ಉಷಾ ನರ್ಸಿಂಗ್ ಹೋಂ ಬಳಿ ಟೀ ಕುಡಿದು ಬರುವಷ್ಟರಲ್ಲಿ ಬೈಕ್ ಕದ್ದ ಖದೀಮರು

SHIVAMOGGA LIVE NEWS | SHIMOGA | 20 ಏಪ್ರಿಲ್ 2022

ಟೀ ಕುಡಿದು ಬರುವಷ್ಟರಲ್ಲಿ ಬೈಕ್ ಕಳವು ಮಾಡಲಾಗಿದೆ. ಶಿವಮೊಗ್ಗದ ರವೀಂದ್ರ ನಗರ ಗಣಪತಿ ದೇವಸ್ಥಾನದ ಪಕ್ಕದ ನಂದಿನಿ ಹಾಲಿನ ಬೂತ್ ಬಳಿ ಘಟನೆ ಸಂಭವಿಸಿದೆ.

ರವೀಂದ್ರನಗರದ ಅನಂತಮೂರ್ತಿ ಎಂಬುವವರಿಗೆ ಸೇರಿದ ಸ್ಪ್ಲೆಂಡರ್ ಬೈಕ್ ಕಳುವಾಗಿದೆ. ಬೆಳಗ್ಗೆ 7.45ರ ಹೊತ್ತಿಗೆ ನಂದಿನಿ ಹಾಲಿನ ಬೂತ್’ನಲ್ಲಿ ಟೀ ಕುಡಿಯಲು ಬೈಕಿನಲ್ಲಿ ಬಂದಿದ್ದಾರೆ. ಬೂತ್ ಪಕ್ಕದಲ್ಲೆ ರಸ್ತೆಯಲ್ಲಿ ಬೈಕ್ ನಿಲ್ಲಿಸಿದ್ದರು.

ಟೀ ಕುಡಿದು ಹಿಂತಿರುಗಿದಾಗ ಸ್ಪ್ಲೆಂಡರ್ ಬೈಕ್ ನಾಪತ್ತೆಯಾಗಿತ್ತು. ಎಲ್ಲೆಡೆ ಹುಡುಕಿದ ಅನಂತಮೂರ್ತಿ ಅವರು ಜಯನಗರ ಠಾಣೆಗೆ ದೂರು ನೀಡಿದ್ದಾರೆ.

ಇದನ್ನೂ ಓದಿ | ಇವತ್ತಿನ ಎಲ್ಲಾ ಸುದ್ದಿಗಳನ್ನು ಓದಲು ಕ್ಲಿಕ್ ಮಾಡಿ

Shimoga Nanjappa Hospital

bike theft reference image

ನಿಮ್ಮೂರ ಸುದ್ದಿ ಕೆಲವೇ ನಿಮಿಷದಲ್ಲಿ ಸಾವಿರ ಸಾವಿರ ಜನರನ್ನು ತಲುಪುತ್ತೆ!

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ನಮಗೆ ಕಳುಹಿಸಬಹುದು. ನಮ್ಮ ವಾಟ್ಸಪ್‌ ನಂಬರ್ 7411700200.

ನಮ್ಮ ಗ್ರೂಪ್‌ ಸೇರಿಲು ಇಲ್ಲಿ ಕ್ಲಿಕ್‌ ಮಾಡಿ

Leave a Comment