ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 17 APRIL 2023
SHIMOGA : ಸಾರ್ವಜನಿಕರು 50 ಸಾವಿರ ರೂ.ಗಿಂತಲೂ ಹೆಚ್ಚಿನ ಹಣ ಹೊಂದಿದ್ದರೆ ಅದನ್ನು ಚುನಾವಣಾಧಿಕಾರಿಗಳು ವಶಕ್ಕೆ (Seized) ಪಡೆಯಲಿದ್ದಾರೆ. ಸಮರ್ಪಕ ದಾಖಲೆ ಒದಗಿಸಿದರೆ ಹಣ ಹಿಂತಿರುಗಿಸಲಾಗುತ್ತದೆ ಎಂದು ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ಮತ್ತು ಜಿಲ್ಲಾ ರಕ್ಷಣಾಧಿಕಾರಿ ಮಿಥುನ್ ಕುಮಾರ್ ಅವರು ತಿಳಿಸಿದರು.
ಮತ್ತಷ್ಟು ಸುದ್ದಿ ಕೆಳಗಿದೆ ಸುಲಭ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ ಮೊಬೈಲ್ ನಂಬರ್ : 9972194422
ಪ್ರೆಸ್ ಟ್ರಸ್ಟ್ ಮತ್ತು ಶಿವಮೊಗ್ಗ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಆಯೋಜಿಸಿದ್ದ ಸಂವಾದದಲ್ಲಿ ಮಾತನಾಡಿದ ಅವರು, ಹಣಕ್ಕೆ ಸೂಕ್ತ ದಾಖಲೆ ಒದಗಿಸಬೇಕು ಎಂದು ತಿಳಿಸಿದರು.
ಜಿಲ್ಲಾಧಿಕಾರಿ ಹೇಳಿದ್ದೇನು?
ಬೇರೆ ಸಮಯದಲ್ಲಿಯು 50 ಸಾವಿರ ರೂ.ಗಿಂತಲು ಹೆಚ್ಚಿನ ಹಣವನ್ನು ತಮ್ಮ ಬಳಿ ಇಟ್ಟುಕೊಳ್ಳುವಂತಿಲ್ಲ. ಚುನಾವಣೆ ಸಮಯದಲ್ಲಿ 50 ಸಾವಿರಕ್ಕಿಂತಲೂ ಹೆಚ್ಚು ಹಣ ಹೊಂದಿದ್ದರೆ ಅಥವಾ ಸಾಗಿಸುತ್ತಿದ್ದರೆ ಅದನ್ನು ಚುನಾವಣಾಧಿಕಾರಿಗಳು ವಶಕ್ಕೆ (Seized) ಪಡೆಯಲಿದ್ದಾರೆ. ಸೂಕ್ತ ದಾಖಲೆ ಒದಗಿಸಿದರೆ ಹಣವನ್ನು ಮರಳಿಸಲಾಗುತ್ತದೆ ಎಂದು ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ಅವರು ತಿಳಿಸಿದರು.
ಇದನ್ನೂ ಓದಿ – ಶಿವಮೊಗ್ಗಕ್ಕೆ ಬರ್ತಿದ್ದಾರೆ ಮತ್ತಷ್ಟು ಯೋಧರು, ಚೆಕ್ ಪೋಸ್ಟ್ಗಳು ಇನ್ನಷ್ಟು ಟೈಟ್, ಸ್ಟ್ರಾಂಗ್ ರೂಂಗಳಿಗೆ ಹೈ ಸೆಕ್ಯೂರಿಟಿ
ಎಟಿಎಂನಿಂದ ಹಣ ಬಿಡಿಸಿಕೊಂಡಿದ್ದರೆ ಅದರ ಸ್ಲಿಪ್ ತೋರಿಸಬಹುದು. ಬ್ಯಾಂಕಿನಿಂದ ಹಣ ಬಿಡಿಸಿಕೊಂಡಿದ್ದರೆ ರಶೀದಿಯನ್ನು ಒದಗಿಸಬೇಕು. ಮೊಬೈಲ್ ಮೂಲಕವು ಅಕೌಂಟ್ ತೋರಿಸಬಹುದು. ಸೂಕ್ತ ದಾಖಲೆ ಒದಗಿಸಿದರೆ ಹಣ ಹಿಂತಿರುಗಿಸಲಾಗುತ್ತದೆ.
ಎರಡೇ ಗಂಟೆಯಲ್ಲಿ ಹಣ ವಾಪಸ್
ಜಿಲ್ಲಾ ರಕ್ಷಣಾಧಿಕಾರಿ ಮಿಥನ್ ಕುಮಾರ್ ಅವರು ಮಾತನಾಡಿ, 50 ಸಾವಿರ ರೂ. ವರೆಗೂ ಹಣ ಕೊಂಡೊಯ್ಯಲು ಅವಕಾಶವಿದೆ. ಎಟಿಎಂ ವಾಹನಗಳಲ್ಲಿ ಹಣ ಕೊಂಡೊಯ್ಯಲು ಸೂಕ್ತ ದಾಖಲೆ ಇರಬೇಕು. ಹಣ ಎಲ್ಲಿಂದ ಎಲ್ಲಿಗೆ ಎಷ್ಟು ಹೊತ್ತಿಗೆ ಕೊಂಡೊಯ್ಯಲಾಗುತ್ತಿದೆ ಎಂಬ ದಾಖಲೆ ಇರಲಿದೆ. ಇಬ್ಬರು ಸಶಸ್ತ್ರ ಗಾರ್ಡ್ ಇರಬೇಕು. ಸಾರ್ವಜನಿಕರು ಕೂಡ ಹಣಕ್ಕೆ ಸೂಕ್ತ ದಾಖಲೆ ಇಟ್ಟುಕೊಂಡಿದ್ದರೆ ಸಮಸ್ಯೆ ಆಗುವುದಿಲ್ಲ ಎಂದರು.
ಇನ್ನು, ಜಿಲ್ಲಾ ಪಂಚಾಯಿತಿ ಸಿಇಒ ಅವರ ನೇತೃತ್ವದಲ್ಲಿ ಕ್ಯಾಶ್ ಸೀಜರ್ ಕಮಿಟಿ ರಚಿಸಲಾಗಿದೆ. ಸಾರ್ವಜನಿಕರು ತಮ್ಮ ಹಣ ಸೀಜ್ ಆಗಿದ್ದರೆ ಈ ಸಮಿತಿಗೆ ದಾಖಲೆಗಳನ್ನು ಒದಗಿಸಬೇಕು. ದಾಖಲೆಗಳು ಸಮರ್ಪಕವಾಗಿದ್ದರೆ ಹಣ ಹಿಂತಿರುಗಿಸಲಾಗುತ್ತಿದೆ. ಕೆಲವು ಪ್ರಕರಣಗಳಲ್ಲಿ ಹಣ ಸೀಜ್ ಆದ ಎರಡೇ ಗಂಟೆಯಲ್ಲಿ ದಾಖಲೆ ಪರಿಶೀಲಿಸಿ ಹಿಂದಿರುಗಿಸಲಾಗಿದೆ ಎಂದರು.