SHIVAMOGGA LIVE NEWS |10 JANUARY 2023
ಶಿವಮೊಗ್ಗ : ನಗರದಲ್ಲಿ ರಾಜ್ಯ ನಾಯಕರ ಮುಂದೆಯೆ ಆಮ್ ಆದ್ಮಿ ಪಕ್ಷದ (aap) ಅಸಮಾಧಾನ ಸ್ಪೋಟಗೊಂಡಿದೆ. ಸುದ್ದಿಗೋಷ್ಠಿಗೆ ಆಹ್ವಾನ ನೀಡಿಲ್ಲ, ಗುಂಪುಗಾರಿಕೆ ನಡೆಸಲಾಗುತ್ತಿದೆ ಎಂದು ಟಿಕೆಟ್ ಆಕಾಂಕ್ಷಿಯೊಬ್ಬರು ಬಹಿರಂಗವಾಗಿ ಆಕ್ರೋಶ (Altercation) ವ್ಯಕ್ತಪಡಿಸಿದರು.

PHOTO | ಶಿವಮೊಗ್ಗದ ಜ್ಯೂವೆಲ್ ರಾಕ್ ಹೊಟೇಲ್ ನಲ್ಲಿ ಸುದ್ದಿಗೋಷ್ಠಿ ಬಳಿಕ ಎಎಪಿ ಟಿಕೆಟ್ ಆಕಾಂಕ್ಷಿ ರವಿ ಕಿಶನ್ ಆಸಮಾಧಾನ ಹೊರ ಹಾಕಿದರು.
ಎಎಪಿ ರಾಜ್ಯ ಉಪಾಧ್ಯಕ್ಷ, ಮಾಜಿ ಐಪಿಎಸ್ ಅಧಿಕಾರಿ ಭಾಸ್ಕರ್ ಅವರು ಶಿವಮೊಗ್ಗಕ್ಕೆ ಭೇಟಿ ನೀಡಿದ್ದಾಗ ಅಸಮಾಧಾನ ಸ್ಪೋಟಗೊಂಡಿದೆ. ನಗರದ ಹೊಟೇಲ್ ಒಂದರಲ್ಲಿ ಭಾಸ್ಕರ್ ರಾವ್ ಅವರ ಸುದ್ದಿಗೋಷ್ಠಿ ಆಯೋಜಿಸಲಾಗಿತ್ತು. ಇದಕ್ಕೆ ತಮ್ಮನ್ನು ಆಹ್ವಾನಿಸಿಲ್ಲ ಎಂದು ಶಿವಮೊಗ್ಗ ನಗರದ ಟಿಕೆಟ್ ಆಕಾಂಕ್ಷಿ ರವಿ ಕಿಶನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. (Altercation)

ಪತ್ರಿಕಾಗೋಷ್ಠಿ ಮುಗಿಸಿ ಭಾಸ್ಕರ್ ರಾವ್ ಅವರು ಕಾರು ಹತ್ತುತ್ತಿದ್ದಂತೆ ರವಿ ಕಿಶನ್ ಅಸಮಾಧಾನ ಹೊರ ಹಾಕಿದರು. ಸುದ್ದಿಗೋಷ್ಠಿಯ ಸ್ಥಳವನ್ನು ಧಿಡೀರ್ ಬದಲಾವಣೆ ಮಾಡಲಾಗಿದೆ. ಈ ಕುರಿತು ಮುಖಂಡರಿಗೆ ಮಾಹಿತಿ ನೀಡಿಲ್ಲ. ಪಕ್ಷದಲ್ಲಿ ಗುಂಪುಗಾರಿಕೆ ನಡೆಸಲಾಗುತ್ತಿದೆ ಎಂದು ಆಕ್ರೋಶ ಹೊರ ಹಾಕಿದರು. ಈ ವೇಳೆ ಮತ್ತೊಬ್ಬ ಟಿಕೆಟ್ ಆಕಾಂಕ್ಷಿ ನೇತ್ರಾವತಿ ಅವರ ಬೆಂಬಲಿಗರು ಸಮಜಾಯಿಷಿ ನೀಡಿ, ಸಮಾಧಾನ ಮಾಡಲು ಯತ್ನಿಸಿ ವಿಫಲವಾದರು.
ಇದನ್ನೂ ಓದಿ –

LATEST NEWS
- ಬೈಕ್‌ಗೆ ಡಿಕ್ಕಿ ತಪ್ಪಿಸಲು ಹೋಗಿ ವಿದ್ಯುತ್ ಕಂಬಕ್ಕೆ ಗುದ್ದಿ ಪಲ್ಟಿಯಾದ ಖಾಸಗಿ ಬಸ್

- ತಾಳಗುಪ್ಪ ಇಂಟರ್‌ಸಿಟಿ ರೈಲು, ಬೆಂಗಳೂರು ಮಹಿಳೆಯ ದೂರು, ದಾವಣಗೆರೆಯ ವ್ಯಕ್ತಿ ಅರೆಸ್ಟ್, ಆಗಿದ್ದೇನು?

- ಶಿವಮೊಗ್ಗದಲ್ಲಿ ರಸ್ತೆ ಬದಿಯ ಮರದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಯುವಕನ ಮೃತದೇಹ

- ಮೈತ್ರಾದೇವಿ ಯಡಿಯೂರಪ್ಪ ಸ್ಮರಣಾರ್ಥ ಚಿನ್ನದ ಪದಕ

- ಶಿವಮೊಗ್ಗ, ಹೊಸನಗರದ ವಿವಿಧೆಡೆ ಇವತ್ತು ಇಡೀ ದಿನ ಕರೆಂಟ್ ಇರಲ್ಲ

About The Editor
ನಿತಿನ್ ಆರ್.ಕೈದೊಟ್ಲು


CLICK HERE TO JOIN SHIVAMOGGA LIVE WHATSAPP GROUP







