ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIMOGA NEWS, 10 OCTOBER 2024 : ಆಯುಧ ಪೂಜೆಗೆ (Festival) ಶಿವಮೊಗ್ಗದಲ್ಲಿ ಭರ್ಜರಿ ಸಿದ್ಧತೆ ನಡೆಯುತ್ತಿದೆ. ಹಬ್ಬದ ಖರೀದಿ ಬಿರುಸಾಗಿದೆ. ಗಾಂಧಿ ಬಜಾರ್, ಗೋಪಿ ಸರ್ಕಲ್, ವಿನೋಬನಗರ ಆರ್ಎಂಸಿ, ಲಕ್ಷ್ಮೀ ಟಾಕೀಸ್ ಸೇರಿದಂತೆ ವಿವಿಧೆಡೆ ಹೂವು, ಹಣ್ಣು, ಕುಂಬಳಕಾಯಿ ಖರೀದಿ ಜೋರಿದೆ.
ಜೇಬಿಗೆ ಬಿಸಿ ಮುಟ್ಟಿಸಿದ ದರ
ಆಯುಧ ಪೂಜೆಯಂದು ಕೃಷಿ ಚಟುವಟಿಕೆಗೆ ಬಳಸುವ ಆಯುಧಗಳು, ಉಪಕರಣ, ಕೈಗಾರಿಕೆ, ಕಚೇರಿಗಳಲ್ಲಿ ಪೂಜೆ, ವಾಹನಗಳಿಗೆ ಪೂಜೆ ಸಲ್ಲಿಸಲಾಗುತ್ತದೆ. ಇದಕ್ಕೆ ಹೂವು, ಹಣ್ಣು, ಕುಂಬಳಕಾಯಿ, ಬಾಳೆ ಕಂದು ಕಟ್ಟಿ ಪೂಜೆ ಸಲ್ಲಿಸಲಾಗುತ್ತದೆ. ಇವುಗಳೇ ದುಬಾರಿಯಾಗಿದ್ದು ಗ್ರಾಹಕರ ಜೇಬಿಗೆ ಬಿಸಿ ಮುಟ್ಟಿಸುತ್ತಿವೆ.
ಕುಂಬಳಕಾಯಿಗೆ ಭಾರಿ ಡಿಮಾಂಡ್ ಇದೆ. ಗಾತ್ರದ ಆಧಾರದಲ್ಲಿ ದರ ನಿಗದಿಯಾಗಿದೆ. ಸಣ್ಣ ಗಾತ್ರದ ಕುಂಬಳಕಾಯಿಗೆ 100 – 200 ರೂ., ಮಧ್ಯಮ ಗಾತ್ರದ ಕುಂಬಳಕಾಯಿಗೆ 350 ರೂ., ದೊಡ್ಡ ಗಾತ್ರದ ಕುಂಬಳಕಾಯಿಗೆ 600 ರಿಂದ 800 ರೂ.ವರೆಗೆ ಇದೆ. ಕೆಲವು ವ್ಯಾಪಾರಿಗಳು ಕೆ.ಜಿ. ಲೆಕ್ಕದಲ್ಲಿ ಮಾರಾಟವಾಗುತ್ತಿದೆ.
ಇನ್ನು, ಸೇವಂತಿಗೆ ಕೆ.ಜಿ.ಗೆ 100 ರೂ. ಇದೆ. ಒಂದು ಮಾರು ಹೂವಿಗೆ 150 ರೂ.ಗಿಂತಲೂ ಹೆಚ್ಚಿದೆ. ಬಾಳೆ ಕಂದು 30 ರೂ. ಮತ್ತು ಅದಕ್ಕಿಂತಲೂ ಹೆಚ್ಚಿದೆ. ಚಂಡು ಹೂವು ಒಂದು ಗುಚ್ಛಕ್ಕೆ 700 ರೂ.ಗಿಂತಲೂ ದುಬಾರಿ ಇದೆ. ಹಣ್ಣುಗಳ ಬೆಲೆಯು ಗ್ರಾಹಕರಿಗೆ ಕಕ್ಕಾಬಿಕ್ಕಿಯಾಗುವಂತೆ ಇದೆ. ಆದರೂ ಹಬ್ಬದ ಖರೀದಿ ಅನಿವಾರ್ಯವಾಗಿದೆ. ಹಾಗಾಗಿ ಗ್ರಾಹಕರು ಶಕ್ತಿ ಮೀರಿ ಚೌಕಾಸಿ ನಡೆಸಿ ಪೂಜಾ ಸಾಮಗ್ರಿ ಖರೀದಿಸುತ್ತಿದ್ದಾರೆ.
ಇದನ್ನೂ ಓದಿ » ಶಿವಮೊಗ್ಗದಿಂದ ಯಾವೆಲ್ಲ ವಿಮಾನ ಎಷ್ಟೊತ್ತಿಗೆ ಹೊರಡುತ್ತವೆ? ಇಲ್ಲಿದೆ ಟೈಮ್ ಟೇಬಲ್
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422