ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 17 APRIL 2023
SHIMOGA : ಪ್ರತಿ ಅಭ್ಯರ್ಥಿಯ ಚುನಾವಣೆ ಖರ್ಚು (Election Expenditure) ವೆಚ್ಚದ ಮೇಲೆ ಚುನಾವಣಾ ಆಯೋಗ ಕಠಿಣ ನಿಗಾ ವಹಿಸಿದೆ. ನಾಮಪತ್ರ ಸಲ್ಲಿಕೆ ದಿನದಿಂದ ಚುನಾವಣೆ ಕಾರ್ಯ ಮುಗಿಯುವವರೆಗಿನ ಪ್ರತಿ ಹಂತದಲ್ಲಿನ ಖರ್ಚು ವೆಚ್ಚದ ಮಾಹಿತಿಯನ್ನು ಒದಗಿಸಬೇಕಾಗುತ್ತದೆ ಎಂದು ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ಅವರು ತಿಳಿಸಿದರು.
ಮತ್ತಷ್ಟು ಸುದ್ದಿ ಕೆಳಗಿದೆ ಸುಲಭ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ ಮೊಬೈಲ್ ನಂಬರ್ : 9972194422
ಪ್ರೆಸ್ ಟ್ರಸ್ಟ್ ಮತ್ತು ಶಿವಮೊಗ್ಗ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಆಯೋಜಿಸಿದ್ದ ಸಂವಾದದಲ್ಲಿ ಭಾಗವಹಿಸಿದ್ದ ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ಅವರು, ಚುನಾವಣೆಗೆ ಪ್ರತಿ ಅಭ್ಯರ್ಥಿಯು 40 ಲಕ್ಷ ರೂ.ವರೆಗೆ ಖರ್ಚು ಮಾಡಬಹುದು ಎಂದರು.
» ವಾಟ್ಸಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ |
» ಫೇಸ್ಬುಕ್ ಮೆಸೆಂಜರ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ |
ಸಂಭ್ರಮಾಚರಣೆ ಖರ್ಚು ಕೂಡ ಗಣನೆಗೆ
ಅಭ್ಯರ್ಥಿಯು ಚುನಾವಣೆಗೆ ನಡೆಸುವ ಪ್ರತಿ ಖರ್ಚು ವೆಚ್ಚವನ್ನು (Election Expenditure) ಗಣನೆಗೆ ತೆಗೆದುಕೊಳ್ಳಲಾಗುತ್ತದೆ. ಅಭ್ಯರ್ಥಿ ಹೆಸರಿನಲ್ಲಿ ಪ್ರತ್ಯೇಕ ಬ್ಯಾಂಕ್ ಖಾತೆ ತೆರೆದು, ಅದರ ಮೂಲಕವೆ ಚುನಾವಣೆ ಖರ್ಚು ವೆಚ್ಚ ಮಾಡಬೇಕು. ನಾಮಪತ್ರ ಸಲ್ಲಿಸುವ ದಿನಾಂಕದಿಂದ ಅಭ್ಯರ್ಥಿಯ ಖರ್ಚುಗಳು ಗಣನೆಗೆ ತೆಗೆದುಕೊಳ್ಳಲಾಗುತ್ತದೆ ಎಂದರು.
ಇದನ್ನೂ ಓದಿ – ನೀತಿ ಸಂಹಿತೆ, ಏನಿದು? ಹೇಗಿರುತ್ತೆ? ಜನ ತಿಳಿದುಕೊಳ್ಳಬೇಕಾದ 10 ಸಂಗತಿ ಇಲ್ಲಿದೆ
ಚುನಾವಣೆ ಪ್ರಕ್ರಿಯೆ ಪೂರ್ಣಗೊಳ್ಳುವವರೆಗೂ ಅಭ್ಯರ್ಥಿಯ ವೆಚ್ಚದ ಕುರಿತು ಮಾಹಿತಿ ನೀಡಬೇಕು. ಗೆದ್ದ ಅಭ್ಯರ್ಥಿ ಸಂಭ್ರಮಾಚರಣೆ ಮಾಡಿದರೆ, ಆ ಹಣವು ಚುನಾವಣಾ ವೆಚ್ಚಕ್ಕೆ ಬರಲಿದೆ ಎಂದರು. ಅಭ್ಯರ್ಥಿಗಳ ಖರ್ಚು ವೆಚ್ಚ ಪರಿಶೀಲಿಸಲು ಕ್ಷೇತ್ರವಾರು ಅಧಿಕಾರಿಗಳನ್ನು ನಿಯೋಜಿಸಲಾಗಿದೆ.