ಶಿವಮೊಗ್ಗದಲ್ಲಿ ಮದುವೆ ಮಂಟಪದಿಂದ ನೇರ ಪದವಿ ಪರೀಕ್ಷೆಗೆ ಹಾಜರಾದ ವಧು

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

SHIVAMOGGA LIVE NEWS | 11 SEPTEMBER 2023

SHIMOGA : ಮದುವೆ ಮುಗಿದ ಮರು ಕ್ಷಣವೆ ವಧು (Bride) ವರನ ಜೊತೆಗೆ ಪರೀಕ್ಷಾ ಕೇಂದ್ರಕ್ಕೆ (Examination) ತೆರಳಿ ಪದವಿ ಪರೀಕ್ಷೆ ಬರೆದು ಗಮನ ಸೆಳೆದಿದ್ದಾಳೆ. ಶಿವಮೊಗ್ಗದ ಭರ್ಮಪ್ಪ ನಗರದ ಸತ್ಯವತಿ ಪರೀಕ್ಷೆ ಬರೆದ ನವ ವಧು.

ಚೆನ್ನೈ ಮೂಲಕ ಫ್ರಾನ್ಸಿಸ್‌ ಅವರ ಜೊತೆಗೆ ಸತ್ಯವತಿ ಭಾನುವಾರ ಶಿವಮೊಗ್ಗದಲ್ಲಿ ವಿವಾಹವಾದರು (Marriage). ಮದುವೆ ಶಾಸ್ತ್ರ ಮುಗಿಯುತ್ತಿದ್ದಂತೆ ಮರುಕ್ಷಣವೆ ವರನ ಜೊತೆಗೆ ಕಮಲಾ ನೆಹರು ಕಾಲೇಜಿನಲ್ಲಿರುವ ಪರೀಕ್ಷಾ ಕೇಂದ್ರಕ್ಕೆ ಆಗಮಿಸಿದರು. ಅಂತಿಮ ವರ್ಷದ ಬಿ.ಎ ಪದವಿ ಪರೀಕ್ಷೆ ಬರೆದರು.

ಹಾರ, ಆಭರಣ, ಅಲಂಕಾರ

ಬೆಳಗ್ಗೆ 8 ಗಂಟೆಗೆ ಮದುವೆ ಶಾಸ್ತ್ರ ನಡೆಯಿತು. ಬೆಳಗ್ಗೆ 9.30ಕ್ಕೆ ಪದವಿ ಪರೀಕ್ಷೆ ಇತ್ತು. ಈ ಹಿನ್ನೆಲೆ ಮದುವೆ ಅಲಂಕಾರದಲ್ಲಿಯೇ ಸತ್ಯವತಿ ಕಾಲೇಜಿಗೆ ಹಾಜರಾದರು. ಹಾರ, ಆಭರಣ, ಅಲಂಕಾರದೊಂದಿಗೆ ವಧು ಪರೀಕ್ಷಾ ಕೇಂದ್ರಕ್ಕೆ ಹಾಜರಾಗಿದ್ದು ಎಲ್ಲರ ಗಮನ ಸೆಳೆಯಿತು.

ಇದನ್ನೂ ಓದಿ – ಶಿವಮೊಗ್ಗದ ಶಿವಪ್ಪನಾಯಕ ಪ್ರತಿಮೆಯಿಂದ ಗೋಪಿ ಸರ್ಕಲ್‌ವರೆಗೆ ಭಾರತ್‌ ಜೋಡೋ ಯಾತ್ರೆ

ಇನ್‌ಸ್ಟಾಗ್ರಾಂ ಮೂಲಕ ಆಗಿದ್ದ ಪರಿಚಯ ಪ್ರೀತಿಗೆ ತಿರುಗಿತ್ತು. ಚೆನ್ನೈನ ಫ್ರಾನ್ಸಿಸ್‌ ಮತ್ತು ಶಿವಮೊಗ್ಗದ ಸತ್ಯವತಿ ಹಿರಿಯರನ್ನು ಒಪ್ಪಿಸಿ ಇಬ್ಬರು ಭಾನುವಾರ ಸರಳವಾಗಿ ವಿವಾಹವಾದರು.

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment