ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 11 DECEMBER 2023
ಮತ್ತಷ್ಟು ಸುದ್ದಿ ಕೆಳಗಿದೆ ಸುಲಭ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ ಮೊಬೈಲ್ ನಂಬರ್ : 9972194422
ರಾಯಲ್ ಎನ್ಫೀಲ್ಡ್ ಬೈಕ್ ಕಳವು
SHIMOGA : ಮನೆ ಮುಂದೆ ನಿಲ್ಲಿಸಿದ್ದ ರಾಯಲ್ ಎನ್ಫೀಲ್ಡ್ ಬೈಕ್ ಕಳ್ಳತನ ಮಾಡಲಾಗಿದೆ. ಶರಾವತಿ ನಗರದ ಸಂದೀಪ್ ಎಂಬುವವರು ಕೆಲಸ ಮುಗಿಸಿ ಬಂದು ರಾತ್ರಿ 9 ಗಂಟೆಗೆ ತಮ್ಮ ಮನೆ ಮುಂದೆ ಬೈಕ್ ನಿಲ್ಲಿಸಿದ್ದರು. ಮರುದಿನ ಬೆಳಗ್ಗೆ ಎದ್ದು ಬಂದು ನೋಡಿದಾಗ ಬೈಕ್ ಇರಲಿಲ್ಲ. ಎಲ್ಲಡೆ ಹುಡುಕಾಡಿದ ಸಂದೀಪ್ ಅವರು ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು ಪ್ರಕರಣ ದಾಖಲಾಗಿದೆ.
» ವಾಟ್ಸಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ |
» ಫೇಸ್ಬುಕ್ ಮೆಸೆಂಜರ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ |
ದೇವಸ್ಥಾನದ ಹುಂಡಿ ಕಳ್ಳತನ
SHIMOGA : ಶೇಷಾದ್ರಿಪುರಂನ ಶ್ರೀ ಚೌಡೇಶ್ವರಿ ದೇವಿ ದೇವಸ್ಥಾನದ ಬಾಗಿಲಿನ ಬೀಗ ಮುರಿದು ಹುಂಡಿ ಕಳ್ಳತನ ಮಾಡಲಾಗಿದೆ. ಡಿ.9ರಂದು ಬೆಳಗ್ಗೆ ಅರ್ಚಕರು ದೇವಸ್ಥಾನಕ್ಕೆ ಬಂದಾಗ ಪ್ರಕರಣ ಬೆಳಕಿಗೆ ಬಂದಿದೆ. ದೇಗುಲದಿಂದ ಸಮೀಪದಲ್ಲಿರುವ ಹಳೆಯ ಕೆನರಾ ಬ್ಯಾಂಕ್ ಆವರಣದಲ್ಲಿ ಖಾಲಿ ಹುಂಡಿ ಪತ್ತೆಯಾಗಿದೆ. ಕಳ್ಳರು ಹುಂಡಿ ಕದ್ದೊಯ್ದು ಅದನ್ನು ಒಡೆದು ಒಳಗಿದ್ದ ಸುಮಾರು 25 ಸಾವಿರ ರೂ. ಕಾಣಿಕೆ ಹಣ ಕಳ್ಳತನ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಈ ಸಂಬಂಧ ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆನ್ನಿಗೆ ಚೂರಿ ಹಾಕಿದ ಸ್ನೇಹಿತರು
SHIMOGA : ಸಾಲದ ಹಣ ಹಿಂತಿರುಗಿಸದ ಹಿನ್ನೆಲೆ ಸ್ನೇಹಿತರೆ ಬೆನ್ನಿಗೆ ಚೂರಿ ಹಾಕಿದ್ದು ವ್ಯಕ್ತಿಯೊಬ್ಬ ಗಾಯಗೊಂಡಿದ್ದಾನೆ. ಆಟೋ ಚಾಲಕ ವಿನಯ್ ಕುಮಾರ್ ಗಾಯಾಳು. ಸ್ನೇಹಿತನೊಬ್ಬನಿಂದ ವಿನಯ್ ಕುಮಾರ್ ಎರಡು ತಿಂಗಳ ಹಿಂದೆ 20 ಸಾವಿರ ರೂ. ಸಾಲ ಪಡೆದಿದ್ದ. ಈಚೆಗೆ ಹಣ ಹಿಂತಿರುಗಿಸುವಂತೆ ಆತ ಕೇಳಿದ್ದ. ಡಿ.8ರಂದು ರಾತ್ರಿ ಸಾಲ ಕೊಟ್ಟಿದ್ದ ಸ್ನೇಹಿತ ಮತ್ತು ಇನ್ನೊಬ್ಬ ಯುವಕ ವಿನಯ್ನನ್ನು ಕರೆಯಿಸಿಕೊಂಡಿದ್ದರು. ವಿನಯ್ನ ಬೈಕ್ನಲ್ಲಿ ಹೊಳೆಹೊನ್ನೂರು ರಸ್ತೆಗೆ ಕರೆದೊಯ್ದಿದ್ದು ಹಣ ಹಿಂತಿರುಗಿಸುವಂತೆ ಕೇಳಿ ಚಲಿಸುತ್ತಿದ್ದ ಬೈಕ್ನಲ್ಲಿಯೇ ವಿನಯ್ಗೆ ಹೊಡೆದು, ಬೆನ್ನಿಗೆ ಚಾಕುವಿನಿಂದ ಚುಚ್ಚಿದ್ದಾರೆ ಎಂದು ಆರೋಪಿಸಲಾಗಿದೆ. ಪುರಲೆ ಸಮೀಪ ವಿನಯ್ ಬೈಕ್ ಬಿಟ್ಟು ತಪ್ಪಿಸಿಕೊಂಡಿದ್ದಾಗಿ ದೂರಿನಲ್ಲಿ ತಿಳಿಸಿದ್ದಾರೆ. ಶಿವಮೊಗ್ಗ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ – ಜನ ಶತಾಬ್ದಿ, ಇಂಟರ್ಸಿಟಿ ವಿರುದ್ಧ ದೂರು, ಬಳಕೆದಾರರ ಸಭೆಯಲ್ಲಿ ಏನೇನೆಲ್ಲ ಚರ್ಚೆಯಾಯ್ತು? ಇಲ್ಲಿದೆ 7 ಪಾಯಿಂಟ್