ದನ ಅಡ್ಡ ಬಂದಿದ್ದಕ್ಕೆ ಅದರ ಮಾಲೀಕನ ತಲೆಗೆ ಕಲ್ಲಿನಿಂದ ಹೊಡೆದ ಆಟೋ ಚಾಲಕ

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

 SHIVAMOGGA LIVE NEWS 

SHIMOGA | ರಸ್ತೆಯಲ್ಲಿ ದನ (COW) ಅಡ್ಡ ಬಂತು ಎಂದು ಅದರ ಮಾಲೀಕನ ತಲೆಗೆ ಕಲ್ಲಿನಿಂದ ಹೊಡೆದ ಆಟೋ ಚಾಲಕನ ವಿರುದ್ಧ ಪ್ರಕರಣ ದಾಖಲಾಗಿದೆ. ಗಾಯಗೊಂಡಿದ್ದ ಹಸುವಿನ ಮಾಲೀಕನಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ.

Shimoga Nanjappa Hospital

ಶಿವಮೊಗ್ಗದ ವಿದ್ಯಾನಗರದ ರಾಮಯ್ಯ ಲೇಔಟ್’ನಲ್ಲಿ ಘಟನೆ ಸಂಭವಿಸಿದೆ. ಹಸುವಿನ ಮಾಲೀಕ ಸೋಮಣ್ಣ (48) ಗಾಯಗೊಂಡಿದ್ದಾರೆ.

ಏನಿದು ಘಟನೆ?

ಕೃಷಿಕರಾಗಿರುವ ಸೋಮಣ್ಣ ಅವರು ವಿದ್ಯಾನಗರದ ರಾಮಯ್ಯ ಲೇಔಟ್’ನಲ್ಲಿ ತಮ್ಮ ದನವನ್ನು (COW) ಮೇಯಲು ಬಿಡುತ್ತಿದ್ದರು. ಸೆ.17ರಂದು ಮೇಯಲು ಬಿಟ್ಟಿದ್ದ ದನವನ್ನು ಹೊಡೆದುಕೊಂಡು ಮನೆಗೆ ಮರಳುತ್ತಿದ್ದರು. ಎದುರಿಗೆ ಬಂದ ಆಟೋದ ಚಾಲಕ ದನವನ್ನು ರಸ್ತೆಯ ಪಕ್ಕಕ್ಕೆ ಹೊಡೆದುಕೊಂಡು ಹೋಗುವಂತೆ ತಿಳಿಸಿದ್ದಾನೆ. ಈ ವೇಳೆ ಸೋಮಣ್ಣ ಮತ್ತು ಆಟೋ ಚಾಲಕ ಪ್ರವೀಣನ ನಡುವೆ ಮಾತಿನ ಚಕಮಕಿಯಾಗಿದೆ.

ಕ್ಲಿಕ್ ಮಾಡಿ ಇದನ್ನೂ ಓದಿ ಮಕ್ಕಳ ಕಳ್ಳಿ ಅಂತಾ ಮಹಿಳೆ ಹಿಡಿದು ಪೊಲೀಸರಿಗೆ ಒಪ್ಪಿಸಿದ ಜನ, ವಿಚಾರಣೆ ವೇಳೆ ಗೊತ್ತಾಗಿದ್ದೇನು?

ಸಿಟ್ಟಿನಲ್ಲಿ ಪ್ರವೀಣ ಕಲ್ಲನ್ನು ತೆಗೆದುಕೊಂಡು ಸೋಮಣ್ಣನ ತಲೆಗೆ ಬೀಸಿದ್ದಾನೆ. ಸೋಮಣ್ಣ ಜೋರಾಗಿ ಕೂಗಿಕೊಂಡಿದ್ದು, ಸಮೀಪದಲ್ಲಿದ್ದವರು ಬಂದು ಗಾಯಗೊಂಡಿದ್ದ ಅವರನ್ನು ಕೂಡಲೆ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.

ಕ್ಲಿಕ್ ಮಾಡಿ ಇದನ್ನೂ ಓದಿ ಮದುವೆಗೆ ಒಪ್ಪದ ಪ್ರಿಯಕರ, ವಿಷ ಕುಡಿದು ಯುವತಿ ಆತ್ಮಹತ್ಯೆ

ಕಲ್ಲಿನಿಂದ ಹೊಡೆದು ಗಾಯಗೊಳಿಸಿ, ಕೊಲೆ ಬೆದರಿಕೆ ಒಡ್ಡಿದ್ದಾನೆ ಎಂಬ ಆರೋಪದ ಮೇಲೆ ಆಟೋ ಚಾಲಕ ಪ್ರವೀಣ್ ಎಂಬಾತನ ವಿರುದ್ದ ಸೋಮಣ್ಣ ದೂರು ನೀಡಿದ್ದಾರೆ. ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Sarji Hospital

ಕ್ಲಿಕ್ ಮಾಡಿ ಇದನ್ನೂ ಓದಿ ವೃದ್ಧೆಯ ಹೊಟ್ಟೆಯಲ್ಲಿದ್ದ 4 ಕೆ.ಜಿ. ತೂಕದ ಗೆಡ್ಡೆ ಹೊರ ತೆಗೆದ ತೀರ್ಥಹಳ್ಳಿ ವೈದ್ಯರು

ADVERTISEMENT

  • ಆರೋಗ್ಯ ತುರ್ತು ಸಂದರ್ಭದಲ್ಲಿ ಹಣಕಾಸು ಹೊಂದಿಸುವುದು ಸುಲಭವೇನಲ್ಲ. ಒಂದು ವೇಳೆ INSURANCE ಇದ್ದರೆ, ನಿರಮ್ಮಳವಾಗಿರಬಹುದು ಅಲ್ಲವೆ? ಈಗಲೆ INSURANCE ಮಾಡಿಸಿ. ಒಳ್ಳೆಯ INSURANCE PLANSಗಾಗಿ ಕರೆ ಮಾಡಿ – LIC LIFE INSURANCE – ಅನಿಲ್ 9538414151, ಪ್ರಶಾಂತ್ 9972194422
  • ಸುಂದರ ಮನೆ ಕಟ್ಟಬೇಕು, ಸ್ವಂತ ಮನೆಯಲ್ಲಿ ನೆಮ್ಮದಿಯ ಬದುಕು ಸಾಗಿಸಬೇಕು ಅನ್ನವು ಆಸೆ ಯಾರಿಗಿಲ್ಲ? ಇನ್ಯಾಕೆ ತಡ? ಮನೆ ಕಟ್ಟಲು LICಯಿಂದ HOUSING LOAN ಲಭ್ಯವಿದೆ. ಇವತ್ತೇ ಸಂಪರ್ಕಿಸಿ – ಪ್ರಶಾಂತ್ 9972194422

SHIVAMOGGA LIVE WHATSAPP

ನಿಮ್ಮೂರು, ನಿಮ್ಮ ಏರಿಯಾದ ಕಾರ್ಯಕ್ರಮಗಳು, ಸಮಸ್ಯೆಗಳು ಸುದ್ದಿಯಾಗಬೇಕಾ? ನೀವೇ ವರದಿಗಾರರಾಗಿ. ವಿಡಿಯೋ, ಫೋಟೊ ಮಾಡಿ 7411700200 ಮೊಬೈಲ್ ನಂಬರ್’ಗೆ ವಾಟ್ಸಪ್ ಮಾಡಿ. ನೆನಪಿರಲಿ, ಸುದ್ದಿ ಪ್ರಕಟಣೆಗೆ ನಾವು ಹಣ ಪಡೆಯುವುದಿಲ್ಲ.

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment