ಶಿವಮೊಗ್ಗದ ಬಿದಿರೆಯಲ್ಲಿ ಸೈಟ್ ಮಾರಾಟಕ್ಕಿದೆ. ಸಾಯಿ ಬಾಬಾ ದೇಗುಲ, ರಾಷ್ಟ್ರೀಯ ಹೆದ್ದಾರಿಗೆ ಸಮೀಪದಲ್ಲಿ 30*50 ಅಳತೆಯ ಸೈಟು ಮಾರಾಟಕ್ಕಿದೆ. ಸಂಪರ್ಕಿಸಿ: 8073449559ಸೈಟ್ ಮಾರಾಟಕ್ಕಿದೆ
ಶಿವಮೊಗ್ಗದಲ್ಲಿ ಬಿ.ಇಡಿ ಕೋರ್ಸ್ಗೆ ಪ್ರವೇಶಾತಿ ಆರಂಭ
SHIVAMOGGA LIVE NEWS | 25 DECEMBER 2023
SHIMOGA : ದನ ಮೇಯಿಸಲು ಹೋಗಿದ್ದ ವ್ಯಕ್ತಿ ಮೇಲೆ ಆರು ಮಂದಿ ದಾಳಿ ನಡೆಸಿ ಮೊಬೈಲ್ ಕಸಿದುಕೊಂಡು ಪರಾರಿಯಾಗಿದ್ದಾರೆ. ಈ ವೇಳೆ ಆತನ ಮೇಲೆ ಹಲ್ಲೆ ನಡೆಸಿದ್ದು, ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ.
ಡಿ.22ರಂದು ಸಂಜೆ ನದೀಮ್ ಅಹಮದ್ ಎಂಬುವವರು ಸೋಮಿನಕೊಪ್ಪದ ಜಮೀನು ಒಂದರಲ್ಲಿ ದನ ಮೇಯಿಸುತ್ತಿದ್ದರು. ಈ ಸಂದರ್ಭ ಸ್ಪ್ಲೆಂಡರ್ ಬೈಕ್ ಮತ್ತು ಟಿವಿಎಸ್ ಎಕ್ಸ್ಎಲ್ನಲ್ಲಿ ಆರು ಮಂದಿ ಆಗಮಿಸಿದ್ದು, ನದೀಮ್ ಅಹಮದ್ ಬಳಿ ಬಂದಿದ್ದಾರೆ. ಅವರ ಕೈಯಲ್ಲಿದ್ದ 16 ಸಾವಿರ ರೂ. ಮೌಲ್ಯದ ವೀವೋ ಕಂಪನಿಯ ಮೊಬೈಲ್ ಕಸಿದುಕೊಳ್ಳಲು ಯತ್ನಿಸಿದ್ದಾರೆ. ನದೀಮ್ ಅಹಮದ್ ಮೊಬೈಲ್ ಬಿಗಿಯಾಗಿ ಹಿಡಿದಿದ್ದರಿಂದ ಅವರ ಮೇಲೆ ಹಲ್ಲೆ ನಡೆಸಲಾಗಿದೆ. ವಿನೋಬನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ – ಶಿವಮೊಗ್ಗ ಸಿಟಿ ಬಸ್ಸಿನಲ್ಲಿ ಮೊಬೈಲ್ ಬಳಸಿದ ಚಾಲಕ, ಫೋಟೊ ತೆಗೆದ ಪ್ರಯಾಣಿಕ, ಮುಂದೇನಾಯ್ತು?






