ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 19 APRIL 2023
SHIMOGA : ನಾಮಪತ್ರ ಸಲ್ಲಿಸಲು ಇನ್ನೆರಡೆ ದಿನ ಬಾಕಿ. ಆದರೆ ಶಿವಮೊಗ್ಗ ಕ್ಷೇತ್ರಕ್ಕೆ ಬಿಜೆಪಿ ಅಭ್ಯರ್ಥಿ ಪ್ರಕಟಿಸದಿರುವುದು ಟ್ರೋಲ್‍ಗೆ (trolled) ಒಳಗಾಗಿದೆ. ನಾನಾ ಬಗೆಯ ಟ್ರೋಲ್‍ಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಬಿಜೆಪಿ ಮುಖಂಡರನ್ನು ಮುಜುಗರಕ್ಕೀಡು ಮಾಡಿದೆ.
ಮತ್ತಷ್ಟು ಸುದ್ದಿ ಕೆಳಗಿದೆ ಸುಲಭ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ ಮೊಬೈಲ್ ನಂಬರ್ : 9972194422
ಸಾಲು ಸಾಲು ಟ್ರೋಲ್‍ಗಳು
ಹಾಸ್ಯ ನಟ ಸಾಧು ಕೋಕಿಲಾ ಅವರ ‘ಬರ್ತಾ ಇದೆ.. ಬರ್ತಾ ಇದೆ.. ಬರ್ತಾ ಇದೆ..’ ಕಾಮಿಡಿಯನ್ನು ಬಿಜೆಪಿ ಟಿಕೆಟ್ ವಿಚಾರಕ್ಕೆ ಬಳಸಿಕೊಂಡು ಟ್ರೋಲ್ (trolled) ಮಾಡಲಾಗುತ್ತಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವಾಟ್ಸಪ್ ಗ್ರೂಪುಗಳು, ಸ್ಟೇಟಸ್‍ನಲ್ಲಿಯು ರಾರಾಜಿಸುತ್ತಿದೆ.
» ವಾಟ್ಸಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ |
» ಫೇಸ್ಬುಕ್ ಮೆಸೆಂಜರ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ |
ಇನ್ನು, ‘ಪಕ್ಷನಿಷ್ಠೆಯ ಕಾರಣಕ್ಕೆ ಈಶ್ವರಪ್ಪ ಅವರಿಗೆ ಮತ್ತೆ ಟಿಕಟ್ ಕೊಡುತ್ತಾರಂತೆ’, ‘ಇಡೀ ಶಿವಮೊಗ್ಗದಲ್ಲಿ ಎಲ್ಲಾ ಕಡೆ ಕೇಳಿ ಬರುತ್ತಿರುವ ಪ್ರಶ್ನೆ ಒಂದೇ, ಟಿಕೆಟ್ ಯಾರಿಗೆ?’, ‘ನಾಮಪತ್ರ ಸಲ್ಲಿಸಲು ಉಳಿದಿರೋದು ಎರಡೆ ದಿನ. ಹಾಗಾಗಿ ಅಫಿಡವಿಟ್ ಮಾಡಿಸಲಾಗದೆ ಬಿಜೆಪಿ ಅಭ್ಯರ್ಥಿಯನ್ನೇ ಹಾಕುತ್ತಿಲ್ಲ’, ‘ಕಾಂಗ್ರೆಸ್ ಜೊತೆಗೆ ಬಿಜೆಪಿ ಒಳ ಒಪ್ಪಂದ ಮಾಡಿಕೊಂಡಿದೆಯಂತೆ’ ಎಂದೆಲ್ಲ ಟ್ರೋಲ್ ಆಗುತ್ತಿದೆ.
ಲೇವಡಿ ಮಾಡುತ್ತಿದ್ದರು ಈಶ್ವರಪ್ಪ
ಮುಂಚೆ ಉಳಿದೆಲ್ಲ ಪಕ್ಷಗಳಿಗಿಂತಲು ಮೊದಲು ಬಿಜೆಪಿ ತನ್ನ ಅಭ್ಯರ್ಥಿಗಳನ್ನು ಪ್ರಕಟಿಸುತ್ತಿತ್ತು. ಆಗೆಲ್ಲ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಅವರು ಉಳಿದ ಪಕ್ಷಗಳನ್ನು ಲೇವಡಿ ಮಾಡುತ್ತಿದ್ದರು. ಅಭ್ಯರ್ಥಿಗಳನ್ನು ಪ್ರಕಟಿಸಲಾಗದಿದ್ದವರು ಇನ್ನು ಚುನಾವಣೆಯನ್ನು ಗೆಲ್ಲುತ್ತಾರೆಯೇ ಎಂದು ಟೀಕಿಸುತ್ತಿದ್ದರು. ಆದರೆ ಈ ಬಾರಿ ಅವರದ್ದೇ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಹೆಸರು ಪ್ರಕಟಿಸಲು ವಿಳಂಬವಾಗಿದೆ. ನಾಮಪತ್ರ ಸಲ್ಲಿಸಲು ಇನ್ನೆರಡೆ ದಿನ ಬಾಕಿ ಇದ್ದಾಗಲೂ ಅಭ್ಯರ್ಥಿ ಯಾರು ಅನ್ನುವದು ಕಾರ್ಯಕರ್ತರಿಗೇ ಗೊಂದಲವಾಗಿದೆ.
