ಶಿವಮೊಗ್ಗ ಡಿಸಿ ಕಚೇರಿ ಬಳಿ ನಿಷೇಧಾಜ್ಞೆ, ವಾಹನ ಸಂಚಾರಕ್ಕೂ ನಿರ್ಬಂಧ, ಏ.19ರವರೆಗೆ ಇದೇ ಸ್ಥಿತಿ

SHIVAMOGGA LIVE NEWS | 13 APRIL 2024 ➤ ಸುದ್ದಿಯ ಮುಂದಿನ 5 ಪ್ಯಾರಾಗಳು ಕೆಳಗಿವೆ.

ನಿಮ್ಮೂರ ಸುದ್ದಿ ಕೆಲವೇ ನಿಮಿಷದಲ್ಲಿ ಸಾವಿರ ಸಾವಿರ ಜನರನ್ನು ತಲುಪುತ್ತೆ!

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ನಮಗೆ ಕಳುಹಿಸಬಹುದು. ನಮ್ಮ ವಾಟ್ಸಪ್‌ ನಂಬರ್ 7411700200.

ನಮ್ಮ ಗ್ರೂಪ್‌ ಸೇರಿಲು ಇಲ್ಲಿ ಕ್ಲಿಕ್‌ ಮಾಡಿ

ELECTION NEWS : ಲೋಕಸಭೆ ಚುನಾವಣೆ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಹಿನ್ನೆಲೆ ಜಿಲ್ಲಾಧಿಕಾರಿ ಕಚೇರಿ ಸುತ್ತಮುತ್ತ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಡಿಸಿ ಕಚೇರಿ ಮುಂಭಾಗ ವಾಹನ ಸಂಚಾರವನ್ನು ನಿರ್ಬಂಧಿಸಲಾಗಿದೆ.

ಲೋಕಸಭೆ ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳು ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲಾ ಚುನಾವಣ ಅಧಿಕಾರಿಗೆ ನಾಮಪತ್ರ ಸಲ್ಲಿಸಬೇಕು. ಏ.19ರವರೆಗೆ ನಾಮಪತ್ರ ಸಲ್ಲಿಸುವ ಪ್ರಕ್ರಿಯೆ ನಡೆಯಲಿದೆ. ಈ ಸಂದರ್ಭ ಡಿ.ಸಿ. ಕಚೇರಿ ಬಳಿ ಜನ ಗುಂಪುಗೂಡುವುದನ್ನು ತಡೆಯಲು ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.

ಡಿ.ಸಿ.ಕಚೇರಿ ಮುಂದೆ ಜನ ಸಂಚಾರ ಬಂದ್‌

ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಸವಳಂಗ ರಸ್ತೆ ಬಂದ್‌ ಮಾಡಲಾಗುತ್ತದೆ. ಆರ್‌.ಟಿ.ಒ. ಕಚೇರಿ ರಸ್ತೆ ತಿರುವಿನಲ್ಲಿ ಬ್ಯಾರಿಕೇಡ್‌ ಹಾಕಲಾಗಿದೆ. ಇನ್ನೊಂದೆಡೆ ಮಹಾವೀರ ಸರ್ಕಲ್‌ನಲ್ಲಿಯು ಬ್ಯಾರಿಕೇಡ್‌ ಅಳವಡಿಸಲಾಗಿದೆ. ತಿಲಕನಗರದಿಂದ ಬರುವ ವಾಹನ ತಡೆಯಲು ಪೊಲೀಸರು ಬ್ಯಾರಿಕೇಡ್‌ ಹಾಕಿದ್ದಾರೆ. ಹಾಗಾಗಿ ಜಿಲ್ಲಾಧಿಕಾರಿ ಕಚೇರಿ ಮುಂಭಾಗದ ಸವಳಂಗ ರಸ್ತೆಯಲ್ಲಿ ವಾಹನ ಸಂಚಾರ ಇಲ್ಲವಾಗಿದೆ. ಬೆಳಗ್ಗೆ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭವಾಗುವ ಸಮಯದಿಂದ ಮಧ್ಯಾಹ್ನದವರೆಗೆ ಈ ಭಾಗದ ರಸ್ತೆಯಲ್ಲಿ ವಾಹನ ಸಂಚಾರ ಇರುವುದಿಲ್ಲ.

Traffic Jam in Shimoga city BH Road. Eshwarappa Nomination

ವಾಹನ ಸವಾರರ ಪರದಾಟ

ಬ್ಯಾರಿಕೇಡ್‌ ಹಾಕಿ ರಸ್ತೆ ಬಂದ್‌ ಮಾಡುವುದರಿಂದ ವಾಹನ ಸವಾರರರು ಸಂಕಷ್ಟಕ್ಕೀಡಾಗಿದ್ದಾರೆ. ಸುತ್ತಿ ಬಳಸಿ ಓಡಾಡುವ ಅನಿವಾರ್ಯತೆ ಎದುರಾಗಿದೆ. ಇದೆ ಕಾರಣಕ್ಕೆ ತಿಲಕನಗರ, ದುರ್ಗಿಗುಡಿ, ಕುವೆಂಪು ರಸ್ತೆಯಲ್ಲಿ ವಾಹನ ದಟ್ಟಣೆ ಹೆಚ್ಚಾಗಿದೆ. ಇನ್ನು, ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆಗು ಮೊದಲು ಮೆರವಣಿಗೆ, ಸಭೆಗಳನ್ನು ಆಯೋಜಿಸಿದರೆ ನಗರದಲ್ಲಿ ಟ್ರಾಫಿಕ್‌ ಜಾಮ್‌ ಉಂಟಾಗಲಿದೆ. ಏ.19ರವರೆಗೆ ಜನರು ಈ ಸಂಕಷ್ಟು ಎದುರಿಸುವುದು ಅನಿವಾರ್ಯವಾಗಿದೆ.  

ಇದನ್ನೂ ಓದಿ – ಶಿವಮೊಗ್ಗದಲ್ಲಿ ಮೊದಲ ದಿನ ಐದು ಅಭ್ಯರ್ಥಿಗಳಿಂದ, ಆರು ನಾಮಪತ್ರ, ಯಾರೆಲ್ಲ ನಾಮಪತ್ರ ಸಲ್ಲಿಸಿದರು?

Leave a Comment