ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
SHIVAMOGGA LIVE | 31 MAY 2023
SHIMOGA : ಗಂಡ, ಹೆಂಡತಿ ವೈಮನಸು ದೂರ ಮಾಡಲು ಹೋಗಿದ್ದ ಇಬ್ಬರು ಸ್ನೇಹಿತೆಯರಿಗೆ (friends) ಚಾಕುವಿನಿಂದ ಹಲ್ಲೆ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಇಬ್ಬರು ಮಹಿಳೆಯರು ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಚೇತರಿಸಿಕೊಳ್ಳುತ್ತಿದ್ದಾರೆ.

ಅನುಷಾ (21) ಮತ್ತು ಜಾಹ್ನವಿ ಎಂಬುವವರಿಗೆ ಚಾಕುವಿನಿಂದ ಇರಿದು ಗಾಯಗೊಳಿಸಲಾಗಿದೆ. ಅನುಷಾಳ ಸ್ನೇಹಿತೆ ಮತ್ತು ಆಕೆಯ ಗಂಡನ ಮಧ್ಯೆ ಜಗಳವಾಗಿತ್ತು. ಅನುಷಾಳ ಸ್ನೇಹಿತೆ (friends) ಮನೆ ಬಿಟ್ಟು ಹೋಗುವುದಾಗಿ ತಿಳಿಸಿ ಹೋಗಿದ್ದಳು. ಸ್ನೇಹಿತೆಯನ್ನು ಆಕೆಯ ಗಂಡನ ಬಳಿ ಕರೆದೊಯ್ದ ಅನುಷಾ ಸಮಾಧಾನಪಡಿಸಲು ಮುಂದಾಗಿದ್ದಳು. ಈ ವೇಳೆ ಮತ್ತೊಬ್ಬ ಸ್ನೇಹಿತೆ ಜಾಹ್ನವಿಯನ್ನೂ ಕರೆದೊಯ್ದಿದ್ದಳು.
ಇದನ್ನೂ ಓದಿ – ಶಿವಮೊಗ್ಗದಲ್ಲಿ ಬಸ್ಸುಗಳೇ ನಿಲ್ಲದ ಕಡೆ ಹೈಟೆಕ್ ತಂಗುದಾಣ, ನೂರಾರು ಪ್ರಯಾಣಿಕರು ನಿತ್ಯ ಕಾಯುವ ಕಡೆ ಕೇಳುವವರೇ ಇಲ್ಲ
ಈ ವೇಳೆ ಮಾತಿಗೆ ಮಾತು ಬೆಳೆದು ಸ್ನೇಹಿತೆಯ ಗಂಡ ಅನುಷಾಳಿಗೆ ಹೊಡೆದು, ಎಳೆದಾಡಿದ್ದಾನೆ ಎಂದು ಆರೋಪಿಸಲಾಗಿದೆ. ಆತನೊಂದಿಗೆ ಬಂದಿದ್ದ ಮತ್ತೊಬ್ಬ ವ್ಯಕ್ತಿ ಚಾಕು ತೆಗೆದು ಅನುಷಾಳ ಕುತ್ತಿಗೆ ಬಳಿ ಮತ್ತು ಜಾಹ್ನವಿಯ ಬೆನ್ನಿಗೆ ಹಲ್ಲೆ ಮಾಡಿದ್ದಾನೆ. ಅಶ್ವಥನಗರದ ಚಾನಲ್ ಏರಿ ಮೇಲೆ ಘಟನೆ ಸಂಭವಿಸಿದೆ. ವಿನೋಬನಗರ ಠಾಣೆಯಲ್ಲಿ ಮಣಿಕಂಠ ಮತ್ತು ಕುಮಾರ ಎಂಬುವವರ ವಿರುದ್ಧ ಪ್ರಕರಣ ದಾಖಲಾಗಿದೆ.
WATCH VIDEO
ಹೆಚ್ಚಿನ ಮಾಹಿತಿಗೆ ಇಲ್ಲಿ CLICK ಮಾಡಿ
LATEST NEWS
- ಸರ್ವೆಗೆ ಹೋದಾಗ ಇಂಜಿನಿಯರ್, ಸರ್ವೇಯರ್ ಮೇಲೆ ಕೋಲು, ಕಲ್ಲುಗಳಿಂದ ದಾಳಿ

- ರಾಮಚಂದ್ರಾಪುರ ಮಠದಲ್ಲಿ ರಾಮೋತ್ಸವ, ಯಾವ್ಯಾವ ದಿನ ಏನೇನು ಕಾರ್ಯಕ್ರಮ ಇರಲಿದೆ?

- ಶಿವಮೊಗ್ಗದ ಸರ್ಕಾರಿ ಶಾಲೆ ಮಕ್ಕಳಿಗೆ ಉಚಿತ ಬೇಸಿಗೆ ಶಿಬಿರ, ಏನೇನೆಲ್ಲ ಇರುತ್ತೆ? ಎಷ್ಟು ವಿದ್ಯಾರ್ಥಿಗಳಿಗೆ ಅವಕಾಶವಿದೆ?

- ಮನೆಗೆ ತಾಯಿ ಬಂದಾಗ ತೆರೆದಿತ್ತು ಹಿಂಬಾಗಿಲು; ಮಗಳು ಬಂದಾಗ ಹೊರಬಿತ್ತು ಶಾಕಿಂಗ್ ವಿಚಾರ

- ಭಾರಿ ಮಳೆಗೆ ಶಿವಮೊಗ್ಗ ಜಿಲ್ಲೆಯ ವಿವಿಧೆಡೆ ಹಾನಿ, ಎಲ್ಲೆಲ್ಲಿ ಏನೇನಾಗಿದೆ? ಇಲ್ಲಿದೆ ಫಟಾಫಟ್ ಅಪ್‌ಡೇಟ್

About The Editor
ನಿತಿನ್ ಆರ್.ಕೈದೊಟ್ಲು















