ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIMOGA NEWS, 10 OCTOBER 2024 : ವಿಮಾನ ನಿಲ್ದಾಣ ಆರಂಭವಾಗಿ ಎರಡೇ ವರ್ಷಕ್ಕೆ ಶಿವಮೊಗ್ಗದಿಂದ ಮೂರು ರಾಜ್ಯಕ್ಕೆ ವಿಮಾನಯಾನ ಸೇವೆ ಆರಂಭವಾಗಿದೆ (Time Table). ಮೂರು ಪ್ರಮುಖ ವಿಮಾನಯಾನ ಸಂಸ್ಥೆಗಳು ಇಲ್ಲಿ ಕಾರ್ಯಾಚರಿಸುತ್ತಿವೆ. ಮುಂದೆ ದೆಹಲಿ, ಮುಂಬೈಗು ವಿಮಾನ ಹಾರಾಟಕ್ಕೆ ಸಿದ್ಧತೆ ನಡೆಯುತ್ತಿದೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಮೂರು ವಿಮಾನಯಾನ ಸಂಸ್ಥೆಗಳು
ಬೆಂಗಳೂರು – ಶಿವಮೊಗ್ಗ – ಬೆಂಗಳೂರು ಮಾರ್ಗದಲ್ಲಿ ಇಂಡಿಗೊ ಸಂಸ್ಥೆ ವಿಮಾನಯಾನ ಸೇವೆ ಒದಗಿಸುತ್ತಿದೆ. 2023ರ ಆಗಸ್ಟ್ 31ರಿಂದ ಇಂಡಿಗೋ ವಿಮಾನ ಹಾರಾಟ ಆರಂಭವಾಯಿತು.
ಶಿವಮೊಗ್ಗದಿಂದ ಹೈದರಾಬಾದ್, ತಿರುಪತಿ, ಗೋವಾಕ್ಕೆ ಸ್ಟಾರ್ ಏರ್ ಸಂಸ್ಥೆ ಸಂಪರ್ಕ ಕಲ್ಪಿಸುತ್ತಿದೆ. 2023ರ ನವೆಂಬರ್ 21ರಂದು ಸ್ಟಾರ್ ಏರ್ ಸೇವೆ ಆರಂಭಿಸಿತು.
ಶಿವಮೊಗ್ಗದಿಂದ ಚೆನ್ನೈ, ಹೈದರಾಬಾದ್‌ಗೆ ಸ್ಪೈಸ್ ಜೆಟ್ ವಿಮಾನಯಾನ ಸೇವೆ ಆರಂಭವಾಗಿದೆ. ಅ.10ರಿಂದ ಈ ವಿಮಾನ ಹಾರಾಟ ನಡೆಸುತ್ತಿದೆ. ಸದ್ಯ ಮಂಗಳವಾರ ಹೊರತು ಉಳಿದ ದಿನಗಳು ವಿಮಾನ ಹಾರಾಟ ನಡೆಸಲಿದೆ.
ಶಿವಮೊಗ್ಗ ನಿಲ್ದಾಣದ ವಿಮಾನಗಳ ಟೈಮಿಂಗ್
ಪ್ರತಿದಿನ ಮೂರು ವಿಮಾನಗಳು ಶಿವಮೊಗ್ಗದಿಂದ 12 ಟ್ರಿಪ್ ಹಾರಾಟ ನಡೆಸುತ್ತಿವೆ. ಪ್ರಯಾಣಿಕರಿಂದ ಉತ್ತಮ ಪ್ರತಿಕ್ರಿಯೆಯು ಇದೆ. ಯಾವೆಲ್ಲ ವಿಮಾನಗಳು ಎಷ್ಟೊತ್ತಿಗೆ ಬರುತ್ತವೆ? ಎಷ್ಟು ಹೊತ್ತಿಗೆ ಇಲ್ಲಿಂದ ಹಾರಾಡುತ್ತವೆ. ಇಲ್ಲಿದೆ ಲಿಸ್ಟ್
ಶಿವಮೊಗ್ಗಕ್ಕೆ ಆಗಮನದ ಸಮಯ
ಹೈದರಾಬಾದ್ – ಶಿವಮೊಗ್ಗ | ಸ್ಟಾರ್ ಏರ್ | ಬೆಳಗ್ಗೆ 9.30ಕ್ಕೆ ಹೈದರಾಬಾದ್‌ನಿಂದ ಹೊರಟು ಬೆಳಗ್ಗೆ 10.50ಕ್ಕೆ ಶಿವಮೊಗ್ಗಕ್ಕೆ ಆಗಮಿಸಲಿದೆ.
