ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 18 MARCH 2023
SHIMOGA : ಖಾಸಗಿ ಬಸ್ಸಿನಲ್ಲಿ ಕೋಟ್ಯಂತರ ರುಪಾಯಿ ಹಣ ಸಾಗಿಸಲಾಗುತ್ತಿದೆ ಎಂದು ಮಾಹಿತಿ ಹಿನ್ನಲೆ ಪೊಲೀಸರು ದಿಢೀರ್ ತಪಾಸಣೆ (Checking) ನಡೆಸಿದರು. ವೀರಭದ್ರೇಶ್ವರ ಟಾಕೀಸ್ ಬಳಿ ಇರುವ ಖಾಸಗಿ ಬಸ್ ಕಚೇರಿ ಬಳಿ ಬಸ್ಸು, ಪ್ರಯಾಣಿಕರು ಮತ್ತು ಲಗೇಜ್ ತಪಾಸಣೆ ನಡೆಸಿದರು.
ಮತ್ತಷ್ಟು ಸುದ್ದಿ ಕೆಳಗಿದೆ ಸುಲಭ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ ಮೊಬೈಲ್ ನಂಬರ್ : 9972194422
ಮುಂಬೈನಿಂದ ಬರುತ್ತಿರುವ ಬಟ್ಟೆಗಳ ಬಂಡಲ್ ಜೊತೆಗೆ ಕೋಟ್ಯಂತರ ರುಪಾಯಿ ಹಣವನ್ನು ಅಕ್ರಮವಾಗಿ ಸಾಗಿಸಲಾಗುತ್ತಿದೆ ಎಂದು ಪೊಲೀಸರಿಗೆ ಮಾಹಿತಿ ಲಭ್ಯವಾಗಿತ್ತು. ಈ ಹಿನ್ನೆಲೆ ಪೊಲೀಸರು ದಿಢೀರ್ ತಪಾಸಣೆ ನಡೆಸಿದರು. ಶಿವಮೊಗ್ಗ ಮತ್ತು ಭದ್ರಾವತಿಯ ವಿವಿಧ ಜವಳಿ ಅಂಗಡಿಗಳಿಗೆ ಬಂದಿದ್ದ ಬಟ್ಟೆಗಳ ಲೋಡ್ ಕೆಳಗಿಳಿಸಿ ತಪಾಸಣೆ (Checking) ಮಾಡಿದರು. ಇನ್ನು, ಬಸ್ಸಿನಲ್ಲಿದ್ದ ಪ್ರಯಾಣಿಕರು ಮತ್ತು ಅವರ ಲಗೇಜುಗಳನ್ನು ಕೂಡ ಪರಿಶೀಲನೆ ನಡೆಸಲಾಯಿತು.
» ವಾಟ್ಸಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ |
» ಫೇಸ್ಬುಕ್ ಮೆಸೆಂಜರ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ |
ಇದನ್ನೂ ಓದಿ – ತಾಲೂಕು ಕೇಂದ್ರದಲ್ಲಿ ಜಿಲ್ಲಾ ಕೇಂದ್ರ ಮಾದರಿಯ ಸುಸಜ್ಜಿತ ಬಸ್ ನಿಲ್ದಾಣ, 20 ಬಸ್ಗಳ ಸಂಚಾರ ಶುರು
ದೊಡ್ಡಪೇಟೆ ಠಾಣೆ ಪೊಲೀಸರು ಮಧ್ಯಾಹ್ನ ಮುಂಬೈನಿಂದ ಬಂದ ಬಸ್ಸಿನಲ್ಲಿ ತಪಾಸಣೆ ನಡೆಸಿದರು. ವಿವಿಧ ಮಳಿಗೆಗಳಿಗೆ ಸೇರಿದ ಸುಮಾರು 8 ಲಕ್ಷ ರೂ. ಮೌಲ್ಯದ ಬಟ್ಟೆಯನ್ನು ಬಸ್ಸಿನಲ್ಲಿ ತರಲಾಗಿತ್ತು. ಇವುಗಳನ್ನು ವಾಣಿಜ್ಯ ತೆರಿಗೆ ಸಿಟಿಒ ಅಧಿಕಾರಿ ನಾಗರಾಜ್ ಅವರಿ ಹಸ್ತಾಂತರಿಸಲಾಗಿದೆ ಎಂದು ತಿಳಿದು ಬಂದಿದೆ.