ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 15 FEBRUARY 2024
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
SHIMOGA : ಮಾಜ ಸಂಸದ ಆಯನೂರು ಮಂಜುನಾಥ್ ವಿರುದ್ಧ ಸಂಸದ ಬಿ.ವೈ.ರಾಘವೇಂದ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಭಿವೃದ್ಧಿ ಮತ್ತು ದೇಶಭಕ್ತಿಯ ವಿಚಾರದಲ್ಲಿ ಮಾತನಾಡುವ ನೈತಿಕತೆ ಆಯನೂರು ಮಂಜುನಾಥ್ ಅವರಿಗೆ ಇಲ್ಲ ಎಂದು ತಿರುಗೇಟು ನೀಡಿದ್ದಾರೆ.
ರಾಘವೇಂದ್ರ ಆರೋಪದ 5 ಪಾಯಿಂಟ್
ನಮ್ಮ ಅಭಿವೃದ್ದಿ ಕಾರ್ಯಗಳನ್ನು ಆಯನೂರು ಮಂಜುನಾಥ್ ಅವರು ಪ್ರಶ್ನೆ ಮಾಡಿದ್ದಾರೆ. ಬಿಜೆಪಿಯಲ್ಲಿದ್ದು ನಾಲ್ಕು ಸದನಗಳ ಸದಸ್ಯರಾಗಿದ್ದವರು ಯಾವ ಅಂಕಿ ಅಂಶಗಳ ಮೇಲೆ ನಮ್ಮನ್ನು ಪ್ರಶ್ನೆ ಮಾಡುತ್ತಿದ್ದಾರೆ. ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಅನ್ಯಾಯವಾಗಿದೆ ಎಂಬುದನ್ನು ಯಾವ ಮಾನದಂಡದ ಮೇಲೆ ಹೇಳುತ್ತಿದ್ದಾರೆ. ಯುಪಿಎ ಸರ್ಕಾರದ ಅವಧಿಯಲ್ಲಿ ರಾಜ್ಯಕ್ಕಾದ ಅಭಿವೃದ್ಧಿ ಕಾರ್ಯಗಳೇನು ಎಂಬುದನ್ನು ಬಹಿರಂಗ ಪಡಿಸಲಿ. ಕೇಂದ್ರ ಸರ್ಕಾರ ರಾಜ್ಯಕ್ಕೆ ಬಿಡುಗಡೆ ಮಾಡಿರುವ ಅನುದಾನದ ಬಗ್ಗೆ, ತೆರಿಗೆ ಬಾಬ್ತಿನ ಬಗ್ಗೆ ಶ್ವೇತ ಪತ್ರದ ಮೂಲಕ ಸ್ಪಷ್ಟವಾಗಿ ಹೇಳುತ್ತಿದೆ. ಆದರೆ ಹಿರಿಯರಾದ ಆಯನೂರು ಮಂಜುನಾಥ್ರವರು ಕೆಪಿಸಿಸಿ ವಕ್ತಾರರಾಗಿ ಅವರ ಪಕ್ಷದ ನಾಯಕರನ್ನು ಮೆಚ್ಚಿಸುವುದಕ್ಕಾಗಿ ಆಧಾರ ರಹಿತ ಆರೋಪ ಮಾಡುತ್ತಿದ್ದಾರೆ.
ಸಿದ್ದರಾಮಯ್ಯ ಅವರು ರಾಷ್ಟ್ರಪತಿಗೆ, ಕೇಂದ್ರ ಹಣಕಾಸು ಸಚಿವರ ಬಗ್ಗೆ ಏಕವಚನ ಪದ ಪ್ರಯೋಗ ಮಾಡಿ ಬಾಯ್ತಪ್ಪಿನಿಂದ ಆಯಿತು ಎಂದು ಹೇಳುತ್ತಿದ್ದಾರೆ. ನಮ್ಮ ಪಕ್ಷದ ನಾಯಕರಾದ ಕೆ.ಎಸ್. ಈಶ್ವರಪ್ಪನವರು ಕಾಂಗ್ರೆಸ್ ಸಂಸದ ಡಿ.ಕೆ.ಸುರೇಶ್ ರವರು ಹೇಳಿಕೆಯನ್ನು ಖಂಡಿಸಿ ಇಂತಹ ಹೇಳಿಕೆ ನೀಡಿರುವವರ ವಿರುದ್ಧ ಸೂಕ್ತ ಕಾನೂನು ತನ್ನಿ ಎಂದು ಹೇಳಿದ್ದಾರೆಯೇ ಹೊರತು ಕಡಿ ಬಡಿ ಎಂದು ಹೇಳಿಲ್ಲ. ಆಯನೂರು ಮಂಜುನಾಥ್ ನಮ್ಮ ನಾಯಕರ ಮತ್ತು ಅಭಿವೃದ್ದಿ ಕಾರ್ಯಗಳ ಬಗ್ಗೆ ಹಗುರವಾಗಿ ಮಾತನಾಡುವುದನ್ನು ನಿಲ್ಲಿಸಬೇಕು.
ಅಡಿಕೆ ಸಂಶೋಧನಾ ಕೇಂದ್ರ, ವಿಐಎಸ್ಎಲ್ ಪುನರಾರಂಭ, ಶರಾವತಿ ಸಂತ್ರಸ್ಥರ ಸಮಸ್ಯೆ, ರಾಷ್ಟ್ರೀಯ ಹೆದ್ದಾರಿ ಅಭಿವೃದ್ದಿ, ಮೇಲ್ಸೇತುವೆ ಎಲ್ಲದರ ಬಗ್ಗೆ ಆಯನೂರು ಪ್ರಸ್ತಾಪಿಸಿದ್ದಾರೆ. ಅವರು ನಮ್ಮ ಪಕ್ಷದಲ್ಲಿದ್ದಾಗ ಈ ಅಭಿವೃದ್ಧಿ ಕಾರ್ಯದ ಬಗ್ಗೆ ಯಾವ ರೀತಿ ಮೆಚ್ಚುಗೆ ಮಾತುಗಳನ್ನು ಆಡಿದ್ದಾರೆಂಬುದು ಎಲ್ಲರಿಗೂ ತಿಳಿದಿರುವ ಸಂಗತಿ. ಶಿವಮೊಗ್ಗದ ಮೂರು ಭದ್ರಾವತಿಯ ಒಂದು ಮೇಲ್ಸೇತುವೆಯನ್ನು ಒಬ್ಬನೇ ಗುತ್ತಿಗೆದಾರ ನಿರ್ಮಾಣ ಮಾಡುತ್ತಿದ್ದಾರೆ. ಭದ್ರಾವತಿಯ ಮೇಲ್ಸೇತುವೆ ನಿಧಾನವಾಗಿ ನಡೆದಿದೆ. ಇದರ ಬಗ್ಗೆ ಕ್ಷುಲ್ಲಕವಾಗಿ ಮಾತನಾಡಿದ್ದಾರೆ. ಇದು ಖಂಡನೀಯ.
ಫ್ಲೈಓವರ್ ಹೋಗುವ ಕಡೆಯಲ್ಲ ಸಂಸದರ ಆಸ್ತಿ ಇದೆ ಎಂಬ ಆರೋಪಿಸಿದ್ದಾರೆ. ಸವಳಂಗ ರಸ್ತೆಯಲ್ಲಿ ನಮ್ಮ ಅಪ್ಪನ ಆಸ್ತಿ ಇಲ್ಲ. ಸಾಗರ ರಸ್ತೆಯಲ್ಲಿ ಆಯನೂರು ಮಂಜುನಾಥ್ ಫಾರ್ಮ್ ಹೌಸ್ ಇದೆ. ಆಯನೂರು ಮಂಜುನಾಥ್ ನಮ್ಮ ಪಕ್ಷದ ಕಡೆ ಬೆರಳು ಮಾಡಿ ತೋರಿಸುವುದು ಬಿಡಬೇಕು. ಯಾವ ಸಂದರ್ಭದಲ್ಲಿ ಉತ್ತರ ಕೊಡಬೇಕು ಉತ್ತರ ಕೊಡುತ್ತೇವೆ. ಮಧು ಬಂಗಾರಪ್ಪ ಸಹ ಬಿಚ್ಚಿಡುತ್ತೇನೆ ಅನ್ನುತ್ತಾರೆ. ಸಮಯ ಬಂದಾಗ ನಾವು ಬಿಚ್ಚಿಡುತ್ತೇವೆ. ಶಿವಮೊಗ್ಗ-ಶಿಕಾರಿಪುರ ರಸ್ತೆಯಲ್ಲಿ ಎರಡು ಟೋಲ್ ಆಗುತ್ತಿದೆ. ಕಾಂಗ್ರೆಸ್ ಟೋಲ್ ಹಾಕಿ ಹಣ ವಸೂಲಿ ಮಾಡಲು ಹೊರಟಿದೆ. ಟೋಲ್ ಆಗುತ್ತಿರೋದನ್ನು ನಾವು ವಿರೋಧಿಸುತ್ತೇವೆ ಎಂದರು.
ವಿಐಎಸ್ಎಲ್ ಪುನರ್ ಅಭಿವೃದ್ಧಿಗೊಳಿಸುವ ಸಲುವಾಗಿ ಯಡಿಯೂರಪ್ಪನವರು ಈ ವರ್ಷದ ಜನವರಿ 13ರಂದು ಅಮಿತ್ ಷಾ ರವರಿಗೆ ಪತ್ರ ಬರೆದಿದ್ದಾರೆ. ಇದಕ್ಕೆ ಅಮಿತ್ ಶಾ ಅವರು ಈ ತಿಂಗಳ 2ರಂದು ಕೇಂದ್ರ ಸಚಿವರಾದ ಜ್ಯೋತಿರಾಧಿತ್ಯ ಸಿಂಧ್ಯಾರವರಿಗೆ ಪತ್ರ ಬರೆದು ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ ಇದು ವಿಐಎಸ್ಎಲ್ ಪುನರಾರಂಭವಾಗುವ ವಿಶ್ವಾಸ ಮೂಡಿಸಿದೆ. ಇದ್ಯಾವುದನ್ನೂ ಅರಿಯದೇ ಆಯನೂರು ಮಂಜುನಾಥ್ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಪಕ್ಷದ ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್, ಎಸ್.ಎಸ್.ಜ್ಯೋತಿಪ್ರಕಾಶ್, ರಮೇಶ್, ಶಿವರಾಜ್, ಮಾಲತೇಶ್, ಅಣ್ಣಪ್ಪ ಇತರರಿದ್ದರು.
ಇದನ್ನೂ ಓದಿ – ‘ಯಡಿಯೂರಪ್ಪ ವಿರುದ್ಧ ದೂರು ಕೊಟ್ಟವರಾರು? ರಾಜ್ಯಪಾಲರನ್ನು ಭೇಟಿಯಾಗಿದ್ಯಾರು? ನೋಟು ಎಣಿಸುವ ಯಂತ್ರ ಇಟ್ಟುಕೊಂಡವರಾರು?’