ಸಂಭಾವ್ಯರ ಪಟ್ಟಿ ಬೆಳೆಯುತ್ತಲೇ ಇದೆ
ಬಿಜೆಪಿಯಲ್ಲಿ ಸಂಭಾವ್ಯವರ ಪಟ್ಟಿ ದಿನೇ ದಿನೆ ಬೆಳೆಯುತ್ತಲೆ ಇದೆ. ಈಶ್ವರಪ್ಪ ಪುತ್ರ ಕೆ.ಈ.ಕಾಂತೇಶ್, ಸೂಡಾ ಮಾಜಿ ಅಧ್ಯಕ್ಷ ಎಸ್.ಎಸ್.ಜ್ಯೋತಿ ಪ್ರಕಾಶ್, ಮಕ್ಕಳ ತಜ್ಞ ಡಾ.ಧನಂಜಯ ಸರ್ಜಿ, ಬಿಜೆಪಿ ಮುಖಂಡ ಎಸ್.ದತ್ತಾತ್ರಿ, ಬಿಜೆಪಿ ಯುವ ಮೋರ್ಚಾ ಜಿಲ್ಲಾಧ್ಯಕ್ಷ ಹರಿಕೃಷ್ಣ, ದಂತ ವೈದ್ಯ ಡಾ.ರವಿಕಿರಣ್, ಕಾರ್ಪೊರೇಟರ್ ಎಸ್.ಎನ್.ಚನ್ನಬಸಪ್ಪ ಸೇರಿದಂತೆ ಹಲವು ಹೆಸರುಗಳು ಕೇಳಿ ಬರುತ್ತಿದೆ. ಈಶ್ವರಪ್ಪ ಅವರಿಗೇ ಪುನಃ ಟಿಕೆಟ್ ಘೋಷಣೆಯಾಗಲಿದೆ ಎಂದು ಹೇಳಲಾಗುತ್ತಿದೆ. ಹೀಗೆ ಸಂಭಾವ್ಯರ ಪಟ್ಟಿ ದೊಡ್ಡದಾಗುತ್ತಲೆ ಇದೆ.
ನಾಮಪತ್ರ ಸಲ್ಲಿಸುವ ದಿನಾಂಕ ಪ್ರಕಟಿಸಿದ್ದರು..!
ಪಾಲಿಕೆ ಸದಸ್ಯ ಎಸ್.ಎನ್.ಚನ್ನಬಸಪ್ಪ ಅವರು ಬಿಜೆಪಿ ಅಭ್ಯರ್ಥಿ ಎಂಬ ಪೋಸ್ಟರ್ ವೈರಲ್ ಆಗಿತ್ತು. ಏ.18ರಂದು ಚನ್ನಬಸಪ್ಪ ಅವರು ನಾಮಪತ್ರ ಸಲ್ಲಿಸಲಿದ್ದಾರೆ. ಬಿಜೆಪಿ ಕಾರ್ಯಕರ್ತರು ದೊಡ್ಡ ಸಂಖ್ಯೆಯಲ್ಲಿ ಸೇರಬೇಕು ಎಂಬ ಸಂದೇಶಗಳು ಹರಿದಾಡಿದವು. ಕೊನೆಗೆ ಇದು ಸುಳ್ಳು ಸಂದೇಶ ಎಂದು ಬಿಜೆಪಿ ಮುಖಂಡರು ಸ್ಪಷ್ಟನೆ ನೀಡಬೇಕಾದ ಅನಿವಾರ್ಯತೆ ಎದುರಾಯಿತು.
ಒಟ್ಟಿನಲ್ಲಿ ಶಿವಮೊಗ್ಗ ಬಿಜೆಪಿ ಅಭ್ಯರ್ಥಿ ಕುರಿತ ವಿಷಯ ಟ್ರೋಲಿಗರಿಗೆ ಆಹಾರವಾಗಿದೆ. ದಿನಕ್ಕೊಂದು ಹೊಸ ಬಗೆಯ ಟ್ರೋಲ್‍ಗಳು ಸಾಮಾಜಿಕ ಜಾಲತಾಣದಲ್ಲಿ ಕಾಣಿಸಿಕೊಳ್ಳುವಂತಾಗಿದೆ. ಜನರಿಗೆ ಮನರಂಜನೆಯಾಗಿದೆ.