SHIMOGA | ಸಿಎಂಗಿಂತಲೂ ಹೆಚ್ಚು ಅನುದಾನ ತಂದಿದ್ದಾರೆ, ಯಾವ ಬಾಗಿಲು ತಟ್ಟಿದ್ರೆ ದುಡ್ಡು ಸಿಗುತ್ತೆ ಅನ್ನೋದು ಅವರಿಗೆ ಗೊತ್ತು

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

147011183 1327318294296254 3834645892722110036 o.jpg? nc cat=105&ccb=3& nc sid=8bfeb9& nc ohc=ZNUWIDTXgPcAX9FSFBC& nc ht=scontent.fixe1 2

ಶಿವಮೊಗ್ಗ ಲೈವ್.ಕಾಂ | SHIMOGA NEWS | 15 FEBRUARY 2021

ಪಾರ್ಲಿಮೆಂಟ್‍ನ ಯಾವ ಬಾಗಿಲು ತಟ್ಟಿದರೆ ಎಷ್ಟು ದುಡ್ಡು ಸಿಗುತ್ತೆ ಅನ್ನೋದನ್ನ ಸಂಸದ ಬಿ.ವೈ.ರಾಘವೇಂದ್ರ ಬಹಳ ಬೇಗ ತಿಳಿದುಕೊಂಡಿದ್ದಾರೆ. ಹಾಗಾಗಿಯೇ ಶಿವಮೊಗ್ಗ ಜಿಲ್ಲೆಗೆ ಯಡಿಯೂರಪ್ಪ ಅವರು ತಂದಿದ್ದಕ್ಕಿಂತಲೂ ಹೆಚ್ಚು ಅನುದಾನವನ್ನು ರಾಘವೇಂದ್ರ ಅವರು ತಂದಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್ ಹೇಳಿದರು.

ರೈಲ್ವೆ ಮೇಲ್ಸೇತುವೆ ಕಾಮಗಾರಿಗಳ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಮಾತನಾಡಿದ ಆಯನೂರು ಮಂಜುನಾಥ್, ಪಾರ್ಲಿಮೆಂಟ್‍ ಕಟ್ಟಡವನ್ನು ತಿಳಿದುಕೊಳ್ಳುವುದೆ ಕಷ್ಟದ ಕೆಲಸ. ಆದರೆ ರಾಘವೇಂದ್ರ ಅವರು ಕಡಿಮೆ ಸಮಯದಲ್ಲಿ ಸಂಸತ್ ಭವನವನ್ನು ತಿಳಿದುಕೊಂಡಿದ್ದಾರೆ. ಯಾವ ಬಾಗಿಲು ತಟ್ಟಿದರೆ ದುಡ್ಡು ಸಿಗುತ್ತೆ ಅನ್ನುವುದು ಗೊತ್ತಾಗಿದೆ ಎಂದರು.

ಸಿಎಂ ಕೊಟ್ಟಿದ್ದಕ್ಕಿಂತಲೂ ಹೆಚ್ಚು ಅನುದಾನ

ಶಿವಮೊಗ್ಗ ಜಿಲ್ಲೆಯ ಅಭಿವೃದ್ಧಿಗೆ ಸಂಸದ ರಾಘವೇಂದ್ರ ಅವರು ಸಿಎಂ ಯಡಿಯೂರಪ್ಪ ಅವರಿಗಿಂತಲೂ ಹೆಚ್ಚು ಅನುದಾನ ತಂದಿದ್ದಾರೆ. ಇದನ್ನು ಗಮನಿಸಿ ಸಿಎಂ ಇನ್ನಷ್ಟು ಅನುದಾನವನ್ನು ಜಿಲ್ಲೆಗೆ ನೀಡಬೇಕಿದೆ ಎಂದರು.

‘ಸಂಗಮೇಶ್ ನನ್ನ ಕಿವಿಯಲ್ಲಿ ಹೇಳಿದರು’

ಸಂಸದ ರಾಘವೇಂದ್ರ ಅವರ ಕುರಿತು ಭದ್ರಾವತಿ ಶಾಸಕ ಸಂಗಮೇಶ್ವರ್ ಅವರು ತಮ್ಮ  ಕಿವಿಯಲ್ಲಿ ಒಂದು ವಿಚಾರ ಹೇಳಿದರು. ಅದನ್ನು ಬಹಿರಂಗವಾಗಿ ಹೇಳಲು ಅವರಿಗೆ ಹೆದರಿಕೆ ಆಗಬಹುದು. ನಮ್ಮವರು ರೈಲ್ವೆ ಸಚಿವರು, ಸಂಸದರಾಗಿದ್ದರು. ಆದರೆ ಈ ರೀತಿ ಕೆಲಸ ಮಾಡಿರಲಿಲ್ಲ ಎಂದು ಸಂಗಮೇಶ್ವರ್ ತಮ್ಮ ಕಿವಿಯಲ್ಲಿ ಹೇಳಿದರು. ಯಾವಾಗಲೂ ಉಲ್ಟಾ ಸೀದ ಮಾತಾಡುವ ಸಂಗಮೇಶ್ ಅವರು ಇವತ್ತು ಕರೆಕ್ಟಾಗಿ ಮಾತಾಡಿದ್ದಾರೆ ಎಂದು ಆಯನೂರು ಮಂಜುನಾಥ್ ಹೇಳಿದರು.

ಇದನ್ನೂ ಓದಿ | SHIMOGA | ಸದಾ ಗಂಭೀರವಾಗಿ ಇರುತ್ತಿದ್ದ ಸಿಎಂ ಮುಖದಲ್ಲಿ ಇವತ್ತು ಮಂದಹಾಸ

ಶಿವಮೊಗ್ಗ ಲೈವ್‍ಗೆ ಸುದ್ದಿ ನೀಡಲು ಕರೆ ಮಾಡಿ 9964634494

ವಾಟ್ಸಪ್‍ನಲ್ಲಿ ಸುದ್ದಿಗಾಗಿ 7411700200

ಶಿವಮೊಗ್ಗ ಲೈವ್ ಈ ಮೇಲ್ shivamoggalive@gmail.com

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment