ಶಿವಮೊಗ್ಗದಲ್ಲಿ ಬಲೆ ಹಾಕಿ ಬೀದಿ ನಾಯಿ ಹಿಡಿದು ಕ್ರೂರವಾಗಿ ಹತ್ಯೆ, ಸಿಸಿಟಿವಿ ದೃಶ್ಯ ವೈರಲ್‌

ಶಿವಮೊಗ್ಗ: ಬೀದಿ ನಾಯಿಗೆ ಬಲೆ ಹಾಕಿ ಹಿಡಿದು ಕ್ರೂರವಾಗಿ ಹೊಡೆದ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ. ಈ ಸಂಬಂಧ ಪ್ರಾಣಿ ರಕ್ಷಣಾ ಸೇವಾ ತಂಡದ ಸದಸ್ಯ ಸೂರಜ್.ಎಸ್ ತುಂಗಾನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. (ಈ ಸುದ್ದಿಯನ್ನು ಇನ್ನು 47 ಸೆಕೆಂಡ್‌ಗಳಲ್ಲಿ ಓದಿ ಮುಗಿಸಬಹುದು)

ಎಲ್ಲಿ ಆಗಿದ್ದು? ಹೇಗಾಯ್ತು ಘಟನೆ?

ಹಂದಿ ಹಿಡಿಯುವ ಗುಂಪೊಂದು ಬೀದಿ ನಾಯಿಯೊಂದನ್ನು ಬಲೆಯಲ್ಲಿ ಸೆರೆಹಿಡಿದು ದೊಣ್ಣೆಯಿಂದ ಹೊಡೆದು ಸಾಯಿಸಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ನವೆಂಬರ್ 28ರ ಬೆಳಗ್ಗೆ 8.16ಕ್ಕೆ ಶಿವಮೊಗ್ಗದ ಗೋಪಾಳ ಪೊಲೀಸ್ ಲೇಔಟ್‌ನ ವೃದ್ಧಾಶ್ರಮದ ಎದುರು ನಡೆದಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ ಎಂದು ಪೊಲೀಸ್‌ ಪ್ರಕಟಣೆಯಲ್ಲಿ ತಿಳಿಸಲಾಗಿದೆ.  

Attack-on-Street-dog-at-gopala-in-Shimoga

ಇದನ್ನೂ ಓದಿ » ಕೋಣಂದೂರು ಬಳಿ ಡೆತ್‌ ನೋಟ್‌ ಬರೆದಿಟ್ಟು ವ್ಯಕ್ತಿ ಆತ್ಮಹತ್ಯೆ

ನಾಯಿ ಹಿಡಿದು ಕ್ರೂರವಾಗಿ ಹತ್ಯೆ

ಘಟನೆ ನಡೆದ ಸ್ಥಳದ ಸಿಸಿಟಿವಿ ಕ್ಯಾಮೆರಾ ಪರಿಶೀಲಿಸಿದಾಗ, ಬೀದಿ ನಾಯಿ ಹಿಡಿದು ಕ್ರೂರವಾಗಿ ಹತ್ಯೆ ಮಾಡಿರುವ ದೃಶ್ಯ ಕಂಡುಬಂದಿದೆ. ಸೂರಜ್ ನೀಡಿದ ದೂರಿನ ಮೇರೆಗೆ ತುಂಗಾನಗರ ಪೊಲೀಸ್ ಠಾಣೆಯಲ್ಲಿ ಪ್ರಾಣಿ ಹಿಂಸೆ ತಡೆ ಕಾಯ್ದೆ-1960ರ ಕಲಂ11 (1) ಮತ್ತು ಭಾರತೀಯ ನ್ಯಾಯ ಸಂಹಿತೆ ಕಲಂ 325ರ ಅಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸ್‌ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಗೂಗಲ್‌ನಲ್ಲಿ ಶಿವಮೊಗ್ಗ ಲೈವ್ ಸುದ್ದಿಗಳು ನಿಮಗೆ ಮೊದಲು ಸಿಗಬೇಕೆ? ಕೆಳಗಿನ ಬಟನ್ ಒತ್ತಿ:

Attack-on-Street-dog-at-gopala-in-Shimoga

Leave a Comment