ಶಿವಮೊಗ್ಗದ ಬಾರ್ ಮುಂದೆ ಕಳುವಾಗಿದ್ದು ಒಂದು ಬೈಕ್, ತನಿಖೆ ವೇಳೆ ಸಿಕ್ತು 5 ಬೈಕ್, ಒಬ್ಬ ಕಳ್ಳ ಅರೆಸ್ಟ್

SHIVAMOGGA LIVE NEWS | BIKE THEFT | 13 ಏಪ್ರಿಲ್ 2022

ಬಾರ್ ಮುಂದೆ ನಿಲ್ಲಿಸಿದ್ದ ಬೈಕ್ ಕಳ್ಳತನ ಪ್ರಕರಣ ತನಿಖೆ ನಡೆಸುತ್ತಿದ್ದ ಪೊಲೀಸರಿಗೆ ಐದು ಬೈಕ್ ಸಹಿತ ಒಬ್ಬ ಕಳ್ಳ ಸಿಕ್ಕಿಬಿದ್ದಿದ್ದಾನೆ.

ಹೊಳೆಹೊನ್ನೂರಿನ ಕಲ್ಲಿಹಾಳ್ ಸರ್ಕಲ್ ಬಳಿಯ ಶಫೀವುಲ್ಲಾ ಅಲಿಯಾಸ್ ರೋಹಿತ್ (26) ಬಂಧಿತ. ಈತನಿಂದ ಐದು ಬೈಕುಗಳನ್ನು ವಶಕ್ಕೆ ಪಡೆಯಲಾಗಿದೆ.

ಏನಿದು ಪ್ರಕರಣ?

ಮಾರ್ಚ್ 8ರ ಮದ್ಯಾಹ್ನ ದಿನೇಶ್ ಎಂಬುವವರು ಶಂಕರಮಠ ರಸ್ತೆಯ ಬಾರ್ ಒಂದರ ಮುಂದೆ ಬೈಕ್ ನಿಲ್ಲಿಸಿ ಸಮೀಪದ  ಬೇಕರಿಗೆ ತೆರಳಿದ್ದಾರೆ. ಕೆಲವೇ ಹೊತ್ತಿನಲ್ಲಿ ಹಿಂತಿರುಗಿದ್ದಾರೆ. ಅಷ್ಟರಲ್ಲಿ ಅವರ ಬೈಕ್ ನಾಪತ್ತೆಯಾಗಿತ್ತು. ಎಲ್ಲೆಡೆ ಹುಡುಕಿದ ಬಳಿಕ ಕೋಟೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. (BIKE THEFT)

ಒಬ್ಬ ಕಳ್ಳ, ಐದು ಬೈಕ್

ಪ್ರಕರಣದ ತನಿಖೆ ನಡೆಸಿದ ಪೊಲೀಸರಿಗೆ ಹೊಳೆಹೊನ್ನೂರು ಕಲ್ಲಿಹಾಳ್ ಸರ್ಕಲ್’ನ ಶಫೀವುಲ್ಲಾ ಅಲಿಯಾಸ್ ರೋಹಿತ್ (26) ಎಂಬಾತ ಸಿಕ್ಕಿಬಿದ್ದಿದ್ದಾನೆ. ಈತನಿಂದ ಐದು ಬೈಕ್ ವಶಕ್ಕೆ ಪಡೆಯಲಾಗಿದೆ. ಕೋಟೆ ಠಾಣೆಯ ನಾಲ್ಕು ಪ್ರಕರಣ, ದಾವಣಗೆರೆಯ ಕೆಟಿಜೆ ನಗರ ಠಾಣೆಯ ಒಂದು ಬೈಕ್ ಕಳವು ಪ್ರಕರಣ ಭೇದಿಸಿದಂತಾಗಿದೆ.

Kote Police Station

Shimoga Nanjappa Hospital

ಇದನ್ನೂ ಓದಿ | ಇವತ್ತಿನ ಎಲ್ಲಾ ಸುದ್ದಿಗಳನ್ನು ಓದಲು ಕ್ಲಿಕ್ ಮಾಡಿ

ಈ ಮೇಲ್ – shivamoggalive@gmail.com

WhatsApp Number – 7411700200

Kote Police station building

ನಿಮ್ಮೂರ ಸುದ್ದಿ ಕೆಲವೇ ನಿಮಿಷದಲ್ಲಿ ಸಾವಿರ ಸಾವಿರ ಜನರನ್ನು ತಲುಪುತ್ತೆ!

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ನಮಗೆ ಕಳುಹಿಸಬಹುದು. ನಮ್ಮ ವಾಟ್ಸಪ್‌ ನಂಬರ್ 7411700200.

ನಮ್ಮ ಗ್ರೂಪ್‌ ಸೇರಿಲು ಇಲ್ಲಿ ಕ್ಲಿಕ್‌ ಮಾಡಿ

Leave a Comment