ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIMOGA NEWS, 23 SEPTEMBER 2024 : ಸ್ಮಾರ್ಟ್ ಸಿಟಿ ಯೋಜನೆ ಅವಾಂತರ ಒಂದೆರಡಲ್ಲ. ಈ ಯೋಜನೆ ಅಡಿ ರಸ್ತೆ ಮಧ್ಯೆ ಅಳವಡಿಸಲಾಗಿರುವ ಕೇಬಲ್ ಡೆಕ್ಗಳ ಸ್ಲ್ಯಾಬ್ಗಳು (Slab) ಪುನಃ ವಾಹನ ಸವಾರರಲ್ಲಿ ಆತಂಕ ಮೂಡಿಸುತ್ತಿವೆ.
ಮತ್ತಷ್ಟು ಸುದ್ದಿ ಕೆಳಗಿದೆ ಸುಲಭ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ ಮೊಬೈಲ್ ನಂಬರ್ : 9972194422
ಶಿವಮೊಗ್ಗದ ಬಾಲರಾಜ ಅರಸ್ ರಸ್ತೆಯಲ್ಲಿ ಸ್ಮಾರ್ಟ್ ಸಿಟಿ ಯೋಜನೆ ಅಡಿ ಕೇಬಲ್ ಡೆಕ್ ಅಳವಡಿಸಲಾಗಿದೆ. ಇದಕ್ಕೆ ನಡುರಸ್ತೆಯಲ್ಲಿ ಸ್ಲ್ಯಾಬ್ಗಳನ್ನು ಹಾಕಲಾಗಿದೆ. ಆರು ತಿಂಗಳಿಗೊಮ್ಮೆ, ಮೂರು ತಿಂಗಳಿಗೊಮ್ಮೆ ಈ ಸ್ಲ್ಯಾಬ್ಗಳು ಮುರಿದು ಹೋಗುತ್ತಿವೆ.
ಮತ್ತೆ ಮುರಿದಿವೆ ಸ್ಲ್ಯಾಬ್ಗಳು
ಕೆಇಬಿ ಸರ್ಕಲ್ ಕಡೆಯಿಂದ ಮಹಾವೀರ ಸರ್ಕಲ್ ಕಡೆಗೆ ತೆರಳುವ ಕಡೆ ಎರಡು ಬದಿಯ ಸ್ಲ್ಯಾಬ್ಗಳು ಮುರಿದು ಬೀಳುವ ಹಂತದಲ್ಲಿವೆ. ಸ್ವಲ್ಪ ಯಾಮಾರಿದರೆ ಇಲ್ಲಿ ಅಪಘಾತ ನಿಶ್ಚಿತ.
ಈ ಮಾರ್ಗದಲ್ಲಿ ರೈಸ್ ಬೌಲ್ ಹೊಟೇಲ್ ಎದುರು ಸ್ಲ್ಯಾಬ್ ತುಂಡಾಗಿದೆ. ಇದನ್ನು ರಿಪೇರಿ ಮಾಡುವ ಬದಲು, ಬ್ಯಾರಿಕೇಡ್ಗಳನ್ನು ಅಳವಡಿಸಿ ಅಧಿಕಾರಿಗಳು ಕೈತೊಳೆದುಕೊಂಡಿದ್ದಾರೆ. ಇನ್ನು ಟ್ಯಾಂಕ್ ಮೊಹಲ್ಲಾ ರಸ್ತೆಯ ತಿರುವಿನಲ್ಲಿರುವ ಸ್ಲ್ಯಾಬ್ ಕೂಡ ಹಾನಿಯಾಗಿದೆ. ಹೆಚ್ಚು ವಾಹನ ಮತ್ತು ಜನ ಓಡಾಡುವ ರಸ್ತೆಯಲ್ಲಿ ಈ ಸ್ಲ್ಯಾಬ್ಗಳಿಂದ ತೀವ್ರ ಸಮಸ್ಯೆ ಉಂಟಾಗಿದೆ.
ಈ ಹಿಂದೆ ಬಾಲರಾಜ ಅರಸ್ ರಸ್ತೆಯಲ್ಲಿ ಸ್ಲ್ಯಾಬ್ಗಳು ಹಾನಿಯಾಗಿ ರಸ್ತೆಯ ಎರಡು ಬದಿಯಲ್ಲಿ ವಾಹನ ಸಂಚಾರಕ್ಕೆ ಅಡ್ಡಿಯಾಗಿತ್ತು. ಈ ಕುರಿತು ಶಿವಮೊಗ್ಗ ಲೈವ್.ಕಾಂ ನಿರಂತರ ವರದಿ ಪ್ರಕಟಿಸಿದ ಬೆನ್ನಿಗೆ ರಿಪೇರಿ ಕಾರ್ಯ ನಡೆಸಲಾಗಿತ್ತು. ಆದರೆ ಈಗ ಪುನಃ ಸಮಸ್ಯೆ ತಲೆ ಎತ್ತಿದೆ.
ಇದನ್ನೂ ಓದಿ » ಹಿಂದೂ ಮಹಾಸಭಾ ಮೆರವಣಿಗೆ, ಮಫ್ತಿಯಲ್ಲಿದ್ದ ಮಹಿಳಾ ಪೊಲೀಸ್ ಮಾಂಗಲ್ಯ ಸರ ನಾಪತ್ತೆ