ಶಿವಮೊಗ್ಗ – ಭದ್ರಾವತಿ KSRTC ಬಸ್ ಕಂಡಕ್ಟರ್ ಮೇಲೆ ಏಕಾಏಕಿ ಹಲ್ಲೆ

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

SHIVAMOGGA LIVE NEWS | ASSAULT| 05 ಮೇ 2022

ಶಿವಮೊಗ್ಗದ KSRTC ಬಸ್ ನಿಲ್ದಾಣದ ಮುಂಭಾಗ ಶಿವಮೊಗ್ಗ- ಭದ್ರಾವತಿ ಸರ್ಕಾರಿ ಬಸ್ ಕಂಡಕ್ಟರ್ ಮೇಲೆ ವ್ಯಕ್ತಿಯೊಬ್ಬ ಏಕಾಏಕಿ ಹಲ್ಲೆ ನಡೆಸಿದ್ದಾನೆ. ಹೆಲ್ಮೆಟ್’ನಿಂದ ಹೊಡೆದಿದ್ದಾನೆ. ಡ್ರೈವರ್ ಮತ್ತು ನಿಲ್ದಾಣಾಧಿಕಾರಿ ಅವರು ಜಗಳ ಬಿಡಿಸಿದ್ದಾರೆ.

ಕಂಡಕ್ಟರ್ ನಾಗರಾಜ್ ಹಲ್ಲೆಗೊಳಗಾದವರು. ನಾಗರಾಜ್ ಅವರು ಶಿವಮೊಗ್ಗ- ಭದ್ರಾವತಿ KSRTC ಬಸ್ ನಿರ್ವಾಹಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ನಿಲ್ದಾಣದ ಮುಂದೆ ಭದ್ರಾವತಿಗೆ ತೆರಳುವ ಬಸ್ಸುಗಳು ನಿಲ್ಲುವ ಪ್ಲಾಟ್ ಫಾರಂನಲ್ಲಿ ನಿಂತಿದ್ದಾಗ, ಮನೆಯವರು ಕರೆ ಮಾಡಿದ್ದಾರೆ.

ನಾಗರಾಜ್ ಅವರು ಮೊಬೈಲ್’ನಲ್ಲಿ ಮಾತನಾಡುತ್ತಿದ್ದಾಗ ವ್ಯಕ್ತಿಯೊಬ್ಬ ಏಕಾಏಕಿ ದಾಳಿ ಮಾಡಿದ್ದಾನೆ. ‘ಮೊಬೈಲ್’ನಲ್ಲಿ ಹುಡುಗಿಯರ ಜೊತೆಗೆ ಮಾತನಾಡುತ್ತಿದ್ದೀಯಾ’ ಎಂದು ಆರೋಪಿಸಿ, ತನ್ನ ಬಳಿ ಇದ್ದ ಹೆಲ್ಮೆಟ್’ನಿಂದ ಕಂಡಕ್ಟರ ನಾಗರಾಜ್ ಅವರಿಗೆ ಹೊಡೆದಿದ್ದಾನೆ. ಬಸ್ ಚಾಲಕ ಕೊಳ್ಳಿ ಬಸವರಾಜ್ ಮತ್ತು ನಿಲ್ದಾಣಾಧಿಕಾರಿ ಲಕ್ಷ್ಮಣ್ ಅವರ ತಕ್ಷಣ ಬಂದು ಜಗಳ ಬಿಡಿಸಿದ್ದಾರೆ.

ಜಗಳ ಬಿಡಿಸಿದ ಬಳಿಕ ಹಲ್ಲೆ ನಡೆಸಿದವನ ಹೆಸರು ವಿಚಾರಿಸಿದಾಗ ಚಾಂದ್ ಪಾಷಾ ಎಂದು ಗೊತ್ತಾಗಿದೆ. ಕರ್ತವ್ಯದಲ್ಲಿದ್ದಾಗ ತನ್ನ ಮೇಲೆ ಹಲ್ಲೆ ನಡೆಸಿದವನ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಕಂಡಕ್ಟರ್ ನಾಗರಾಜ್ ಅವರ ದೂರ ನೀಡಿದ್ದಾರೆ. ದೊಡ್ಡಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದ. ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

ಇದನ್ನೂ ಓದಿ – ಶಿವಮೊಗ್ಗ KSRTC ಬಸ್ ನಿಲ್ದಾಣಕ್ಕೆ ಲ್ಯಾಪ್ ಟಾಪ್ ಜೊತೆ ಬಂದ ವಿದ್ಯಾರ್ಥಿನಿಗೆ ಶಾಕ್

Shimoga Nanjappa Hospital

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

© ಶಿವಮೊಗ್ಗ ಲೈವ್‌ : May 5, 2022

Leave a Comment