ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 10 MAY 2023
ಮತ್ತಷ್ಟು ಸುದ್ದಿ ಕೆಳಗಿದೆ ಸುಲಭ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ ಮೊಬೈಲ್ ನಂಬರ್ : 9972194422
SHIMOGA : ಚುನಾವಣಾ ಕಾರ್ತವ್ಯಕ್ಕೆ ಕೆಎಸ್ಆರ್ಟಿಸಿ ಬಸ್ಸುಗಳನ್ನು (Bus) ನಿಯೋಜನೆ ಮಾಡಿರುವುದರಿಂದ ಪ್ರಯಾಣಿಕರು ಪರದಾಡುವಂತಾಯಿತು. ಇನ್ನು, ಬಿಎಂಟಿಸಿ ಬಸ್ಸುಗಳು ಶಿವಮೊಗ್ಗದಲ್ಲಿ ಸಂಚರಿಸುತ್ತಿದ್ದು, ಚಾಲಕರು ಮಾರ್ಗ ಗೊತ್ತಾಗದೆ ಗೊಂದಲಕ್ಕೀಡಾಗಿದ್ದಾರೆ.
» ವಾಟ್ಸಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ |
» ಫೇಸ್ಬುಕ್ ಮೆಸೆಂಜರ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ |
ವಿಧಾನಸಭೆ ಚುನಾವಣೆಗೆ ಶಿವಮೊಗ್ಗ ವಿಭಾಗದ ಕೆಎಸ್ಆರ್ಟಿಸಿ ಬಸ್ಸುಗಳನ್ನು ನಿಯೋಜನೆ ಮಾಡಲಾಗಿದೆ. ಇದರಿಂದ ಕೆಎಸ್ಆರ್ಟಿಸಿ ಬಸ್ ನಿಲ್ದಾಣದಲ್ಲಿ ಬಸ್ಗಳಿಲ್ಲದೆ ಪ್ರಯಾಣಿಕರು ಪರದಾಡುವಂತಾಗಿದೆ.
WATCH VIDEO
ಹೆಚ್ಚಿನ ಮಾಹಿತಿಗೆ ಇಲ್ಲಿ CLICK ಮಾಡಿ
ಕಾದು ಕಾದು ಸುಸ್ತಾದ ಪ್ರಯಾಣಿಕರು
ಬೆಂಗಳೂರು, ದಾವಣಗೆರೆ ಸೇರಿದಂತೆ ವಿವಿಧೆಡೆಗೆ ತೆರಳಲು ಹೆಚ್ಚಿನ ಪ್ರಯಾಣಿಕರು ನಿಲ್ದಾಣಕ್ಕೆ ಆಗಮಿಸಿದ್ದಾರೆ. ಆದರೆ ಬಸ್ಸುಗಳು ಸಿಗದೆ ಗಂಟೆಗಟ್ಟಲೆ ಕಾದು ಹೈರಾಣಾಗಿದ್ದಾರೆ. ಗಂಟೆಗೊಂದು ಬಸ್ ಬರುತ್ತಿರುವುದರಿಂದ ಎಲ್ಲಾ ಸೀಟುಗಳು ಕ್ಷಣಮಾತ್ರದಲ್ಲಿ ಭರ್ತಿಯಾಗುತ್ತಿವೆ.
ಇದನ್ನೂ ಓದಿ – ಶಿವಮೊಗ್ಗ ಜಿಲ್ಲೆಯಲ್ಲಿ ಬೆಳಗ್ಗೆಯಿಂದಲೇ ಮತದಾನ ಬಿರುಸು, ಯಾವ್ಯಾವ ಕ್ಷೇತ್ರದಲ್ಲಿ ಎಷ್ಟಾಗಿದೆ ವೋಟಿಂಗ್?
ʼದಾವಣಗೆರೆಯಲ್ಲಿ ಮತ ಚಲಾಯಿಸಲು ಹೋಗಬೇಕಿದೆ. ಆದರೆ ಎಷ್ಟೊತ್ತಿಗೋ ಒಂದೊಂದು ಬಸ್ (Bus) ಬರುತ್ತೆ. ಮಕ್ಕಳನ್ನು ಕಂಕುಳಲ್ಲಿ ಇಟ್ಟುಕೊಂಡು ಬಸ್ ಸೀಟ್ ಹಿಡಿಯೋದೇ ಕಷ್ಟವಾಗಿದೆʼ ಅನ್ನುತ್ತಾರೆ ಗೃಹಿಣಿ ಸವಿತಾ.
