ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 11 DECEMBER 2023
ಮತ್ತಷ್ಟು ಸುದ್ದಿ ಕೆಳಗಿದೆ ಸುಲಭ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ ಮೊಬೈಲ್ ನಂಬರ್ : 9972194422
ಬೈಕ್‌ಗೆ ಕಾರು ಡಿಕ್ಕಿ, ರೈತನಿಗೆ ಗಾಯ
SHIMOGA : ಡೈರಿಗೆ ಹಾಲು ಹಾಕಲು ಬೈಕ್‌ನಲ್ಲಿ ತೆರಳುತ್ತಿದ್ದ ರೈತನಿಗೆ ಕಾರು ಹೊಡದಿದೆ. ಗಾಯಗೊಂಡಿರುವ ರೈತ ಚೋಡನಾಳ್‌ನ ಸೋಮಶೇಖರ್ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ತುಪ್ಪೂರಿನಲ್ಲಿರುವ ಹಾಲಿನ ಡೈರಿಗೆ ಹಾಕು ಹಾಕಲು ಬೈಕ್‌ನಲ್ಲಿ ತೆರಳುತ್ತಿದ್ದಾಗ ರಾಷ್ಟ್ರೀಯ ಹೆದ್ದಾರಿ 69ರಲ್ಲಿ ಘಟನೆ ಸಂಭವಿಸಿದೆ. ಸಾಗರ ಕಡೆಯಿಂದ ಬಂದ ಕಾರು ಸೋಮಶೇಖರ್ ಚಲಾಯಿಸುತ್ತಿದ್ದ ಬೈಕ್‌ಗೆ ಡಿಕ್ಕಿ ಹೊಡೆದಿದೆ ಎಂದು ಆರೋಪಿಸಲಾಗಿದೆ. ಸೋಮಶೇಖರ್ ಅವರ ತಲೆಗೆ ಪೆಟ್ಟು ಬಿದ್ದಿದೆ. ಘಟನೆಯಲ್ಲಿ ಬೈಕ್ ಸಂಪೂರ್ಣ ಜಖಂ ಆಗಿದೆ. ಕುಂಸಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
» ವಾಟ್ಸಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ |
» ಫೇಸ್ಬುಕ್ ಮೆಸೆಂಜರ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ |
ಏರಿಯಾ ಡಾಮಿನೇಷನ್ ಗಸ್ತು
SHIMOGA : ಶಿವಮೊಗ್ಗ, ಭದ್ರಾವತಿ ಮತ್ತು ಆನಂದಪುರದಲ್ಲಿ ಪೊಲೀಸರು ಏರಿಯಾ ಡಾಮಿನೇಷನ್ ವಿಶೇಷ ಗಸ್ತು ನಡೆಸಿದರು. ಈ ಸಂದರ್ಭ ಅನುಮಾನಾಸ್ಪದ ವ್ಯಕ್ತಿಗಳನ್ನು ಠಾಣೆಗೆ ಕರೆದೊಯ್ದು 22 ಲಘು ಪ್ರಕರಣ ಮತ್ತು ಐಎಂವಿ ಕಾಯ್ದೆ ಅಡಿ 6 ಪ್ರಕರಣ ದಾಖಲಿಸಲಾಗಿದೆ. ಶಿವಮೊಗ್ಗದ ಬೊಮ್ಮನಕಟ್ಟೆ, ಭದ್ರಾವತಿಯ ಸರ್.ಎಂ.ವಿ.ವೃತ್ತ, ಸೀಗೆ ಬಾಗಿ, ಹನುಮಂತನಗರ, ಉಜ್ಜನಿಪುರ, ಆನಂದಪುರದ ದಾಸಕೊಪ್ಪದಲ್ಲಿ ಪೊಲೀಸರು ಏರಿಯಾ ಡಾಮಿನೇಷನ್ ನಡೆಸಿದರು.
ಭದ್ರಾವತಿಯಲ್ಲಿ ಯಮ, ಚಿತ್ರಗಪ್ತ ಪ್ರತ್ಯಕ್ಷ
BHADRAVATHI : ರಸ್ತೆ ಸುರಕ್ಷತಾ ಸಪ್ತಾಹದ ಅಂಗವಾಗಿ ಸಂಚಾರ ನಿಯಮ ಪಾಲನೆ ಅರಿವು ಮೂಡಿಸುವ ಬೀದಿ ನಾಟಕ ಆಯೋಜಿಸಲಾಯಿತು. ಅಂಡರ್ ಬ್ರಿಡ್ಜ್ ಸರ್ಕಲ್ ಬಳಿ ಯಮ ಮತ್ತು ಚಿತ್ರಗುಪ್ತ ವೇಷಧಾರಿಗಳು ಹೆಲ್ಮೆಟ್ ಧರಿಸದೆ ವಾಹನ ಚಾಲನೆ ಮಾಡಿದರೆ ಯಮಲೋಕಕ್ಕೆ ದಾರಿ ಸುಲಭ ಎಂದು ಜಾಗೃತಿ ಮೂಡಿಸಿದರು. ವಿವಿಧ ಸಂಚಾರ ನಿಯಮಗಳ ಕುರಿತು ಜನರಲ್ಲಿ ಅರಿವು ಮೂಡಿಸಿದರು. ಜಿಲ್ಲಾ ರಕ್ಷಣಾಧಿಕಾರಿ ಮಿಥುನ್ ಕುಮಾರ್, ಭದ್ರಾವತಿ ಡಿವೈಎಸ್‌ಪಿ ನಾಗರಾಜ್, ಭದ್ರಾವತಿ ಗ್ರಾಮಾಂತರ ಠಾಣೆ ಇನ್ಸ್‌ಪೆಕ್ಟರ್ ಜಗದೀಶ್ ಹಂಚಿನಾಳ್, ಭದ್ರಾವತಿ ನಗರ ಇನ್ಸ್‌ಪೆಕ್ಟರ್ ಶ್ರೀಶೈಲ್, ಪೇಪರ್ ಟೌನ್ ಇನ್ಸ್‌ಪೆಕ್ಟರ್ ನಾಗಮ್ಮ ಸೇರಿದಂತೆ ವಿವಿಧ ಠಾಣೆ ಸಿಬ್ಬಂದಿ ಇದ್ದರು. ಭದ್ರಾವತಿ ಜನ್ನಾಪುರದ ಡಾ. ಬಿ.ಆರ್. ಅಂಬೇಡ್ಕರ್ ಜಾನಪದ ಕಲಾ ಸಂಘದ ತಮಟೆ ಜಗದೀಶ್ ತಂಡ ಬೀದಿ ನಾಟಕ ನಡೆಸಿತು.
ಇದನ್ನೂ ಓದಿ – KSRTC ಬಸ್‌ನಲ್ಲಿ ಪತಿಗೆ ಬಿ.ಪಿ ಮಾತ್ರೆ ಕೊಡಲು ವ್ಯಾನಿಟಿ ಬ್ಯಾಗ್‌ಗೆ ಕೈ ಹಾಕಿದ ಮಹಿಳೆಗೆ ಕಾದಿತ್ತು ಆಘಾತ