಯ ಕೈಗೊಳ್ಳಲಾಗಿದೆ?

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

ಶಿವಮೊಗ್ಗ ಲೈವ್.ಕಾಂ | SHIMOGA NEWS | 09 FEBRUARY 2021

ಅಡಕೆ ಬೆಳೆಗಾರರ ಹಿತರಕ್ಷಣೆಗೆ ಸರ್ಕಾರ ರಚಿಸಿರುವ ಅಡಕೆ ಟಾಸ್ಕ್ ಫೋರ್ಸ್‍ನ ಸಭೆ ಶಿವಮೊಗ್ಗದಲ್ಲಿ ನಡೆಯಿತು. ಮಲೆನಾಡು ಅಭಿವೃದ್ಧಿ ಮಂಡಳಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಪ್ರಮುಖ ನಿರ್ಣಯಗಳನ್ನು ಕೈಗೊಳ್ಳಲಾಗಿದೆ.

ಅಡಕೆ ಟಾಸ್ಕ್ ಫೋರ್ಸ್‍ನ ಅಧ್ಯಕ್ಷ, ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರ ನೇತೃತ್ವದಲ್ಲಿ ಸಭೆ ನಡೆಸಲಾಯಿತು.

ಸಭೆಯಲ್ಲಿ ಕೈಗೊಂಡ ನಿರ್ಣಯಗಳೇನು?

ನಿರ್ಣಯ 1 

ಅಡಕೆ ಆರೋಗ್ಯಕ್ಕೆ ಹಾನಿಕಾರಕ ಎಂದು ಹಿಂದನ ಸರ್ಕಾರ ಸುಪ್ರೀಂ ಕೋರ್ಟ್‍ನಲ್ಲಿ  ಅಫಿಡವಿಟ್ ಸಲ್ಲಿಸಿದೆ. ಇದರ ವಿರುದ್ಧ ವಾದ ಮಂಡಿಸಲು ಸುಪ್ರೀಂ ಕೋರ್ಟ್‍ನಲ್ಲಿ ಹಿರಿಯ ವಕೀಲರನ್ನು ಸರ್ಕಾರ ನೇಮಿಸಬೇಕು.

ನಿರ್ಣಯ 2

ಎಂ.ಎಸ್.ರಾಮಯ್ಯ  ವಿಶ್ವವಿದ್ಯಾಲಯದಲ್ಲಿ ಅಡಕೆ ಕುರಿತು ಸಂಶೋಧನೆ ನಡೆಸಲಾಗುತ್ತಿದೆ.  ಸಂಶೋದನಾ ವರದಿ ಬರುವವರೆಗೆ ಸುಪ್ರೀಂ ಕೋರ್ಟ್‍ನಲ್ಲಿ ವಿಚಾರಣೆ ಮುಂದೂಡಬೇಕಿದೆ. ಈ ಕುರಿತು ಕೇಂದ್ರ ಸರ್ಕಾರದ ವಕೀಲರು ಕೋರ್ಟ್‍ಗೆ ಮನವರಿಕೆ ಮಾಡಬೇಕು. ಇದರ ಬಗ್ಗೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ತರಬೇಕು.

ನಿರ್ಣಯ 3

ಅಡಕೆಯ ಕನಿಷ್ಠ ಬೆಂಬಲ ಬೆಲೆ ದರವನ್ನು ಐದಾರು ವರ್ಷದ ಹಿಂದೆ ನಿಗದಿಪಡಿಸಲಾಗಿದೆ. ತಜ್ಞರು, ಬೆಳೆಗಾರರಿಂದ ಮಾಹಿತಿ ಸಂಗ್ರಹಿಸಿ ಪರಿಷ್ಕೃತ ಎಂಎಸ್‍ಪಿ ದರ ನಿಗದಿ ಮಾಡಬೇಕು. ಈಗ 250 ರೂ. ಕನಿಷ್ಠ ಬೆಂಬಲ ಇದೆ. ಇದನ್ನು ಪ್ರತಿ ಕೆಜಿಗೆ 350 ರೂ. ನಿಗದಿ ಮಾಡುವಂತೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಬೇಕು. ಇದರಿಂದ ವಿದೇಶದಿಂದ ಕಡಿಮೆ ದರಕ್ಕೆ ಅಡಕೆ ಆಮದಾಗುವುದು ತಪ್ಪಲಿದೆ.

ನಿರ್ಣಯ 4

ಒಂದು ಜಿಲ್ಲೆ ಒಂದು ಉತ್ಪನ್ನ ಯೋಜನೆ ಅಡಿ ಶಿವಮೊಗ್ಗ ಜಿಲ್ಲೆಗೆ ಅನಾನಸ್ ಹಣ್ಣನ್ನು  ನಿಗದಿಪಡಿಸಲಾಗಿದೆ. ಆದರೆ ಈ ಯೋಜನೆ ಅಡಿ ಜಿಲ್ಲೆಗೆ ಅಡಕೆ ಬೆಳೆಯನ್ನು ಪರಿಗಣಿಸುವಂತೆ ಶಿಫಾರಸು ಮಾಡಬೇಕು ಎಂದು ರಾಜ್ಯ ಸರ್ಕಾರಕ್ಕೆ ಮನವಿ ಮಾಡಲಾಗುತ್ತಿದೆ.

