ಶಿವಮೊಗ್ಗದಲ್ಲಿ ಮೀಸಲಾತಿಯ ಶವಯಾತ್ರೆ, ಶಿವಮೂರ್ತಿ ಸರ್ಕಲ್‌ನಲ್ಲಿ ಟ್ರ್ಯಾಕ್ಟರ್‌ ಅಡ್ಡ ನಿಲ್ಲಿಸಿ ರಸ್ತೆ ತಡೆ

ನಿಮ್ಮೂರ ಸುದ್ದಿ ಕೆಲವೇ ನಿಮಿಷದಲ್ಲಿ ಸಾವಿರ ಸಾವಿರ ಜನರನ್ನು ತಲುಪುತ್ತೆ!

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ನಮಗೆ ಕಳುಹಿಸಬಹುದು. ನಮ್ಮ ವಾಟ್ಸಪ್‌ ನಂಬರ್ 7411700200.

ನಮ್ಮ ಗ್ರೂಪ್‌ ಸೇರಿಲು ಇಲ್ಲಿ ಕ್ಲಿಕ್‌ ಮಾಡಿ

ಶಿವಮೊಗ್ಗ: ಒಳ ಮೀಸಲಾತಿ ವರ್ಗೀಕರಣ ವಿರೋಧಿಸಿ ಬಂಜಾರ (Banjara) ಸಮುದಾಯ ನಡೆಸುತ್ತಿರುವ ಸತ್ಯಾಗ್ರಹ 7ನೇ ದಿನಕ್ಕೆ ಕಾಲಿಟ್ಟಿದೆ. ಇವತ್ತು ಮೀಸಲಾತಿಯ ಶವಯಾತ್ರೆ ನಡೆಸಿ ಬಂಜಾರ ಸಮುದಾಯದವರು ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಸವಳಂಗ ರಸ್ತೆಯಲ್ಲಿ ಮೀಸಲಾತಿಯ ಶವಯಾತ್ರೆ ನಡೆಸಲಾಯಿತು. ಶಿವಮೂರ್ತಿ ಸರ್ಕಲ್‌ನಲ್ಲಿ ಅಣಕು ಶವವನ್ನು ಇರಿಸಿ ಘೋಷಣೆ ಕೂಗಿದರು. ಅಲ್ಲಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಶವಯಾತ್ರೆ ಮುಂದುವರೆಸಿದರು. ಸುದ್ದಿಯ ಮುಂದಿನ 6 ಪ್ಯಾರಾಗಳು ಕೆಳಗಿವೆ.

ಟ್ರ್ಯಾಕ್ಟರ್‌ ಅಡ್ಡ ನಿಲ್ಲಿಸಿ ರಸ್ತೆ ತಡೆ

ಇನ್ನು, ಶಿವಮೂರ್ತಿ ವೃತ್ತದಲ್ಲಿ ಎಲ್ಲ ಕಡೆ ಟ್ರ್ಯಾಕ್ಟರ್‌ಗಳನ್ನು ರಸ್ತೆಗೆ ಅಡ್ಡ ನಿಲ್ಲಿಸಿ ರಸ್ತೆ ತಡೆ ನಡೆಸಲಾಯಿತು. ಇದರಿಂದ ಸವಳಂಗ ರಸ್ತೆ, ಕುವೆಂಪು ರಸ್ತೆ, ಜಯನಗರ ಮುಖ್ಯ ರಸ್ತೆಯಲ್ಲಿ ವಾಹನಗಳು ಸರತಿಯಲ್ಲಿ ನಿಲ್ಲುವಂತಾಯಿತು.

