ಶಿವಮೊಗ್ಗದ ಕ್ರಾಂತಿದೀಪ ಪತ್ರಿಕೆ ಸಂಪಾದಕರಿಗೆ ಪ್ರತಿಷ್ಠಿತ ಪ್ರಶಸ್ತಿ

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

SHIMOGA NEWS, 22 SEPTEMBER 2024 : ಪತ್ರಕರ್ತರಿಗೆ ನೀಡುವ ‘ಟಿ.ಎಸ್. ರಾಮಚಂದ್ರರಾವ್‌’ (ಟಿಯೆಸ್ಸಾರ್) ಪ್ರಶಸ್ತಿ (Award) ಹಾಗೂ ‘ಮೊಹರೆ ಹಣಮಂತರಾಯ’ ಪ್ರಶಸ್ತಿಗಳನ್ನು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಪ್ರಕಟಿಸಿದೆ. 2019ರಿಂದ 2023ನೇ ಸಾಲಿನ ಐದು ವರ್ಷಗಳ ಪ್ರಶಸ್ತಿಗಳನ್ನು ಒಟ್ಟಿಗೆ ಪ್ರಕಟಿಸಲಾಗಿದೆ.

ಯಾರಿಗೆಲ್ಲ ಪ್ರಶಸ್ತಿ ಲಭಿಸಿದೆ?

» ಟಿಯೆಸ್ಸಾರ್ ಪ್ರಶಸ್ತಿ : ಶಿವಾಜಿ ಗಣೇಶನ್‌ (ಪ್ರಜಾವಾಣಿ), ಎಸ್‌.ಆರ್. ಮಣೂರ (ಸಂಯುಕ್ತ ಕರ್ನಾಟಕ), ಆರ್. ಪೂರ್ಣಿಮಾ (ಪ್ರಜಾವಾಣಿ–ಉದಯವಾಣಿ), ಪದ್ಮರಾಜ ದಂಡಾವತಿ (ಪ್ರಜಾವಾಣಿ), ಸರಜೂ ಕಾಟ್ಕರ್‌ (ಕನ್ನಡಪ್ರಭ–ಇಂಡಿಯನ್‌ ಎಕ್ಸಪ್ರೆಸ್‌) ಅವರನ್ನು ಆಯ್ಕೆ ಮಾಡಲಾಗಿದೆ.

» ಮೊಹರೆ ಹಣಮಂತರಾಯ ಪ್ರಶಸ್ತಿ : ಗದಗ-ಬೆಟಗೇರಿಯ ‘ನವೋದಯ’ ಪತ್ರಿಕೆಯ ಸಂಪಾದಕ ರಾಜೀವ್‌ ಕಿದಿಯೂರ, ಬೆಂಗಳೂರಿನ ‘ಸಂವಾದ’ ಮಾಸಪತ್ರಿಕೆಯ ಸಂಪಾದಕ ಇಂದೂಧರ ಹೊನ್ನಾಪುರ, ಶಿವಮೊಗ್ಗದ ‘ಕ್ರಾಂತಿದೀಪ’ ಪತ್ರಿಕೆಯ ಸಂಪಾದಕ ಎನ್‌. ಮಂಜುನಾಥ್‌, ಮುಂಬೈನ ‘ಕರ್ನಾಟಕ ಮಲ್ಲ’ ಪತ್ರಿಕೆ ಸಂಪಾದಕ ಚಂದ್ರಶೇಖರ ಪಾಲೆತ್ತಾಡಿ, ಕಲಬುರಗಿ ಜಿಲ್ಲೆಯ ‘ಕರ್ನಾಟಕ ಸಂಧ್ಯಾಕಾಲ’ ಪತ್ರಿಕೆ ಸಂಪಾದಕ ಶಿವಲಿಂಗಪ್ಪ ದೊಡ್ಡಮನಿ ಅವರನ್ನು ಆಯ್ಕೆ ಮಾಡಲಾಗಿದೆ.

Krantideepa-newspaper-editor-N-Manjunatha

ಹೈಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಪಿ.ಎನ್. ದೇಸಾಯಿ ಅಧ್ಯಕ್ಷತೆಯಲ್ಲಿ ಆಯ್ಕೆ ಸಮಿತಿ ರಚಿಸಲಾಗಿತ್ತು. ಎರಡೂ ಪ್ರಶಸ್ತಿಗಳು ತಲಾ 2 ಲಕ್ಷ ರೂ. ನಗದು ಪುರಸ್ಕಾರ ಒಳಗೊಂಡಿವೆ. 

ಇದನ್ನೂ ಓದಿ » ಶಿವಮೊಗ್ಗಕ್ಕೆ ಬರ್ತಿದ್ದಾರೆ ರೈಲ್ವೆ ಮಿನಿಸ್ಟರ್‌, ನಡೆಯಲಿದೆ ಮಹತ್ವದ ಸಭೆ

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

© ಶಿವಮೊಗ್ಗ ಲೈವ್‌ : September 22, 2024

Leave a Comment