SHIVAMOGGA LIVE NEWS | 15 FEBRURARY 2023
SHIMOGA : ಹುಣಸೋಡು ಸ್ಪೋಟದ ಸಂತ್ರಸ್ತರಿಗೆ ಪರಿಹಾರ ಕೊಡಿಸುವಲ್ಲಿ ಸ್ಥಳೀಯ ಶಾಸಕರು, ಸಂಸದರು ವಿಫಲವಾಗಿದ್ದಾರೆ. ಶಿವಮೊಗ್ಗಕ್ಕೆ ಆಗಮಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿ (Narendra Modi)ಅವರಿಗೆ ಮನವಿ ಸಲ್ಲಿಸಲಾಗುತ್ತದೆ. ಸ್ಪಂದಿಸದೆ ಇದ್ದರೆ ಪ್ರಧಾನಿ ಮೋದಿ ಎದುರಲ್ಲಿ ರಾಜ್ಯ ಸರ್ಕಾರದ ವಿರುದ್ಧ ಕಪ್ಪು ಬಾವುಟ (Black Flag) ಪ್ರದರ್ಶನ ಮಾಡಲಾಗುತ್ತದೆ ಎಂದು ನವ ಕರ್ನಾಟಕ ನಿರ್ಮಾಣ ವೇದಿಕೆ ರಾಜ್ಯಾಧ್ಯಕ್ಷ ಗೋ. ರಮೇಶ್ ಗೌಡ ಎಚ್ಚರಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಗೋ. ರಮೇಶ್ ಗೌಡ, ಹುಣಸೋಡು ಸ್ಪೋಟ ಸಂಭವಿಸಿ 2 ವರ್ಷವಾಗಿದೆ. ಸ್ಪೋಟದಿಂದ ಹಲವು ಮನೆಗಳು, ಎಲೆಕ್ಟ್ರಾನಿಕ್ ಉಪಕರಣಗಳು ಸೇರಿದಂತೆ ಹಲವು ಬಗೆಯಲ್ಲಿ ಹಾನಿ ಉಂಟಾಗಿದೆ. ನಷ್ಟ ಭರಿಸುವಂತೆ 850 ಮಂದಿ ಅರ್ಜಿ ಸಲ್ಲಿಸಿದ್ದಾರೆ. ಆದರೆ ಈತನಕ ಯಾರಿಗೂ ಪರಿಹಾರ ಸಿಕ್ಕಲ್ಲ ಎಂದು ಆರೋಪಿಸಿದರು.
ಸಂತ್ರಸ್ತರಿಗೆ ಪರಿಹಾರ ಕೊಡುವಂತೆ ಆಗ್ರಹಿಸಿ ಹಲವು ಭಾರಿ ಪ್ರತಿಭಟನೆ ನೆಡಸಿದರು ಪ್ರಯೋಜನವಾಗಿಲ್ಲ. ಈಚೆಗೆ ಮುಖ್ಯಮಂತ್ರಿ ಅವರು ಶಿವಮೊಗ್ಗಕ್ಕೆ ಬಂದಾಗ ಅವರಿಗೆ ಮನವಿ ಸಲ್ಲಿಸಲು ತೆರಳಿದ್ದಾಗ ಸಂತ್ರಸ್ತರ ಕಡೆಗೆ ತಿರುಗಿಯೂ ನೋಡಲಿಲ್ಲ. ಈಗ ವಿಮಾನ ನಿಲ್ದಾಣ ಉದ್ಘಾಟನೆಗೆ ಪ್ರಧಾನಿ (Prime Minister) ನರೇಂದ್ರ ಮೋದಿ ಅವರು ಆಗಮಿಸುತ್ತಿದ್ದಾರೆ. ಅವರಿಗೆ ಮನವಿ ಸಲ್ಲಿಸಲಾಗುತ್ತದೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಸಂತೋಷ್, ನಿಂಗರಾಜ್, ದೇವೇಂದ್ರಪ್ಪ, ಕುಮಾರ್, ಆಸೀಫ್, ಫಯಾಜ್, ನಾಗೇಶ್, ಪುಷ್ಪಾ ಇದ್ದರು.
ಇದನ್ನೂ ಓದಿ – ಹೃದಯಾಘಾತ, ಶಿವಮೊಗ್ಗದಲ್ಲಿ ಕಾಲೇಜು ಪ್ರಿನ್ಸಿಪಾಲ್ ನಿಧನ