ಶಿವಮೊಗ್ಗ ATNC ಕಾಲೇಜು ವಿದ್ಯಾರ್ಥಿಗೆ ಮುಖ್ಯಮಂತ್ರಿ ಬಂಗಾರದ ಪದಕ

SHIVAMOGGA LIVE NEWS | 10 FEBRURARY 2023

SHIMOGA : ನಗರದ ATNC COLLEGE ವಿದ್ಯಾರ್ಥಿಗೆ ಮುಖ್ಯಮಂತ್ರಿ ಬಂಗಾರದ ಪದಕ ಲಭಿಸಿದೆ. NCC 20 ಕರ್ನಾಟಕ ಬೆಟಾಲಿಯನ್ ಬೆಸ್ಟ್ ಕೆಡೆಟ್ ವಿಭಾಗದಲ್ಲಿ ಕಾಲೇಜಿನ ಎಸ್.ಕೆ.ದೀಕ್ಷಿತ್ ಅವರಿಗೆ ಬಂಗಾರದ ಪದಕ ಲಭಿಸಿದೆ.

ATNC-college-student-SK-Deekshit-Gold-Medal

ATNC COLLEGE ತೃತೀಯ ಬಿ.ಕಾಂ ವಿದ್ಯಾರ್ಥಿ ಎಸ್.ಕೆ.ದೀಕ್ಷಿತ್ ಅವರು ಫೆ.7ರಂದು ಬೆಂಗಳೂರಿನಲ್ಲಿ ನಡೆದ ಕರ್ನಾಟಕ ಮತ್ತು ಗೋವಾ ಡೈರೆಕ್ಟರೇಟ್ ಸಮಾರಂಭದಲ್ಲಿ ಪದವಿ ಸ್ವೀಕರಿಸಿದ್ದಾರೆ. ಆಗಸ್ಟ್ 15ರಂದು ಏಕ್ ಭಾರತ್ ಶ್ರೇಷ್ಠ ಭಾರತ್ ಪಥ ಸಂಚಲನದಲ್ಲಿ ಪಾಲ್ಗೊಂಡು, ಪ್ರಧಾನ ಮಂತ್ರಿ ಔತಣಕೂಟದಲ್ಲಿಯು ಭಾಗವಹಿಸಿದ್ದರು.

ಇದನ್ನೂ ಓದಿ – ಹೈಟೆಕ್ ಬೈಕಿನಲ್ಲಿ ದೇಶ ಸಂಚಾರ, ಶಿವಮೊಗ್ಗದಿಂದ ರೈಡ್ ಆರಂಭ, ಅಲ್ಲಲ್ಲಿ ಚಿಟಿಕೆ ಮಣ್ಣು ಸಂಗ್ರಹ, ಹೇಗಿದೆ ಬೈಕ್? ಏನಿದು ರೈಡ್?

ಎಸ್.ಕೆ.ದೀಕ್ಷಿತ್ ಅವರ ಸಾಧನೆಗೆ ರಾಷ್ಟ್ರೀಯ ಶಿಕ್ಷಣ ಸಮಿತಿಯ ಆಡಳಿತ ಮಂಡಳಿ ಸದಸ್ಯರು ಮತ್ತು ಕಾಲೇಜು ಬೋಧಕ, ಬೋಧಕೇತರ ಸಿಬ್ಬಂದಿ ಅಭಿನಂದನೆ ಸಲ್ಲಿಸಿದ್ದಾರೆ.

ATNC-college-student-SK-Deekshit-Gold-Medal

ನಿಮ್ಮೂರ ಸುದ್ದಿ ಕೆಲವೇ ನಿಮಿಷದಲ್ಲಿ ಸಾವಿರ ಸಾವಿರ ಜನರನ್ನು ತಲುಪುತ್ತೆ!

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ನಮಗೆ ಕಳುಹಿಸಬಹುದು. ನಮ್ಮ ವಾಟ್ಸಪ್‌ ನಂಬರ್ 7411700200.

ನಮ್ಮ ಗ್ರೂಪ್‌ ಸೇರಿಲು ಇಲ್ಲಿ ಕ್ಲಿಕ್‌ ಮಾಡಿ

Leave a Comment