ರಾತ್ರಿ 9.30ಕ್ಕೆ ತಂದು ಲಾಕ್ ಮಾಡಿ ನಿಲ್ಲಿಸಿದ ಬೈಕ್ 10.30ರ ಹೊತ್ತಿಗೆ ಇಲ್ಲ

SHIVAMOGGA LIVE NEWS | 28 ಮಾರ್ಚ್ 2022 ನೀವು ಸುದ್ದಿ ಓದುತ್ತಿರುವುದು ಶಿವಮೊಗ್ಗ ಲೈವ್‌.ಕಾಂ ವೆಬ್‌ಸೈಟ್‌ನಲ್ಲಿ. ಈ ಸುದ್ದಿಯ ಮುಂದಿನ 8 ಪ್ಯಾರಾಗಳು ಕೆಳಗಿವೆ.

ಲಾಕ್ ಮಾಡಿ ರಾತ್ರಿ ಮನೆ ಮುಂದೆ ನಿಲ್ಲಿಸಿದ್ದ ಬೈಕು ಒಂದೇ ಗಂಟೆಯಲ್ಲಿ ನಾಪತ್ತೆಯಾಗಿದೆ. ಶಿವಮೊಗ್ಗದಲ್ಲಿ RML ನಗರದಲ್ಲಿ ಘಟನೆ ಸಂಭವಿಸಿದೆ.

ಮೊಹಮ್ಮದ್ ಶೋಯೆಬ್ ಎಂಬುವವರಿಗೆ ಸೇರಿದ ಹೀರೊ ಸ್ಪ್ಲೆಂಡರ್ ಬೈಕ್ ಕಳುವಾಗಿದೆ. ಮಾರ್ಚ್ 18ರಂದು ರಾತ್ರಿ ಘಟನೆ ಸಂಭವಿಸಿದೆ.

ಶೋಯೆಬ್ ಅವರು ಮೆಕಾನಿಕ್ ಕೆಲಸ ಮಾಡುತ್ತಾರೆ. ಮಾರ್ಚ್ 18ರಂದು ರಾತ್ರಿ 9.30ಕ್ಕೆ ಮನೆ ಮುಂದೆ ತಂದು ನಿಲ್ಲಿಸಿದ್ದಾರೆ. 10.30ರ ಹೊತ್ತಿಗೆ ಮನೆಯಿಂದ ಹೊರ ಬಂದು ನೋಡಿದಾಗ ಬೈಕ್ ಕಾಣೆಯಾಗಿತ್ತು.

ಎಲ್ಲೆಡೆ ಹುಡುಕಾಡಿದ ಶೋಯೆಬ್ ಅವರು ಬಳಿಕ ದೊಡ್ಡಪೇಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.  

Shimoga Nanjappa Hospital

ಇದನ್ನೂ ಓದಿ | ಇವತ್ತಿನ ಎಲ್ಲಾ ಸುದ್ದಿಗಳನ್ನು ಓದಲು ಕ್ಲಿಕ್ ಮಾಡಿ

ಈ ಮೇಲ್ – shivamoggalive@gmail.com

WhatsApp Number – 7411700200

bike theft reference image

Leave a Comment