ಶಿವಮೊಗ್ಗದ ಬಿದಿರೆಯಲ್ಲಿ ಸೈಟ್ ಮಾರಾಟಕ್ಕಿದೆ. ಸಾಯಿ ಬಾಬಾ ದೇಗುಲ, ರಾಷ್ಟ್ರೀಯ ಹೆದ್ದಾರಿಗೆ ಸಮೀಪದಲ್ಲಿ 30*50 ಅಳತೆಯ ಸೈಟು ಮಾರಾಟಕ್ಕಿದೆ. ಸಂಪರ್ಕಿಸಿ: 8073449559ಸೈಟ್ ಮಾರಾಟಕ್ಕಿದೆ
SHIVAMOGGA LIVE | 5 AUGUST 2023
SHIMOGA : ವಿಳಾಸ ಕೇಳುವ ನೆಪದಲ್ಲಿ ವ್ಯಕ್ತಿಯೊಬ್ಬನ ಮೇಲೆ ಹಲ್ಲೆ ನಡೆಸಿ ನಗದು ಮತ್ತು ಮೊಬೈಲ್ ಫೋನ್ ದರೋಡೆ ಮಾಡಲಾಗಿದೆ. ಶಿವಮೊಗ್ಗದ 100 ಅಡಿ (100 Feet Road) ರಸ್ತೆಯಲ್ಲಿ ಘಟನೆ ಸಂಭವಿಸಿದೆ. ಬಿದರೆ ಗ್ರಾಮದ ಸಿ.ಕೆ.ನಾಗರಾಜು ಎಂಬುವವರು ಗಾಯಗೊಂಡಿದ್ದಾರೆ.

ನಾಗರಾಜು ಅವರು 100 ಅಡಿ ರಸ್ತೆಯ (100 Feet Road) ಬ್ಲಡ್ ಬ್ಯಾಂಕ್ ಬಳಿ ಬೈಕಿನಲ್ಲಿ ತೆರಳುತ್ತಿದ್ದರು. ಈ ವೇಳೆ ಮತ್ತೊಂದು ಬೈಕಿನಲ್ಲಿ ಬಂದ ಇಬ್ಬರು ವಿಳಾಸ ಕೇಳುವಂತೆ ನಟಿಸಿದ್ದಾರೆ. ಬೊಮ್ಮನಕಟ್ಟೆಗೆ ಹೋಗುವುದು ಹೇಗೆ ಎಂದು ವಿಚಾರಸಿದ್ದಾರೆ. ನಾಗರಾಜು ಅವರು ವಿಳಾಸ ಹೇಳುವ ಹೊತ್ತಿಗೆ ಒಬ್ಬ ಬೈಕ್ ಕೀ ತೆಗೆದುಕೊಂಡು ಕೈಯಿಂದ ಮುಖಕ್ಕೆ ಹೊಡೆದಿದ್ದಾನೆ. ಮೂಗಿಗೆ ಹೊಡೆತ ಬಿದ್ದು ರಕ್ತ ಬಂದಿದೆ.
ಇದನ್ನೂ ಓದಿ – ಶಿವಮೊಗ್ಗದ ‘ಹರೋಹರ ಜಾತ್ರೆ’ ದಿನಾಂಕ ಘೋಷಣೆ, ಜುಲೈ ಬದಲು ಆಗಸ್ಟ್ ತಿಂಗಳಲ್ಲಿ ನಡೆಯುತ್ತಿರುವುದೇಕೆ?
ಮತ್ತೊಬ್ಬ ವ್ಯಕ್ತಿ ಚಾಕು ತೋರಿಸಿ ಮೊಬೈಲ್ ಮತ್ತು ಹಣ ಕೊಡು ಎಂದು ಬೆದರಿಕೆ ಒಡ್ಡಿದ್ದಾನೆ. ನಾಗರಾಜು ಬಳಿ ಇದ್ದ 10 ಸಾವಿರ ರೂ. ನಗದು,7800 ರೂ. ಮೊತ್ತದ ಮೊಬೈಲ್ ಫೋನ್ ದರೋಡೆ ಮಾಡಿಕೊಂಡು ಇಬ್ಬರು ಪರಾರಿಯಾಗಿದ್ದಾರೆ. ಜಯನಗರ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಂಡಿದ್ದು, ತನಿಖೆ ನಡೆಯುತ್ತಿದೆ.
.jpeg)






