ಶಿವಮೊಗ್ಗ: ಸೆ.6ರಂದು ಶಿವಮೊಗ್ಗದ ಹಿಂದೂ ಮಹಾಸಭಾ ಗಣಪತಿ (ganpati) ರಾಜಬೀದಿ ಉತ್ಸವ ನಡೆಯಲಿದೆ. ಇದಕ್ಕಾಗಿ ಸಿದ್ಧತೆ ಆರಂಭವಾಗಿದ್ದು, ನಗರ ಕೇಸರಮಯಗೊಂಡಿದೆ. ಅಲ್ಲಲ್ಲಿ ಮಹಾದ್ವಾರಗಳನ್ನು ನಿರ್ಮಿಸಲಾಗಿದೆ. ಗಾಂಧಿ ಬಜಾರ್ ಮುಂಭಾಗ ಪ್ರತಿ ವರ್ಷದಂತೆ ಈ ಬಾರಿಯು ವಿಭಿನ್ನ ಮಹಾದ್ವಾರ ಸ್ಥಾಪಿಸಲಾಗಿದೆ.
ಎಲ್ಲೆಲ್ಲಿ ಹೇಗಿದೆ ಅಲಂಕಾರ?
ಸಮುದ್ರ ಮಂಥನ ಮಹಾದ್ವಾರ ರೆಡಿ
ಪ್ರತಿ ವರ್ಷದಂತೆ ಈ ಬಾರಿಯು ವಿಭಿನ್ನವಾದ ಮಹಾದ್ವಾರ ನಿರ್ಮಿಸಲಾಗಿದೆ. ದೇವತೆಗಳು ಮತ್ತು ರಾಕ್ಷಸರ ಮಧ್ಯೆ ಅಮೃತಕ್ಕಾಗಿ ಹಾಲಿನ ಸಮುದ್ರವನ್ನು ಕಡೆಯುವ ಕತೆಯನ್ನು ಈ ಬಾರಿಯ ಮಹಾದ್ವಾರ ಸ್ಥಾಪಿಸಲಾಗಿದೆ.
ಒಂದೆಡೆ ದೇವತೆಗಳು, ಮತ್ತೊಂದೆಡೆ ರಾಕ್ಷಕರು, ಸಮುದ್ರವನ್ನು ಕಡೆಯಲು ಬಳಸಿದ್ದ ಹಾವು, ಈಶ್ವರನು ವಿಷ ಕುಡಿದು ನೀಲಕಂಠನಾದದ್ದನ್ನು ಮಹಾದ್ವಾರದಲ್ಲಿ ರೂಪಿಸಲಾಗಿದೆ.

ಜೀವನ್ ಕಲಾಕೇಂದ್ರದ ಕಲಾವಿದರು ಮಹಾದ್ವಾರ ನಿರ್ಮಿಸಿದ್ದಾರೆ. ಕಳೆದ ರಾತ್ರಿ ಮಹಾದ್ವಾರ ಸ್ಥಾಪಿಸಲಾಗಿದೆ. ಬೆಳಗ್ಗೆಯಿಂದ ದೊಡ್ಡ ಸಂಖ್ಯೆಯ ಜನರು ಗಾಂಧಿ ಬಜಾರ್ ಮುಂಭಾಗ ಬಂದು ಫೋಟೊ, ಸೆಲ್ಫಿ ಕ್ಲಿಕ್ಕಿಸಿಕೊಳ್ಳುತ್ತಿದ್ದಾರೆ.

ಗಾಂಧಿ ಬಜಾರ್ ಕೇಸರಿಮಯ
ಹಿಂದೂ ಕೇಸರಿ ಅಲಂಕಾರ ಸಮಿತಿ ವತಿಯಿಂದ ಗಾಂಧಿ ಬಜಾರ್ನಲ್ಲಿ ಅಲಂಕಾರ ಮಾಡಲಾಗಿದೆ. ಗಾಂಧಿ ಬಜಾರ್ ಮುಖ್ಯ ರಸ್ತೆಯಲ್ಲಿ ಕೇಸರಿ ಬಂಟಿಂಗ್ಸ್, ಧ್ವಜಗಳನ್ನು ಕಟ್ಟಲಾಗಿದೆ. ಇದರ ಫೋಟೊಗಳು ಇಲ್ಲಿವೆ.




ಇದನ್ನೂ ಓದಿ » ಭದ್ರಾವತಿಯಲ್ಲಿ ಇವತ್ತು ಹಿಂದೂ ಮಹಾಸಭಾ ಗಣಪತಿ ಮೆರವಣಿಗೆ, ಹೇಗಿದೆ ಸಿದ್ಧತೆ?
hindu mahasabha ganpati shimoga