ಬೆಂಗಳೂರಿಗೆ ಬಿಎಂಟಿಸಿ ಬಸ್
ಇನ್ನು, ಬೆಂಗಳೂರಿನಿಂದ ಶಿವಮೊಗ್ಗ ರೂಟ್ನಲ್ಲಿ ಕೆಎಸ್ಅರ್ಟಿಸಿ ಬಸ್ಗಳ ಕೊರತೆ ಅಗಿದ್ದರಿಂದ ಬಿಎಂಟಿಸಿ ಬಸ್ಸುಗಳನ್ನು ನಿಯೋಜಿಸಲಾಗಿತ್ತು. ಇದೆ ಬಸ್ಸುಗಳು ಈಗ ಶಿವಮೊಗ್ಗ ಬೆಂಗಳೂರು ಮಾರ್ಗದಲ್ಲಿ ಸಂಚರಿಸುತ್ತಿವೆ. ಪ್ರಯಾಣಿಕರ ಸಂಖ್ಯೆ ಅಧಿಕವಾಗಿರುವುದರಿಂದ ಬಸ್ಸುಗಳು ಬಂದ ಕ್ಷಣ ಹೊತ್ತಲ್ಲೇ ಸೀಟುಗಳು ಭರ್ತಿಯಾಗುತ್ತಿವೆ.
ಟಿಕೆಟ್ ವಿಚಾರದಲ್ಲಿ ಗೊಂದಲ
ಇತ್ತ ಬಿಎಂಟಿಸಿ ಚಾಲಕರಿಗೆ ಶಿವಮೊಗ್ಗ – ಬೆಂಗಳೂರು ಮಾರ್ಗದ ಪರಿಚಯವಿಲ್ಲ. ಹಾಗಾಗಿ ಅಲ್ಲಲ್ಲಿ ಮಾರ್ಗ ಕೇಳಿಕೊಂಡು ತೆರಳುತ್ತಿದ್ದಾರೆ. ಇನ್ನು, ಬಿಎಂಟಿಸಿ ಬಸ್ಸುಗಳಲ್ಲಿ ವಿತರಣೆ ಮಾಡುತ್ತಿರುವ ಟಿಕೆಟ್ ಗೊಂದಲ ಮತ್ತು ಕಾನೂನು ಬಾಹಿರವಾಗಿದೆ. ಶಿವಮೊಗ್ಗ ಬೆಂಗಳೂರು ಅಥವಾ ಬೆಂಗಳೂರು ಶಿವಮೊಗ್ಗ ಎಂದು ಟಿಕೆಟ್ ವಿತರಣೆ ಮಾಡುವ ಬದಲು ಬೆಂಗಳೂರಿನ ರೂಟ್ನ ಟಿಕೆಟ್ಗಳನ್ನೇ ವಿತರಿಸಲಾಗುತ್ತಿದೆ.
ʼಬೆಂಗಳೂರು ಮಾರ್ಗದ ಬಸ್ಸುಗಳಲ್ಲಿ ಸಿಟಿ ಮಾರ್ಕೆಟ್ನ ಟಿಕೆಟ್ ಕೊಡಲಾಗುತ್ತಿದೆ. ಒಂದು ವೇಳೆ ಅವಘಡ ಸಂಭವಿಸಿದರೆ, ಈ ಟಿಕೆಟ್ ಬಳಸಿ ಇನ್ಷುರೆನ್ಸ್ ಪಡೆಯಲು ಆಗುವುದಿಲ್ಲ. ಬಸ್ಸುಗಳು ಇಲ್ಲದಿದ್ದರೆ ಕಡೇ ಪಕ್ಷ ಟಿಕೆಟ್ ವಿತರಣೆಗೆ ಸೂಕ್ತ ವ್ಯವಸ್ಥೆ ಕೈಗೊಳ್ಳಬೇಕಿತ್ತುʼ ಅನ್ನುತ್ತಾರೆ ಬಸ್ಸಿನಲ್ಲಿ ತೆರಳುತ್ತಿರುವ ವಕೀಲ ಶಿವರಾಂ.