ಶಿವಮೊಗ್ಗ ಲೈವ್.ಕಾಂ | SHIMOGA NEWS | 11 JUNE 2021
ಶಿವಮೊಗ್ಗ ತಾಲೂಕಿನ ಹುಣಸೋಡು ಕ್ರಷರ್ ಸ್ಫೋಟ ಪ್ರಕರಣದಲ್ಲಿ ಬಂಧಿತರಾಗಿದ್ದ ಐವರು ಆರೋಪಿಗಳಿಗೆ ಜಿಲ್ಲಾ ನ್ಯಾಯಾಲಯ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.
ಯಾರಿಗೆಲ್ಲ ಜಾಮೀನು ಸಿಕ್ಕಿದೆ?
ಕ್ರಷರ್ ಜಾಗದ ಮಾಲೀಕ ಶಂಕರಗೌಡ ಕುಲಕರ್ಣಿ, ಆತನ ಪುತ್ರ ಅವಿನಾಶ್ ಕುಲಕರ್ಣಿ, ಕ್ರಷರ್ ಮ್ಯಾನೇಜರ್ ವಿನೋಬನಗರದ ನರಸಿಂಹ, ಮುಮ್ತಾಜ್ ಅಹಮದ್ ಮತ್ತು ರಶೀದ್‍ಗೆ ಗುರುವಾರ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶ ಎಸ್.ಎ.ಮುಸ್ತಾಫ ಹುಸೇನ್ ಜಾಮೀನು ನೀಡಿದ್ದಾರೆ.
ಉಳಿದವರ ಜಾಮೀನು ಕ್ಯಾನ್ಸಲ್
ಇದೇ ವೇಳೆ ಕ್ರಷರ್ ಮಾಲೀಕ ರವೀಂದ್ರನಗರದ ಬಿ.ವಿ.ಸುಧಾಕರ್, ಆಂಧ್ರಪ್ರದೇಶ ಅನಂತಪುರದ ಪಿ.ಶ್ರೀರಾಮುಲು, ಆತನ ಪುತ್ರರಾದ ಪಿ.ಮಂಜುನಾಥ ಸಾಯಿ, ಪೃಥ್ವಿನಾಥ ಸಾಯಿ ಹಾಗೂ ವಿಜಯಕುಮಾರ್ ಅವರಿಗೆ ಜಾಮೀನು ನಿರಾಕರಿಸಿದ್ದಾರೆ.
ಜನವರಿ 21ರಂದು ಹುಣಸೋಡು ಗ್ರಾಮದ ಕ್ವಾರಿಯಲ್ಲಿ ಸ್ಫೋಟ ಸಂಭವಿಸಿತ್ತು. ಘಟನೆಯಲ್ಲಿ ಆರು ಮಂದು ಸಾವನ್ನಪ್ಪಿದ್ದರು. ಮೂವರು ನಾಪತ್ತೆಯಾಗಿದ್ದಾರೆ. ಪ್ರಕರಣ ಸಂಬಂಧ ಶಿವಮೊಗ್ಗ ಗ್ರಾಮಾಂತರ ಠಾಣೆ ಪೊಲಿಸರು ಹತ್ತು ಮಂದಿಯನ್ನು ಬಂಧಿಸಿದ್ದಾರೆ.
ಇನ್ಮುಂದೆ ಕರೋನ ಪರೀಕ್ಷೆ ನಿಮ್ಮ ಮನೆಯಲ್ಲೇ ಆಗುತ್ತೆ. ಶಿವಮೊಗ್ಗ ನಗರ ವ್ಯಾಪ್ತಿಯ ಯಾವುದೆ ಏರಿಯಾದಿಂದ ಕರೆ ಮಾಡಿ. ಪರೀಕ್ಷೆಗೆ ನಿಮ್ಮ ಮನೆಗೆ ಬರ್ತಾರೆ ತಜ್ಞರು.
ಶಿವಮೊಗ್ಗ ಲೈವ್‍ಗೆ ಸುದ್ದಿ ನೀಡಲು ಕರೆ ಮಾಡಿ 9964634494
ವಾಟ್ಸಪ್‍ನಲ್ಲಿ ಸುದ್ದಿಗಾಗಿ 7411700200
ಶಿವಮೊಗ್ಗ ಲೈವ್ ಈ ಮೇಲ್ [email protected]