ಶಿವಮೊಗ್ಗ ಲೈವ್.ಕಾಂ | SHIMOGA NEWS | 16 APRIL 2021
ಎಟಿಎಂನಿಂದ ಹಣ ಡ್ರಾ ಮಾಡಿಕೊಡಲು ಸಹಾಯ ಮಾಡುವ ನೆಪದಲ್ಲಿ ಹೊಳೆಹೊನ್ನೂರಿನ ರೈತರೊಬ್ಬರಿಗೆ ವಂಚಕನೊಬ್ಬ 35 ಸಾವಿರ ರೂ. ಮೋಸ ಮಾಡಿದ್ದಾನೆ.
ಶಿವಮೊಗ್ಗದ ಬಿ.ಹೆಚ್.ರಸ್ತೆಯ ಎಟಿಎಂ ಕೇಂದ್ರವೊಂದರಲ್ಲಿ ಘಟನೆ ಸಂಭವಿಸಿದೆ. ಹಣ ಡ್ರಾ ಮಾಡಲು ರೈತರೊಬ್ಬರು ಸ್ಥಳೀಯರೊಬ್ಬರ ನೆರವು ಪಡೆದಿದ್ದರು. ಹಣ ಡ್ರಾ ಮಾಡಿದ ಬಳಿಕ ರೈತನ ಎಟಿಎಂ ಬದಲು ಬೇರೊಂದು ಎಟಿಎಂ ಕಾರ್ಡನ್ನು ಆ ವಂಚಕ ರೈತನಿ ಕೈಗಿಟ್ಟಿದ್ದಾನೆ.
ಬಳಿಕ ಸಾಗರದ ಎಟಿಎಂ ಕೇಂದ್ರವೊಂದರಲ್ಲಿ ವಂಚಕ 35 ಸಾವಿರ ರೂ. ಹಣವನ್ನು ವಿಥ್ ಡ್ರಾ ಮಾಡಿದ್ದಾನೆ. ಈ ಸಂಬಂಧ ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶಿವಮೊಗ್ಗ ಲೈವ್ಗೆ ಸುದ್ದಿ ನೀಡಲು ಕರೆ ಮಾಡಿ 9964634494
ವಾಟ್ಸಪ್ನಲ್ಲಿ ಸುದ್ದಿಗಾಗಿ 7411700200
ಶಿವಮೊಗ್ಗ ಲೈವ್ ಈ ಮೇಲ್ [email protected]