ಸಿದ್ದರಾಮಯ್ಯ ಅವರು ಹಿಂದುಳಿದ ವರ್ಗಗಳಿಗೆ ನ್ಯಾಯ ಒದಗಿಸಬಹುದು ಎಂಬ ನಿರೀಕ್ಷೆ ಇತ್ತು. ಆದರೆ ಅವರು ನಮ್ಮ ಸಮುದಾಯಕ್ಕೆ ಅನ್ಯಾಯ ಮಾಡಿದ್ದಾರೆ. ಮೀಸಲಾತಿಯ ಉದ್ದೇಶವೇ ಹಾಳಾಗಲಿದೆ. ಆದ್ದರಿಂದ ಮೀಸಲಾತಿಯ ಶವಯಾತ್ರೆ ಮಾಡುತ್ತಿದ್ದೇವೆ.

  • ಕೆ.ಬಿ.ಅಶೋಕ್‌ ನಾಯ್ಕ್‌, ಜಿಲ್ಲಾ ಬಂಜಾರ ಸಂಘದ ಅಧ್ಯಕ್ಷ

RED-LINE-

ಸಿದ್ದಾಪುರ, ರಾಮನಕೊಪ್ಪ, ವೀರಾಪುರ, ಸಿರಿಯೂರು, ಬಿಳಕಿ, ಹೆಬ್ಬಂಡಿ ಕೋಮಾರನಹಳ್ಳಿ, ಬಾಬಳ್ಳಿ, ನಾಗತಿ ಬೆಳಗಲು, ಹೊಸಹಳ್ಳಿ, ಚಿಕ್ಕಮರಡಿ, ಕಾಟಿಕೆರೆ, ಅಬ್ಬಲಗೆರೆ, ಹುಣಸೋಡು, ಬಿಕ್ಕೋನಹಳ್ಳಿ ಬೀರನಕೆರೆ, ಮೇಲಿನ ಕುಂಚನಹಳ್ಳಿಯ ನಿವಾಸಿಗಳು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

Banjara Sanga Protest in Shimoga
ಶಿವಮೂರ್ತಿ ಸರ್ಕಲ್‌ನಲ್ಲಿ ಮೀಸಲಾತಿಯ ಅಣಕು ಶವಯಾತ್ರೆ ನಡೆಸಿದ ಬಂಜಾರ ಸಮುದಾಯ.
Banjara Sanga Protest in Shimoga
ಸವಳಂಗ ರಸ್ತೆಯಲ್ಲಿ ಅಣಕು ಶವಯಾತ್ರೆಯಲ್ಲಿ ಮಾಜಿ ಶಾಸಕ ಕೆ.ಬಿ.ಅಶೋಕ್‌ ನಾಯ್ಕ್‌.
Banjara Sanga Protest in Shimoga
ಶಿವಮೂರ್ತಿ ಸರ್ಕಲ್‌ನಲ್ಲಿ ಅಣಕು ಶವ ಇರಿಸಿ ಹೋರಾಟ.
Banjara Sanga Protest in Shimoga
ಶಿವಮೂರ್ತಿ ಸರ್ಕಲ್‌ನಲ್ಲಿ ಅಣಕು ಶವ ಇರಿಸಿ ಘೋಷಣೆ.
Banjara Sanga Protest in Shimoga
ಅಣಕು ಶವದ ಮುಂದೆ ಮಹಿಳೆಯರ ಆಕ್ರೋಶ.
Banjara Sanga Protest in Shimoga
ಶಿವಮೂರ್ತಿ ಸರ್ಕಲ್‌ನಲ್ಲಿ ರಸ್ತೆಗೆ ಟ್ರಾಕ್ಟರ್‌ ಅಡ್ಡ ನಿಲ್ಲಿಸಿ ರಸ್ತೆ ತಡೆ.

ಇದನ್ನೂ ಓದಿ » ಶಿವಮೊಗ್ಗ – ಬೆಂಗಳೂರು ವಿಮಾನ, ಗುಡ್‌ ನ್ಯೂಸ್‌ ಕೊಟ್ಟರು ಸಂಸದ ರಾಘವೇಂದ್ರ

JNNCE-Admission-Advt-scaled

Banjara sanga protest in Shimoga

Leave a Comment