ಶಿವಮೊಗ್ಗದಲ್ಲಿ ಅಂಬು ಕಡಿದ ತಹಶೀಲ್ದಾರ್, ಧಗಧಗ ಹೊತ್ತಿ ಉರಿದ ರಾವಣ, ಹೇಗಿತ್ತು ವೈಭವ?

ಸೈಟ್‌ ಮಾರಾಟಕ್ಕಿದೆ

ಶಿವಮೊಗ್ಗದ ಬಿದಿರೆಯಲ್ಲಿ ಸೈಟ್‌ ಮಾರಾಟಕ್ಕಿದೆ. ಸಾಯಿ ಬಾಬಾ ದೇಗುಲ, ರಾಷ್ಟ್ರೀಯ ಹೆದ್ದಾರಿಗೆ ಸಮೀಪದಲ್ಲಿ 30*50 ಅಳತೆಯ ಸೈಟು ಮಾರಾಟಕ್ಕಿದೆ. ಸಂಪರ್ಕಿಸಿ: 8073449559

ಶಿವಮೊಗ್ಗ ಲೈವ್.ಕಾಂ | SHIMOGA NEWS | 15 ಅಕ್ಟೋಬರ್ 2021

ಶಿವಮೊಗ್ಗ ದಸರಾ ಅಂಗವಾಗಿ ಸಂಪ್ರದಾಯಿಕವಾಗಿ ಅಂಬು ಕಡಿಯಲಾಯಿತು. ತಹಶೀಲ್ದಾರ್ ನಾಗರಾಜ್ ಅವರು ಅಂಬು ಕಡಿಯುವುದನ್ನು ಸಾವಿರಾರು ಜನರು ಕಣ್ತುಂಬಿಕೊಂಡರು.

ಇದನ್ನು ಓದಿ | ಶಿವಮೊಗ್ಗದಲ್ಲಿ ದಸರಾ ಮೆರವಣಿಗೆಗೆ ಚಾಲನೆ, ನಂದಿ ಧ್ವಜಕ್ಕೆ ಡಿಸಿ, ಮೇಯರ್ ಪೂಜೆ

ಫ್ರೀಡಂ ಪಾರ್ಕ್ ಮೈದಾನದಲ್ಲಿ ಬನ್ನಿ ಮಂಟಪ ನಿರ್ಮಿಸಲಾಗಿತ್ತು. ಸಾಂಪ್ರದಾಯಿಕ ಕತ್ತಿಯಿಂದ ತಹಶೀಲ್ದಾರ್ ನಾಗರಾಜ್ ಅವರು ಅಂಬು ಕಡಿದರು.

ಬನ್ನಿ ಮುಡಿದು ಒಳ್ಳೆಯದನ್ನು ಹರಸಿದರು

ತಹಶೀಲ್ದಾರ್ ನಾಗರಾಜ್ ಅವರು ಅಂಬು ಕಡಿಯುತ್ತಿದ್ದಂತೆ ಜನರು ಘೋಷಣೆಗಳನ್ನು ಕೂಗಿದರು. ಪರಸ್ಪರರು ಬನ್ನಿ ಹಂಚಿಕೊಂಡರು. ಬನ್ನಿ ಮುಡಿದು ಬಾಳು ಬಂಗಾರವಾಗಲಿ ಎಂದು ಹಾರೈಸಿದರು. ಬನ್ನಿ ಮಂಟಪದ ಮೇಲೆ ಮಹಾನಗರ ಪಾಲಿಕೆ ಸದಸ್ಯರು, ಅಧಿಕಾರಿಗಳು ಬನ್ನಿ ಹಂಚಿದರು.

ADVT JULY NANJAPPA HOSPITAL HOME LAB TESTING

ರಾವಣ ದಹನ, ಬಾಣ ಬಿರುಸು

ಅಂಬು ಕಡಿಯುತ್ತಿದ್ದಂತೆ ಫ್ರೀಡಂ ಪಾರ್ಕ್’ನಲ್ಲಿ ಸ್ಥಾಪಿಸಲಾಗಿದ್ದ ರಾವಣನ ಪ್ರತಿಕೃತಿಯನ್ನು ದಹಿಸಲಾಯಿತು. ಬಾಣ ಬಿರುಸುಗಳ ಸೊಬಗು ಮುಗಿಲೆತ್ತರದಲ್ಲಿ ಕಣ್ಮನ ರಂಜಿಸಿತು. ದೊಡ್ಡ ಸಂಖ್ಯೆಯಲ್ಲಿ ಜನರು ಭಾಗವಹಿಸಿದ್ದರಿಂದ ಫ್ರೀಡಂ ಪಾರ್ಕ್ ಬಳಿ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿತ್ತು.

AVvXsEjJhBkheg9Y1Ghkcubv46shzRrmmV5iqKvcBLoQRt8ZHbu1TtV7dDdUid1AP1Xr3EoEl2vPenk2SwjhbEzZPF9V Ovzy5s2MlNpbpX Lj8qKJ9f6YHqE2Xy369DFwp h7cCrjQymWsSPZcXhmETq3FdloNHZ4exui5jX 3V58AY6y8bkoI1sh7BQBEpdA=s926

1634305859776532 2

1632381449326627 1

1634305855456302 3

(ಶಿವಮೊಗ್ಗ ಲೈವ್.ಕಾಂ ನಮ್ಮೂರ ನ್ಯೂಸ್ ವಿಭಾಗ – ನಿಮ್ಮೂರ ನ್ಯೂಸ್‍ಗೆ ನೀವೇ ವರದಿಗಾರರು. ನಿಮ್ಮೂರ ಪ್ರಮುಖ ಘಟನೆಗಳನ್ನು ನೀವೇ ವರದಿ ಮಾಡಬಹುದು. ಫೋಟೊ, ವಿಡಿಯೋ ಸಹಿತ ವರದಿಯನ್ನು ವಾಟ್ಸಪ್ ಅಥವಾ ಈ ಮೇಲ್ ಮಾಡಬಹುದು)

ಶಿವಮೊಗ್ಗ ಲೈವ್‍ಗೆ ಸುದ್ದಿ ನೀಡಲು ಕರೆ ಮಾಡಿ 9964634494

ವಾಟ್ಸಪ್ ಮೂಲಕ ಸುದ್ದಿಗಾಗಿ 7411700200

Leave a Comment