ಚೆನ್ನೈ – ಶಿವಮೊಗ್ಗ | ಸ್ಪೈಸ್ ಜೆಟ್ |ಬೆಳಗ್ಗೆ 10.40ಕ್ಕೆ ಚೆನ್ನೈನಿಂದ ಹೊರಟು ಮಧ್ಯಾಹ್ನ 12.10ಕ್ಕೆ ಶಿವಮೊಗ್ಗಕ್ಕೆ ಆಗಮಿಸಲಿದೆ.
ಬೆಂಗಳೂರು – ಶಿವಮೊಗ್ಗ | ಇಂಡಿಗೋ | ಮಧ್ಯಾಹ್ನ 12.15ಕ್ಕೆ ಬೆಂಗಳೂರಿನಿಂದ ಹೊರಟು ಮಧ್ಯಾಹ್ನ 1.25ಕ್ಕೆ ಶಿವಮೊಗ್ಗಕ್ಕೆ ಆಗಮಿಸಲಿದೆ.
ತಿರುಪತಿ – ಶಿವಮೊಗ್ಗ | ಸ್ಟಾರ್ ಏರ್ | ಮಧ್ಯಾಹ್ನ 1 ಗಂಟೆಗೆ ತಿರುಪತಿಯಿಂದ ಹೊರಟು ಮಧ್ಯಾಹ್ನ 2 ಗಂಟೆಗೆ ಶಿವಮೊಗ್ಗಕ್ಕೆ ಆಗಮಿಸಲಿದೆ.
ಹೈದರಾಬಾದ್ – ಶಿವಮೊಗ್ಗ | ಸ್ಪೈಸ್ ಜೆಟ್ | ಮಧ್ಯಾಹ್ನ 2.40ಕ್ಕೆ ಹೈದರಾಬಾದ್‌ನಿಂದ ಹೊರಟು ಸಂಜೆ 4 ಗಂಟೆಗೆ ಶಿವಮೊಗ್ಗಕ್ಕೆ ಆಗಮಿಸಲಿದೆ.
ಗೋವಾ – ಶಿವಮೊಗ್ಗ | ಸ್ಟಾರ್ ಏರ್ | ಮಧ್ಯಾಹ್ನ 3.50ಕ್ಕೆ ಗೋವಾದಿಂದ ಹೊರಟು ಸಂಜೆ 4.40ಕ್ಕೆ ಶಿವಮೊಗ್ಗಕ್ಕೆ ಆಗಮಿಸಲಿದೆ.
ಶಿವಮೊಗ್ಗದಿಂದ ಹೊರಡುವ ಸಮಯ
ತಿರುಪತಿ | ಸ್ಟಾರ್ ಏರ್ | ಬೆಳಗ್ಗೆ 11.20ಕ್ಕೆ ಶಿವಮೊಗ್ಗ ವಿಮಾನ ನಿಲ್ದಾಣದಿಂದ ನಿರ್ಗಮಿಸಲಿದೆ.
ಹೈದರಾಬಾದ್ | ಸ್ಪೈಸ್ ಜೆಟ್ | ಮಧಾಹ್ನ 12.35ಕ್ಕೆ ಶಿವಮೊಗ್ಗದಿಂದ ನಿರ್ಗಮಿಸಲಿದೆ.
ಬೆಂಗಳೂರು | ಇಂಡಿಗೋ | ಮಧ್ಯಾಹ್ನ 1.45ಕ್ಕೆ ಶಿವಮೊಗ್ಗದಿಂದ ನಿರ್ಗಮಿಸಲಿದೆ.
ಗೋವಾ | ಸ್ಟಾರ್ ಏರ್ | ಮಧ್ಯಾಹ್ನ 2.30ಕ್ಕೆ ಶಿವಮೊಗ್ಗ ವಿಮಾನ ನಿಲ್ದಾಣದಿಂದ ನಿರ್ಗಮಿಸಲಿದೆ.
ಚೆನ್ನೈ | ಸ್ಪೈಸ್ ಜೆಟ್ | ಸಂಜೆ 4.25ಕ್ಕೆ ಶಿವಮೊಗ್ಗದಿಂದ ನಿರ್ಗಮನ.
ಹೈದರಾಬಾದ್ | ಸ್ಟಾರ್ ಏರ್ | ಸಂಜೆ 5.10ಕ್ಕೆ ಶಿವಮೊಗ್ಗದಿಂದ ನಿರ್ಗಮನ.
ಇದನ್ನೂ ಓದಿ » ದಾಖಲೆ ನಿರ್ಮಿಸಿದ ಶಿವಮೊಗ್ಗ ವಿಮಾನ ನಿಲ್ದಾಣ, ಏನದು?