20 ವರ್ಷದಿಂದ ಮನೆ ಕಟ್ಟದೆ ಖಾಲಿ ಉಳಿದಿದ್ದ 543 ನಿವೇಶನ ರದ್ದುಗೊಳಿಸಿದ ಶಿವಮೊಗ್ಗ ಪಾಲಿಕೆ

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

 SHIVAMOGGA LIVE NEWS 

SHIMOGA |  20 ವರ್ಷವಾದರೂ ಮನೆ ನಿರ್ಮಾಣ ಮಾಡದ ಹಿನ್ನೆಲೆ ಬೊಮ್ಮನಕಟ್ಟೆ ಆಶ್ರಯ (ASHRAYA) ಬಡಾವಣೆಯ 543 ನಿವೇಶನಗಳನ್ನು ರದ್ದು ಮಾಡಲಾಗಿದೆ ಎಂದು ಮಹಾನಗರ ಪಾಲಿಕೆ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Shimoga Nanjappa Hospital

ಮಹಾನಗರ ಪಾಲಿಕೆಯ ಆಶ್ರಯ (ASHRAYA) ಯೋಜನೆಯಡಿ, 1997ರಲ್ಲಿ  ಬೊಮ್ಮನಕಟ್ಟೆ ಆಶ್ರಯ ಬಡಾವಣೆಯ ‘ಎ’ ಇಂದ ‘ಜಿ’ ಬ್ಲಾಕ್‍ವರೆಗೆ ನಿವೇಶನ ಹಂಚಲಾಗಿತ್ತು. ನಿವೇಶನ ರಹಿತರಿಗೆ ನಿವೇಶನ ಹಂಚಿಕೆ ಮಾಡಿ 20 ವರ್ಷವಾದರೂ ಮನೆ ನಿರ್ಮಿಸಿಕೊಂಡು ವಾಸವಿರಲಿಲ್ಲ. ಈ ಹಿನ್ನೆಲೆ, ಆಶ್ರಯ ಸಮಿತಿ ಸಭೆ ನಡೆಸಿ, ಖಾಲಿ ಇರುವ ನಿವೇಶನಗಳ ಮಹಜರ್ ಮಾಡಲಾಗಿತ್ತು. 543 ಖಾಲಿ ನಿವೇಶನಗಳನ್ನು ರದ್ದು ಪಡಿಸಲಾಗಿದೆ ಎಂದು ತಿಳಿಸಲಾಗಿದೆ.

ಎಲ್ಲೆಲ್ಲಿ ಎಷ್ಟು ನಿವೇಶನ ರದ್ದು?

ಎ ಬ್ಲಾಕ್‍ನಲ್ಲಿರುವ ಒಟ್ಟು 44 ನಿವೇಶನಗಳು, ಬಿ ಬ್ಲಾಕ್‍ನಲ್ಲಿ 78, ಸಿ ಬ್ಲಾಕ್‍ನಲ್ಲಿ 97 ನಿವೇಶನಗಳು, ಡಿ ಬ್ಲಾಕ್‍ನಲ್ಲಿ 78, ಇ ಬ್ಲಾಕ್‍ನಲ್ಲಿ 51, ಎಫ್ ಬ್ಲಾಕ್‍ನಲ್ಲಿ 107 ಮತ್ತು ಜಿ ಬ್ಲಾಕ್‍ನಲ್ಲಿ 88 ಸೇರಿ ಒಟ್ಟು 543 ನಿವೇಶನಗಳು ಖಾಲಿ ಇದೆ. ಇವುಗಳನ್ನು ರದ್ದುಪಡಿಸಲಾಗಿದೆ.

ನಿವೇಶನಗಳನ್ನು ಪಡೆದ ಫಲಾನುಭವಿಗಳು ಅಲ್ಲಿ ಮನೆ ನಿರ್ಮಾಣ ಮಾಡಿಲ್ಲ. ನಿವೇಶನದಾರರು ಹಕ್ಕುಪತ್ರದ ಷರತ್ತನ್ನು ಉಲ್ಲಂಘಿಸಿದ್ದಾರೆ. ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯನ್ನು ಸದುಪಯೋಗಪಡಿಸಿಕೊಂಡಿಲ್ಲ. ಈ ಕುರಿತು ಮೇ 25ರಂದು ಸಾರ್ವಜನಿಕ ಪ್ರಕಟಣೆ ಹೊರಡಿಸಲಾಗಿತ್ತು.  ಬಂದ ಆಕ್ಷೇಪಣೆಗಳನ್ನು ಇತ್ಯರ್ಥಪಡಿಸಲಾಗಿದೆ ಎಂದು ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕ್ಲಿಕ್ ಮಾಡಿ ಇದನ್ನೂ ಓದಿ ಶಿವಮೊಗ್ಗ ನಗರದ ಅರ್ಧ ಭಾಗದಲ್ಲಿ ನಾಳೆ ಇಡೀ ದಿನ ಕರೆಂಟ್ ಇರಲ್ಲ

ADVERTISEMENT

  • ಆರೋಗ್ಯ ತುರ್ತು ಸಂದರ್ಭದಲ್ಲಿ ಹಣಕಾಸು ಹೊಂದಿಸುವುದು ಸುಲಭವೇನಲ್ಲ. ಒಂದು ವೇಳೆ INSURANCE ಇದ್ದರೆ, ನಿರಮ್ಮಳವಾಗಿರಬಹುದು ಅಲ್ಲವೆ? ಈಗಲೆ INSURANCE ಮಾಡಿಸಿ. ಒಳ್ಳೆಯ INSURANCE PLANSಗಾಗಿ ಕರೆ ಮಾಡಿ – LIC LIFE INSURANCE – ಅನಿಲ್ 9538414151, ಪ್ರಶಾಂತ್ 9972194422
  • ಸುಂದರ ಮನೆ ಕಟ್ಟಬೇಕು, ಸ್ವಂತ ಮನೆಯಲ್ಲಿ ನೆಮ್ಮದಿಯ ಬದುಕು ಸಾಗಿಸಬೇಕು ಅನ್ನವು ಆಸೆ ಯಾರಿಗಿಲ್ಲ? ಇನ್ಯಾಕೆ ತಡ? ಮನೆ ಕಟ್ಟಲು LICಯಿಂದ HOUSING LOAN ಲಭ್ಯವಿದೆ. ಇವತ್ತೇ ಸಂಪರ್ಕಿಸಿ – ಪ್ರಶಾಂತ್ 9972194422

SHIVAMOGGA LIVE WHATSAPP

ನಿಮ್ಮೂರು, ನಿಮ್ಮ ಏರಿಯಾದ ಕಾರ್ಯಕ್ರಮಗಳು, ಸಮಸ್ಯೆಗಳು ಸುದ್ದಿಯಾಗಬೇಕಾ? ನೀವೇ ವರದಿಗಾರರಾಗಿ. ವಿಡಿಯೋ, ಫೋಟೊ ಮಾಡಿ 7411700200 ಮೊಬೈಲ್ ನಂಬರ್’ಗೆ ವಾಟ್ಸಪ್ ಮಾಡಿ. ನೆನಪಿರಲಿ, ಸುದ್ದಿ ಪ್ರಕಟಣೆಗೆ ನಾವು ಹಣ ಪಡೆಯುವುದಿಲ್ಲ.

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

© ಶಿವಮೊಗ್ಗ ಲೈವ್‌ : September 17, 2022

Leave a Comment