ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 5 MARCH 2024
SHIMOGA : ಅಕೇಶಿಯಾ ಮತ್ತು ನೀಲಗಿರಿಯನ್ನು ನಿಷೇಧಿಸುವಂತೆ, ಎಂಪಿಎಂ ಕಾರ್ಖಾನೆಗೆ ನೀಡಿದ್ದ ಅರಣ್ಯ ಭೂಮಿ ಹಿಂಪಡೆಯಬೇಕು ಎಂದು ಆಗ್ರಹಿಸಿ ನಮ್ಮೂರಿಗೆ ಅಕೇಶಿಯಾ ಮರ ಬೇಡ ಹೋರಾಟ ಒಕ್ಕೂಟದ ಪದಾಧಿಕಾರಿಗಳು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಅವರಿಗೆ ಮನವಿ ಸಲ್ಲಿಸಿದರು.
ಮಲೆನಾಡು ಪಶ್ಚಿಮಘಟ್ಟಗಳ ಶ್ರೇಣಿ ನಿತ್ಯ ಹರಿದ್ವರ್ಣದ ಕಾಡು. ಇಲ್ಲಿ ಹಲವು ನದಿಗಳು ಜನ್ಮತಾಳಿವೆ. ಜೀವ ವೈವಿಧ್ಯ ಪ್ರದೇಶ ಇದಾಗಿದ್ದು ಇಂತಹ ಪರಿಸರ ಏರುಪೇರಾದರೆ ವನ್ಯಜೀವಿಗಳು ಮಾತ್ರವಲ್ಲ, ಮಾನವ ಸಂಕುಲದ ಮೇಲೂ ಪರಿಣಾಮ ಬೀರುತ್ತದೆ. ಇಂತಹ ಪ್ರದೇಶಗಳಲ್ಲಿ ಅಕೇಶಿಯಾ ಮತ್ತು ನೀಲಗಿರಿ ನೆಡುತೋಪುಗಳನ್ನು ಬೆಳೆಸುವುದರಿಂದ ಪರಿಸರಕ್ಕೆ ಧಕ್ಕೆಯಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.
ಎಂಪಿಎಂಗೆ ನೀಡಿದ್ದ ಅರಣ್ಯ ಹಿಂಪಡೆಯಿರಿ
ಭದ್ರಾವತಿಯ ಎಂಪಿಎಂಗೆ ನೀಡಿದ್ದ 20005.42 ಹೆಕ್ಟೇರ್ ಅರಣ್ಯ ಭೂಮಿ 2020ರ ಆ.12ಕ್ಕೆ ಲೀಸ್ ಅವಧಿ ಮುಗಿದಿದೆ. ಎಂಪಿಎಂ ಕಾಗದ ಕಾರ್ಖಾನೆ 2015ಕ್ಕೆ ಬಂದ್ ಆಗಿದೆ. ಹೀಗಿದ್ದರೂ ಈ ಲೀಸ್ ಅನ್ನು ಮುಂದುವರಿಸುವ ಅಗತ್ಯ ಇಲ್ಲ. ಅರಣ್ಯ ಇಲಾಖೆಗೆ ಸೇರಿದ ಈ ಭೂಮಿಯನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿದರು.
ಇದನ್ನೂ ಓದಿ – ಶಿವಮೊಗ್ಗ ಟೋಲ್, ದಾಖಲೆ ಬಿಡುಗಡೆ ಮಾಡಿ ಆಕ್ರೋಶ ವ್ಯಕ್ತಪಡಿಸಿದ ಕಾಂಗ್ರೆಸ್ ಮುಖಂಡ, ಏನದು ದಾಖಲೆ?
ಒಕ್ಕೂಟದ ಪ್ರಮುಖರಾದ ಕೆ.ಪಿ.ಶ್ರೀಪಾಲ್, ಪ್ರೊ.ರಾಜೇಂದ್ರ ಚೆನ್ನಿ, ಎಂ.ಗುರುಮೂರ್ತಿ, ಪ್ರಸನ್ನ, ಹೆಚ್.ಟಿ.ಕೃಷ್ಣಮೂರ್ತಿ, ತೀ.ನ.ಶ್ರೀನಿವಾಸ್, ರಾಜಪ್ಪ, ಮಂಜುನಾಥ್ ನವುಲೆ, ತ್ಯಾಗರಾಜ್ ಮಿಥ್ಯಾಂತ, ಸುರೇಶ್ ಅರಸಾಳು, ಬಾಲುನಾಯ್ಡು, ಚಂದ್ರಪ್ಪ, ಅನಿಲ್ ಶೆಟ್ಟರ್, ಶೆಟ್ಟರ್, ನಾಗರಾಜ್ ಚಟ್ನಳ್ಳಿ, ದೇಶಾದ್ರಿ ಹೊಸಮನೆ, ಕೃಪಾ, ಅಕ್ಷತಾ ಹುಂಚದಕಟ್ಟೆ ಇತರರಿದ್ದರು.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422