ನಿರ್ಣಯ 5

ಅಡಕೆ ಬೆಳೆ ಸಂಬಂಧ ತೋಟಗಾರಿಕ ವಿಶ್ವವಿದ್ಯಾಲಯ ಕೈಗೊಂಡಿರುವ ಕೌಶಲ್ಯ ತರಬೇತಿ ಕಾರ್ಯಕ್ರಮಗಳಿಗೆ ಟಾಸ್ಕ್ ಫರ್ಸ್‍ನಿಂದ ಸಹಕಾರ.

ನಿರ್ಣಯ 6

ಅಡಕೆಯನ್ನು ಉಪಯೋಗಿಸಿಕೊಂಡು ಪರ್ಯಾಯ ಪ್ರಯೋಗಗಳಿಗೆ ಟಾಸ್ಕ್ ಫೋರ್ಸ್‍ನಿಂದ ಹೆಚ್ಚಿನ ಸಹಕಾರ ನೀಡಲು ನಿರ್ಧಾರ.

ನಿರ್ಣಯ 7

ಎಂ.ಎಸ್.ರಾಮಯ್ಯ  ವಿವಿ, ಚೌಡಪ್ಪ ಅವರ ನೇತೃತ್ವದಲ್ಲಿ ಅಡಕೆ ಕುರಿತ ಸಂಶೋಧನೆಗೆ ತಂತ್ರಜ್ಞರ ತಂಡ.

ನಿರ್ಣಯ 8

ಅಡಕೆಯ ಉತ್ಪಾದನಾ ವೆಚ್ಚ ಕುರಿತು ವರದಿ ನೀಡಲು ತೋಟಗಾರಿಕ ಇಲಾಖೆ ಜೊತೆ ಸೇರಿ ಮಾಹಿತಿ ಸಂಗ್ರಹಿಸಲು ಒಂದು ತಂಡ ರಚನೆ. ಹದಿನೈದು ದಿನದೊಳಗೆ ವರದಿ ಸಲ್ಲಿಸಲು ಸೂಚಿಸಲಾಗಿದೆ.

ಶಾಸಕ ಹರತಾಳು ಹಾಲಪ್ಪ, ಮಲೆನಾಡು ಅಭಿವೃದ್ಧಿ ಮಂಡಳಿ ಅಧ್ಯಕ್ಷ ಗುರುಮೂರ್ತಿ ಸೇರಿದಂತೆ ಹಲವರು ಸಭೆಯಲ್ಲಿ ಭಾಗವಹಿಸಿದ್ದರು.

145425133 1325025337858883 4413647035749605624 n.jpg? nc cat=105&ccb=2& nc sid=8bfeb9& nc ohc=6HieL GgYPMAX94OgBm& nc ht=scontent.fblr4 2

146873372 1325025401192210 1369720821140049396 n.jpg? nc cat=106&ccb=2& nc sid=8bfeb9& nc ohc=D78CXUz06o0AX E0fJE& nc ht=scontent.fblr4 3

146655722 1325025421192208 5270076798062992868 n.jpg? nc cat=107&ccb=2& nc sid=8bfeb9& nc ohc=bsGWjJrzaKsAX8d PQp& nc ht=scontent.fblr4 2

147252904 1325025457858871 2713960359616963433 n.jpg? nc cat=105&ccb=2& nc sid=8bfeb9& nc ohc=MNFNcDYxJhwAX8m Wq1& nc ht=scontent.fblr4 2

147788393 1325025491192201 4284661783072225108 n.jpg? nc cat=105&ccb=2& nc sid=8bfeb9& nc ohc=XYHF6b 1qY0AX T3b G& nc ht=scontent.fblr4 2

147585614 1325025511192199 3511579770182153137 n.jpg? nc cat=105&ccb=2& nc sid=8bfeb9& nc ohc=K2EQJy5jMzkAX BNW c& nc oc=AQkzytK0 Glz 01WPAfkJzbxuqx2mnO8jTFNIRKItsYXiXU7marQA po75N48u6KRLvnds2O8e5269poEbiBKpNS& nc ht=scontent.fblr4 2

ಶಿವಮೊಗ್ಗ ಲೈವ್‍ಗೆ ಸುದ್ದಿ ನೀಡಲು ಕರೆ ಮಾಡಿ 9964634494

ವಾಟ್ಸಪ್‍ನಲ್ಲಿ ಸುದ್ದಿಗಾಗಿ 7411700200

ಶಿವಮೊಗ್ಗ ಲೈವ್ ಈ ಮೇಲ್ shivamoggalive@gmail.com

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment