ರಾತ್ರೋರಾತ್ರಿ ಹೊರಗಿಂದ ಉದ್ಯಮಿ ಮನೆ ಬಾಗಿಲಿನ ಚಿಲಕ ಲಾಕ್, ಬೆಳಗ್ಗೆ ಹೊರಬಿತ್ತು ಅಸಲಿ ವಿಚಾರ

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

 SHIVAMOGGA LIVE NEWS 

SHIMOGA | ಉದ್ಯಮಿಯೊಬ್ಬರ (BUSINESS MAN) ಮನೆಯಲ್ಲಿ ಹಣ, ಚಿನ್ನದ ಸರ ಕಳ್ಳತನ ಆಗಿದೆ. ಮನೆಯಲ್ಲಿದ್ದ ವ್ಯಕ್ತಿಯೆ ಕಳ್ಳತನ ಮಾಡಿ, ಮನೆಯ ಬಾಗಿಲಿಗೆ ಹೊರಗಿನಿಂದ ಚಿಲಕ ಹಾಕಿ, ರಾತ್ರೋರಾತ್ರಿ ಪರಾರಿಯಾಗಿದ್ದಾನೆ.

Shimoga Nanjappa Hospital

ಉದ್ಯಮಿ ಶ್ರೇನಿಕ್ ಜೈನ್ ಎಂಬುವವರ ಮನೆಯಲ್ಲಿ ಕಳ್ಳತನವಾಗಿದೆ. ಇವರ ಮನೆಯಲ್ಲಿ ವಾಸವಾಗಿದ್ದ ನಿಮೇಶ್ ಎಂಬುವವನು ಕೃತ್ಯ ಎಸಗಿದ್ದಾನೆ.

ಹೇಗಾಯ್ತು ಘಟನೆ? (BUSINESS MAN)

ಶ್ರೇನಿಕ್ ಜೈನ್ (BUSINESS MAN) ಅವರು ಶಿವಮೊಗ್ಗದಲ್ಲಿ ಎಲೆಕ್ಟ್ರಿಕಲ್ ವಾಹನ ಬಿಡಿಭಾಗ ತಯಾರಿಸುವ ಕಂಪನಿ ನಡೆಸುತ್ತಿದ್ದಾರೆ. ಒಂದು ವರ್ಷದ ಹಿಂದೆ ದೆಹಲಿಗೆ ಹೋಗಿದ್ದಾಗ ನಿಮೇಶ್ ಎಂಬಾತನ ಪರಿಚಯವಾಗಿತ್ತು. ಆತನನ್ನು ತಮ್ಮ ಕಂಪನಿಯಲ್ಲಿ ಏಜೆಂಟ್ ಮಾಡಿ, ಮನೆಯಲ್ಲಿಯೇ ಉಳಿಸಿಕೊಂಡಿದ್ದರು.

ಕ್ಲಿಕ್ ಮಾಡಿ ಇದನ್ನೂ ಓದಿ ರಸ್ತೆ ಪಕ್ಕ ನಿಂತಿದ್ದ ಬೈಕಿಗೆ ಹಿಂಬದಿಯಿಂದ ಮತ್ತೊಂದು ಬೈಕ್ ಡಿಕ್ಕಿ, ಯುವತಿ ಕಾಲಿಗೆ ಗಂಭೀರ ಗಾಯ

ಅ.13ರಂದು ರಾತ್ರಿ 11 ಗಂಟೆಗೆ ಮನೆಯಲ್ಲಿ ಎಲ್ಲರು ಊಟ ಮಾಡಿ ಮಲಗಿದ್ದಾರೆ. ಬೆಳಗ್ಗೆ ಉದ್ಯಮಿ (BUSINESS MAN) ಶ್ರೇನಿಕ್ ಜೈನ್ ಅವರು ಎಚ್ಚರವಾಗಿ ಮನೆಯ ಬಾಗಿಲು ತೆಗೆಯಲು ಬಂದಾಗ, ಹೊರಗಿನಿಂದ ಚಿಲಕ ಹಾಕಲಾಗಿತ್ತು. ನಿಮೇಶ್ ಗಾಗಿ ಹುಡುಕಾಡಿದರೆ ಆತ ಕಾಣಿಸಲಿಲ್ಲ. ಬಳಿಕ ತಮ್ಮ ಸ್ನೇಹಿತರಿಗೆ ಕರೆ ಮಾಡಿ, ತಮ್ಮ ಮನೆಯ ಬಾಗಿಲು ತೆಗೆಸಿಕೊಂಡಿದ್ದಾರೆ.

Shimoga Nanjappa Hospital

ರಾತ್ರೋರಾತ್ರಿ ನಾಪತ್ತೆಯಾದ ಏಜೆಂಟ್

ಊಟ ಮಾಡಿ ಮಲಗುವಾಗ ಇದ್ದ ನಿಮೇಶ್ ನಾಪತ್ತೆಯಾಗಿದ್ದ. ಅನುಮಾನಗೊಂಡ ಉದ್ಯಮಿ, ತಮ್ಮ ಮನೆಯಲ್ಲಿರುವ ವಸ್ತುಗಳ ಪರಿಶೀಲನೆ ನಡೆಸಿದ್ದಾರೆ. ಆಗ 15 ಸಾವಿರ ರೂ. ನಗದು, 80 ಸಾವಿರ ರೂ. ಬೆಲೆ ಬಾಳುವ ಒಂದು ಚಿನ್ನದ ಸರ ನಾಪತ್ತೆಯಾಗಿರುವುದು ಗೊತ್ತಾಗಿದೆ.

ಘಟನೆ ಸಂಬಂಧ ಉದ್ಯಮಿ ಶ್ರೇನಿಕ್ ಜೈನ್ ಅವರು ದೊಡ್ಡಪೇಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

JNNCE College of Engineering

ಕ್ಲಿಕ್ ಮಾಡಿ ಇದನ್ನೂ ಓದಿ ಇನ್ಷುರೆನ್ಸ್ ಕಿರಿಕ್, ಪೆಟ್ರೋಲ್ ಸುರಿದು ಸಾಕ್ಷಿ ಸಿಗದಂತೆ ಸುಟ್ಟು ಹಾಕುವುದಾಗಿ ವ್ಯಕ್ತಿಗೆ ಬೆದರಿಕೆ

ADVERTISEMENT

  • ಆರೋಗ್ಯ ತುರ್ತು ಸಂದರ್ಭದಲ್ಲಿ ಹಣಕಾಸು ಹೊಂದಿಸುವುದು ಸುಲಭವೇನಲ್ಲ. ಒಂದು ವೇಳೆ INSURANCE ಇದ್ದರೆ, ನಿರಮ್ಮಳವಾಗಿರಬಹುದು ಅಲ್ಲವೆ? ಈಗಲೆ INSURANCE ಮಾಡಿಸಿ. ಒಳ್ಳೆಯ INSURANCE PLANSಗಾಗಿ ಕರೆ ಮಾಡಿ – LIC LIFE INSURANCE – ಅನಿಲ್ 9538414151, ಪ್ರಶಾಂತ್ 9972194422
  • ಸುಂದರ ಮನೆ ಕಟ್ಟಬೇಕು, ಸ್ವಂತ ಮನೆಯಲ್ಲಿ ನೆಮ್ಮದಿಯ ಬದುಕು ಸಾಗಿಸಬೇಕು ಅನ್ನವು ಆಸೆ ಯಾರಿಗಿಲ್ಲ? ಇನ್ಯಾಕೆ ತಡ? ಮನೆ ಕಟ್ಟಲು LICಯಿಂದ HOUSING LOAN ಲಭ್ಯವಿದೆ. ಇವತ್ತೇ ಸಂಪರ್ಕಿಸಿ – ಪ್ರಶಾಂತ್ 9972194422

SHIVAMOGGA LIVE WHATSAPP

ನಿಮ್ಮೂರು, ನಿಮ್ಮ ಏರಿಯಾದ ಕಾರ್ಯಕ್ರಮಗಳು, ಸಮಸ್ಯೆಗಳು ಸುದ್ದಿಯಾಗಬೇಕಾ? ನೀವೇ ವರದಿಗಾರರಾಗಿ. ವಿಡಿಯೋ, ಫೋಟೊ ಮಾಡಿ 7411700200 ಮೊಬೈಲ್ ನಂಬರ್’ಗೆ ವಾಟ್ಸಪ್ ಮಾಡಿ. ನೆನಪಿರಲಿ, ಸುದ್ದಿ ಪ್ರಕಟಣೆಗೆ ನಾವು ಹಣ ಪಡೆಯುವುದಿಲ್ಲ.

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment