ಶಿವಮೊಗ್ಗದ ಕಾಲೇಜಿನಲ್ಲಿ ಅಗ್ನಿ ಅವಘಡದ ಪ್ರಾತ್ಯಕ್ಷಿಕೆ

SHIVAMOGGA LIVE NEWS | 6 DECEMBER 2023

SHIMOGA : ನಗರದ ಬಿ.ಹೆಚ್. ರಸ್ತೆಯಲ್ಲಿರುವ ಬಾಲಕಿಯರ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಅಗ್ನಿ ಶಾಮಕ ದಳದಿಂದ (Fire department) ವಿದ್ಯಾರ್ಥಿಗಳಿಗೆ ಪ್ರಾತ್ಯಕ್ಷಿಕೆ ಶಿಬಿರ ನಡೆಸಲಾಯಿತು. ಸಂದರ್ಭದಲ್ಲಿ ಅಗ್ನಿಶಾಮಕ ದಳದ ಠಾಣಾಧಿಕಾರಿ ವಸಂತಕುಮಾರ್ ಮಕ್ಕಳಿಗೆ ಅಗ್ನಿ ಅವಘಡಕ್ಕೆ ಸಂಬಂಧಿಸಿದಂತೆ ತಿಳಿವಳಿಕೆ ನೀಡಿದರು.

061223-Shimoga-Fire-department-awareness-at-college.webp

ಅಗ್ನಿ ಅವಘಡಗಳ ಮಾದರಿಗಳು ಮತ್ತು ಯಾವೆಲ್ಲ ಸಂದರ್ಭ ಯಾವೆಲ್ಲ ಸುರಕ್ಷಿತ ಕ್ರಮ ಕೈಗೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ತಿಳಿವಳಿಕೆ ಮೂಡಿಸಲಾಯಿತು. ಪ್ರೊಬೇಷನರಿ ಅಗ್ನಿಶಾಮಕ (Fire department) ಅಧಿಕಾರಿ ಶಫೀಕ್ ತಹಶೀಲ್ದಾರ್, ಪ್ರಾಂಶುಪಾಲ ಜಯಂತ್ ಎಸ್. ಆಡಳಿತ ಮಂಡಳಿ ಸದಸ್ಯ ಚನ್ನವೀರಪ್ಪ ಗಾಮನಗಟ್ಟಿ, ಉಪನ್ಯಾಸಕರು, ಅಗ್ನಿಶಾಮಕ ದಳ ಸಿಬ್ಬಂದಿ ಇದ್ದರು.

ಇದನ್ನೂ ಓದಿ – ಶಿವಮೊಗ್ಗದಲ್ಲಿ ಸಿಮೆಂಟ್‌ ಇಟ್ಟಿಗೆ ಎತ್ತಿ ಹಾಕಿ ಕೊಲೆ, ಚಿಂಗಾರಿಗೆ ಜೀವಾವಧಿ ಶಿಕ್ಷೆ, ಏನಿದು ಪ್ರಕರಣ?

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ವಾಟ್ಸಪ್‌ ಮಾಡಬಹುದು. ಉಚಿತವಾಗಿ ಪ್ರಕಟಿಸುತ್ತೇವೆ. ವಾಟ್ಸಪ್‌ ನಂಬರ್: 7411700200
Shivamogga-Live-Number-1-Promotion
Shivamogga-Live-Number-1-Promotion

Leave a Comment