ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 30 MARCH 2023
SHIMOGA : ವಿಧಾನಸಭೆ ಚುನಾವಣೆ ಮತ್ತು ಪ್ರಯಾಣಿಕರ ಅನುಕೂಲಕ್ಕಾಗಿ ಶಿವಮೊಗ್ಗ ಸಂಚಾರ ಠಾಣೆ ಪೊಲೀಸರು ಆಟೋ (Auto) ಚಾಲಕರು, ಮಾಲೀಕರ ಸಂಘದ ಪದಾಧಿಕಾರಿಗಳ ಜೊತೆ ಸಭೆ ನಡೆಸಿದರು. ಸಂಚಾರ ಠಾಣೆ ವೃತ್ತ ಕಚೇರಿಯಲ್ಲಿ ಸಭೆ ನಡೆಸಲಾಯಿತು. ಈ ವೇಳೆ ಇನ್ಸ್ ಪೆಕ್ಟರ್ ಜಯಶ್ರೀ ಮಾನೆ ಅವರು 5 ಪ್ರಮುಖ ಸೂಚನೆಗಳನ್ನು ನೀಡಿದ್ದಾರೆ.
ಏನೆಲ್ಲ ಸೂಚನೆ ನೀಡಿದ್ದಾರೆ?
ಸೂಚನೆ 1 – ಯಾವುದೇ ಕಾರಣಕ್ಕೂ ಆಟೋಗಳ (Auto) ಪರವಾನಿಗೆ ನಿಯಮ ಉಲ್ಲಂಘನೆ ಮಾಡುವಂತಿಲ್ಲ. ಒಂದುವೇಳೆ ಉಲ್ಲಂಘನೆ ಮಾಡಿದ್ದಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುವುದು.
ಸೂಚನೆ 2 – ಆಟೋಗಳ ಮೇಲೆ ಯಾವುದೇ ರಾಜಕೀಯ ಪಕ್ಷದ ಬ್ಯಾನರ್, ಪೋಸ್ಟರ್ ಅಂಟಿಸಿ ಪ್ರಚಾರ ಮಾಡುವಂತಿಲ್ಲ. ಒಂದುವೇಳೆ ಆಟೋಗಳನ್ನು ರಾಜಕೀಯ ಉದ್ದೇಶಕ್ಕೆ ಬಳಸಬೇಕಾದಲ್ಲಿ ಕಡ್ಡಾಯವಾಗಿ ಸೂಕ್ತ ಅನುಮತಿ ಪಡೆಯಬೇಕು.
ಸೂಚನೆ 3 – ಆಟೋಗಳಲ್ಲಿ ಅಕ್ರಮವಾಗಿ ಹಣ ಅಥವಾ ಇತರೆ ವಸ್ತು ಸಾಗಾಟ ಮಾಡಬಾರದು.
ಸೂಚನೆ 4 – ಆಟೋಗಳನ್ನು ಯಾವುದೇ ಕಾರಣಕ್ಕು ಮಾರ್ಪಡಿಸುವಂತಿಲ್ಲ. ಒಂದುವೇಳೆ ಮಾರ್ಪಡಿಸಿರುವುದು ಕಂಡುಬಂದಲ್ಲಿ ಕಾನೂನು ರೀತ್ಯಾ ಕ್ರಮ ಕೈಗೊಳ್ಳಲಾಗುವುದು.
ಇದನ್ನೂ ಓದಿ – ನ್ಯೂಸ್ ಚಾನಲ್, ಪೇಪರ್, ವೆಬ್ ಸೈಟ್ ಗಳ ಮೇಲೆ ಕಣ್ಗಾವಲು, ಶಿವಮೊಗ್ಗ ಡಿಸಿ ಕಚೇರಿಯಲ್ಲಿ ಮೀಡಿಯಾ ಸೆಂಟರ್
ಸೂಚನೆ 5 – ಪ್ರಯಾಣಿಕರ ಆಟೋಗಳಲ್ಲಿ ಯಾವುದೇ ರೀತಿಯ ಸರಕು ಸಾಗಾಟ ಮಾಡುವಂತಿಲ್ಲ.
ಈ ಸಂದರ್ಭ ಸಂಚಾರ ಠಾಣೆಯ ಪೂರ್ವ ಮತ್ತು ಪಶ್ಚಿಮ ಠಾಣೆಗಳ ಪಿಎಸ್ಐಗಳು ಉಪಸ್ಥಿತರಿದ್ದರು.
ಇದನ್ನೂ ಓದಿ – ಶಿವಮೊಗ್ಗ ಜಿಲ್ಲೆಯಲ್ಲಿ ಮಹಿಳಾ ಮತದಾರರೆ ಹೆಚ್ಚು, ಯಾವ್ಯಾವ ಕ್ಷೇತ್ರದಲ್ಲಿ ಎಷ್ಟು ಮತದಾರರಿದ್ದಾರೆ?
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422