ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
SHIVAMOGGA LIVE NEWS | 17 JANUARY 2023
SHIMOGA | ಹುಡುಗಿ ವಿಚಾರವಾಗಿ ನಡು ರಸ್ತೆಯಲ್ಲೇ ಸ್ಟೀಲ್ ಪೈಪಿನಿಂದ ಯುವಕನೊಬ್ಬನ ತಲೆ, ಕಾಲಿಗೆ ಹೊಡೆದು ಹಲ್ಲೆ (attack) ನಡೆಸಲಾಗಿದೆ. ಶಿವಮೊಗ್ಗದ ಬೆಂಕಿ ನಗರದಲ್ಲಿ ಘಟನೆ ಸಂಭವಿಸಿದೆ.

ನಿರಂಜನ್ (24) ಎಂಬಾತನ ಮೇಲೆ ಬೆಂಕಿ ನಗರದ ಸಮುದಾಯ ಭವನದ ಬಳಿ ದಾಳಿಯಾಗಿದೆ. ರಾತ್ರಿ ಊಟದ ಬಳಿಕ ನಿರಂಜನ್ ಮನೆಯಿಂದ ಸ್ವಲ್ಪ ದೂರಕ್ಕೆ ವಾಕಿಂಗ್ ಮಾಡಲು ಬಂದಿದ್ದ. ಆಗ ಅಲ್ಲಿಗೆ ಬೈಕಿನಲ್ಲಿ ಬಂದ ಇಬ್ಬರು, ‘ಇನ್ನೊಂದು ಸರ್ತಿ ಆ ಹುಡುಗಿ ವಿಚಾರಕ್ಕೆ ಹೋಗಬೇಡ’ ಎಂದು ಎಚ್ಚರಿಕೆ ಕೊಟ್ಟಿದ್ದಾರೆ. ಅಲ್ಲಿಂದ ಬೈಕಿನಲ್ಲಿ ಮರಳಿ ಹೋಗಿದ್ದಾರೆ. ಸ್ವಲ್ಪ ದೂರ ಹೋಗಿ ಹಿಂತಿರುಗಿ ಬಂದ ಇಬ್ಬರು, ಹಿಂಬದಿಯಿಂದ ನಿರಂಜನ್ ಕುತ್ತಿಗೆ ಹಿಡಿದುಕೊಂಡಿದ್ದಾರೆ.
ಇದನ್ನೂ ಓದಿ – ಶಿವಮೊಗ್ಗದಲ್ಲಿ ಹಿಂದೆ ಮುಂದೆ ನೋಡದೆ ಕಾರು ಬಾಗಿಲು ತೆಗೆದ ಚಾಲಕನಿಗೆ ಈಗ ಸಂಕಷ್ಟ
ತಮ್ಮ ಬಳಿ ಇದ್ದ ಸ್ಟೀಲ್ ರಾಡ್ ಒಂದರಿಂದ ತಲೆಗೆ ಹೊಡೆದಿದ್ದಾರೆ (attack). ನಿರಂಜನ್ ಕೆಳಗೆ ಬೀಳುತ್ತಿದ್ದಂತೆ ಕಾಲಿನ ಮೇಲೂ ಹೊಡೆದಿದ್ದಾರೆ ಎಂದು ಆರೋಪಿಸಲಾಗಿದೆ. ಅಷ್ಟು ಹೊತ್ತಿಗೆ ಸ್ಥಳೀಯರು ಬಂದಿದ್ದನ್ನು ಗಮನಿಸಿ ಸ್ಟೀಲ್ ರಾಡ್ ಬಿಸಾಡಿ ಇಬ್ಬರು ಪರಾರಿಯಾಗಿದ್ದಾರೆ. ಗಾಯಗೊಂಡಿದ್ದ ನಿರಂಜನ್ ನನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಘಟನೆ ಸಂಬಂಧ ವಿನೋಬನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
LATEST NEWS
- ಇವತ್ತು ಯಾವ್ಯಾವ ಅಡಿಕೆಗೆ ಎಷ್ಟಿದೆ ರೇಟ್? – 27 ಮಾರ್ಚ್ 2026

- ಆಗುಂಬೆ ಘಾಟಿಯಲ್ಲಿ ರಸ್ತೆಗೆ ಬಿದ್ದ ಮರ, ಕೆಲ ಹೊತ್ತು ಟ್ರಾಫಿಕ್ ಜಾಮ್

- ಕುಟುಂಬದ ಜೊತೆ ಊಟ ಮುಗಿಸಿ, ಮಾತನಾಡಿ ಮಲಗಲು ತೆರಳಿದ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ

- ಶಿವಮೊಗ್ಗದಲ್ಲಿ ಶ್ರೀಕಾಂತಣ್ಣ ಕಪ್ ಕ್ರಿಕೆಟ್ ಪಂದ್ಯಾವಳಿ, ಟ್ರೋಫಿ, ಟೀ ಶರ್ಟ್ಗಳ ಅನಾವರಣ

- ಸರ್ವೆಗೆ ಹೋದಾಗ ಇಂಜಿನಿಯರ್, ಸರ್ವೇಯರ್ ಮೇಲೆ ಕೋಲು, ಕಲ್ಲುಗಳಿಂದ ದಾಳಿ

About The Editor
ನಿತಿನ್ ಆರ್.ಕೈದೊಟ್ಲು

CLICK HERE TO JOIN SHIVAMOGGA LIVE WHATSAPP GROUP














